ನವದೆಹಲಿ:ಸಾಮಾಜಿಕ ಜಾಲತಾಣಗಳನ್ನು ಬಿಟ್ಟು ಬದುಕುವುದೇ ಕಷ್ಟ ಎಂಬಂಥ ಸ್ಥಿತಿ ಇಂದಿನದ್ದು. ಎಷ್ಟೋ ಯುವಕರು ಜಾಲತಾಣಗಳನ್ನು ಚಟವಾಗಿಸಿಕೊಂಡರೆ, ಇನ್ನು ಕೆಲವರು ಇದರಿಂದಲೇ ದುಡ್ಡು ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಇಲ್ಲೊಬ್ಬ ಭಾರತೀಯ ಯುವಕ, ಇದೇ ಜಾಲತಾಣದಲ್ಲಿ 40 ಲಕ್ಷ ರೂಪಾಯಿ ಗೆದ್ದಿದ್ದಾನೆ!
ಅಷ್ಟಕ್ಕೂ ಈ ಯುವಕ ಮಾಡಿದ್ದೇನೆಂದರೆ, ಇನ್​ಸ್ಟಾಗ್ರಾಮ್​ನಲ್ಲಿ ಇರುವ ತಪ್ಪನ್ನು ಕಂಡುಹಿಡಿದದ್ದು! ಜನರು ಸುಲಭದಲ್ಲಿ ಇನ್​ಸ್ಟಾಗ್ರಾಮ್ ಹ್ಯಾಕ್​ ಮಾಡಲು ನೆರವಾಗುವಂಥ ಲೋಪ (ಬಗ್​) ಕಂಡುಹಿಡಿದ ಜೈಪುರದ ವಿದ್ಯಾರ್ಥಿ ನೀರಜ್ ಶರ್ಮಾ ಅವರಿಗೆ ಈ ಬಹುಮಾನ ದಕ್ಕಿದೆ.
ಇನ್​ಸ್ಟಾಗ್ರಾಮ್​ನಲ್ಲಿ ಲಾಗಿನ್ ಮತ್ತು ಪಾಸ್​ವರ್ಡ್​ ಇಲ್ಲದೆ ಯಾವುದೇ ಬಳಕೆದಾರರ ಖಾತೆಯಲ್ಲಿ ಥಂಬ್‌ನೇಲ್​ಗಳನ್ನು ಬದಲಾಯಿಸುವ ಅವಕಾಶ ಇತ್ತು. ಈ ಲೋಪವನ್ನು ನೀರಜ್​ ಶರ್ಮಾ ಕಂಡುಹಿಡಿದಿದ್ದಾರೆ. ದೋಷದ ಬಗ್ಗೆ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್​ಗೆ ಮಾಹಿತಿ ನೀಡಿದರು. ಈ ಬಗ್ಗೆ ವಿಚಾರಣೆ ಮಾಡಿದಾಗ ಇದರಲ್ಲಿ ಸತ್ಯಾಂಶ ಇದೆ ಎನ್ನುವುದು ತಿಳಿದಿದೆ. ಕೋಟ್ಯಂತರ ಬಳಕೆದಾರರ ಇನ್​ಸ್ಟಾಗ್ರಾಮ್ ಖಾತೆ ಹ್ಯಾಕ್​ ಆಗುವ ಸಾಧ್ಯತೆಯನ್ನು ಯುವಕ ತಡೆಹಿಡಿದ ಕಾರಣದಿಂದ ಬಹುಮಾನ ನೀಡಲಾಗಿದೆ.
ಈ ಬಗ್ಗೆ ನೀರಜ್​ ಮಾತನಾಡಿದ್ದು, “ಇನ್‌ಸ್ಟಾಗ್ರಾಮ್ ಖಾತೆಯ ಬಗ್ಗೆ ಸಂದೇಹ ಬಂದಿತ್ತು. ಕಳೆದ ವರ್ಷದ ಡಿಸೆಂಬರ್​ನಲ್ಲಿ ನನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ದೋಷವನ್ನು ಹುಡುಕಲು ಪ್ರಾರಂಭಿಸಿದೆ. ಸಾಕಷ್ಟು ಕಠಿಣ ಪರಿಶ್ರಮದ ನಂತರ, ಜನವರಿ 31ರ ಬೆಳಗ್ಗೆ, ಇದು ನನಗೆ ಅರ್ಥವಾಯಿತು. ಈ ತಪ್ಪಿನ ಬಗ್ಗೆ ಫೇಸ್‌ಬುಕ್​ಗೆ ವರದಿ ಕಳುಹಿಸಿದೆ ಮತ್ತು ಮೂರು ದಿನಗಳ ನಂತರ ಅವರಿಂದ ಉತ್ತರವನ್ನು ಸ್ವೀಕರಿಸಿದೆ. ಅವರು ಮೊದಲು ನನಗೆ ಡೆಮೊ ಹಂಚಿಕೊಳ್ಳಲು ಕೇಳಿದರು, ನಂತರ ಅವರಿಗೆ ನಾನು ಹೇಳುತ್ತಿರುವುದು ಸತ್ಯ ಎಂದು ತಿಳಿಯಿತು” ಎಂದಿದ್ದಾರೆ.
ಮೊದಲಿಗೆ ಫೇಸ್​ಬುಕ್​ ಅವರಿಗೆ 45 ಸಾವಿರ ಡಾಲರ್​ (ಸುಮಾರು 36 ಲಕ್ಷ ರೂ) ಬಹುಮಾನ ಘೋಷಿಸಿತ್ತು. ಆದರೆ ಬಹುಮಾನ ನೀಡಲು ವಿಳಂಬವಾದ ಕಾರಣದಿಂದ ಹೆಚ್ಚುವರಿಯಾಗಿ 4500 ಡಾಲರ್ (ಸುಮಾರು 4 ಲಕ್ಷ ರೂಪಾಯಿ) ನೀಡಿದೆ.(ಏಜೆನ್ಸೀಸ್​)
ಗುಂಡು ಹಾಕಿಕೊಂಡು ವಿಮಾನ ಹತ್ತಿದ್ರಾ ಪಂಜಾಬ್​ ಸಿಎಂ? ಕೆಳಗಿಳಿಸಿದ ಸಿಬ್ಬಂದಿ- ರಾಜಕೀಯದಲ್ಲಿ ಭಾರಿ ಚರ್ಚೆ
ಮಗು ದತ್ತುಪಡೆಯ ಹೊರಟಿದ್ದ ಮಾಜಿ ಸಚಿವ, ನಟಿ ! ಜೈಲಲ್ಲಿರೋ ಜೋಡಿಯ ರಹಸ್ಯ ಇಡಿಯಿಂದ ಬಯಲು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + seventeen =
Remember me
