ಗುಂಟೂರು (ಆಂಧ್ರಪ್ರದೇಶ):ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್​ಆರ್​ ಕಾಂಗ್ರೆಸ್​​ ಪಕ್ಷದಲ್ಲಿ ಕುತೂಹಲದ ಬೆಳವಣಿಗೆ ನಡೆದಿದೆ. ಪಕ್ಷದ ಗೌರವಾಧ್ಯಕ್ಷೆ ಸ್ಥಾನಕ್ಕೆ ಮುಖ್ಯಮಂತ್ರಿ ವೈ.ಎಸ್​.ಜಗನ್​ಮೋಹನ್​ ರೆಡ್ಡಿ ಅವರ ತಾಯಿ ವೈ.ಎಸ್.ವಿಜಯಮ್ಮ ಘೋಷಿಸಿದ್ದಾರೆ. ಗುಂಟೂರು ಜಿಲ್ಲೆಯ ಚಿನಕಾಕಣಿಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.
ಕುತೂಹಲದ ಸಂಗತಿ ಏನೆಂದರೆ, ಮಗನ ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವ ಅವರು ಮಗಳ ಪರವಾಗಿ ನಿಂತಿದ್ದಾರೆ. ಅವರ ಪುತ್ರಿ, ಜಗನ್​ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಹೊಸ ಪಕ್ಷ ಕಟ್ಟಿದ್ದು, ಆಕೆಯ ಜತೆ ತಾವು ನಿಲ್ಲುವುದಾಗಿ ವಿಜಯಮ್ಮ ಹೇಳಿದ್ದಾರೆ.
ಯಾರಿಗೂ ಯಾವುದೇ ಅಭ್ಯಂತರ ಉಂಟಾಗಬಾರದು ಎಂದು ನಾನು ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದೇನೆ. ಇದಕ್ಕಾಗಿ ನನ್ನನ್ನು ಕ್ಷಮಿಸಿ ಎಂದಿರುವ ವಿಜಯಮ್ಮ, ದಿ.ವೈ.ಎಸ್​.ರಾಜಶೇಖರ ರೆಡ್ಡಿ ಪತ್ನಿಯಾಗಿ ಮತ್ತು ಶರ್ಮಿಳಾ ತಾಯಿಯಾಗಿ ನಾನು ತೆಲಂಗಾಣದಲ್ಲಿ ಹೊಸ ಪಕ್ಷದ ಪರವಾಗಿ ನಿಲ್ಲುವ ಅವಶ್ಯಕತೆ ಇದೆ ಎಂದಿದ್ದಾರೆ.
ಮಗಳ ಹೊಸ ಪಕ್ಷದ ಪರವಾಗಿ ನಿಂತಿದ್ದರೂ, ಮಗ ಮತ್ತು ಮಗಳು ಬೇರೆ ಬೇರೆಯಾಗಿರುವುದಕ್ಕೆ ನೋವು ತೋಡಿಕೊಂಡಿರುವ ವಿಜಯಮ್ಮಾ, ಜಗನ್​ ಮತ್ತು ಶರ್ಮಿಳಾ ಬೇರೆ – ಬೇರೆ ಪಕ್ಷಗಳು ಮತ್ತು ರಾಜ್ಯಗಳನ್ನು ಪ್ರತಿನಿಧಿಸುವ ಅನಿರ್ವಾಯತೆ ಯಾಕೆ ಬಂದಿದೆ ಎನ್ನುವುದು ನನಗೆ ಗೊತ್ತಿಲ್ಲ. ಅದು ಆ ದೇವರಿಗೆ ಗೊತ್ತು. ಆದರೆ ಒಂದು ಮಾತು ಹೇಳಬಲ್ಲೆ. ಕಷ್ಟದಲ್ಲಿದ್ದಾಗ ನಾನು ಜಗನ್​ ಜತೆಗಿದ್ದೆ, ಸಂತೋಷವಾಗಿದ್ದಲೂ ನಾನು ಆತನ ಜತೆಗಿದ್ದರೆ ನನ್ನ ಮಗಳು ಶರ್ಮಿಳಾಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇದು ನನ್ನ ಮನಸಾಕ್ಷಿಗೆ ಒಪ್ಪುವುದಿಲ್ಲ ಎಂದು ವಿಜಯಮ್ಮ ಹೇಳಿದ್ದಾರೆ.
‘ಕಷ್ಟ ನನ್ನದು, ಲಾಭ ಅವರದ್ದು… ಆಸ್ತಿ ಬಂದ ಮೇಲೆ ದೂರ ಮಾಡಿದ್ರು- ಕೆಲ್ಸ ಮಾಡಿಸಿ​ಕೊಂಡು ಯಾಮಾರಿಸಿದ್ರು’

ಗುರೂಜಿ ಹತ್ಯೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಶಿಫ್ಟ್​: ಮೃತಪಟ್ಟ ಮೊಮ್ಮಗನಿಂದಾಗಿ ಉಳಿದಿತ್ತು ಜೀವ!

ಕಾಲ್​ ಸೆಂಟರ್​ ಬೆಂಗಳೂರಿನಲ್ಲಿ, ಬಕರಾಗಳು ಅಮೆರಿಕದಲ್ಲಿ! ಕೋಟಿ ಕೋಟಿ ಲೂಟಿ ಮಾಡ್ತಿದ್ದ ಖದೀಮರು ಅಂದರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
