ನವದೆಹಲಿ:ಜೂಜಿಗೆ ಪ್ರೋತ್ಸಾಹ ನೀಡುವುದು, ಜನರಿಗೆ ಏನೇನೋ ಬೇಡದ ಆಫರ್​ಗಳ ಆಮಿಷ ಒಡ್ಡುವುದು ಇತ್ಯಾದಿ ಮಾಡಿ ಗೂಗಲ್​ ನಿಯಮ ಉಲ್ಲಂಘನೆ ಮಾಡಿರುವ ಕಾರಣ ಈಚೆಗಷ್ಟೇ ಕಿಡಿ ಕಾರಿದ್ದ ಗೂಗಲ್​ ಸಂಸ್ಥೆ, ತನ್ನ ಪ್ಲೇಸ್ಟೋರ್​ನಿಂದ ಪೇಟಿಎಂ ಆ್ಯಪ್​ ಕಿತ್ತುಹಾಕಿ ಬುದ್ಧಿ ಕಲಿಸಿತ್ತು.
ಆದರೆ ಇಂಥ ಕಠಿಣ ನಿರ್ಧಾರವನ್ನು ಗೂಗಲ್​ ತೆಗೆದುಕೊಂಡಿದ್ದರೂ, ಇದೀಗ ಅದೇ ಹಾದಿಯನ್ನು ಹಿಡಿದಿದೆ ಸ್ವಿಗ್ಗಿ ಹಾಗೂ ಜೊಮಾಟೊ. ಕೂತಲ್ಲಿಯೇ ಆಹಾರ ತರಿಸಿಕೊಂಡು ತಿನ್ನುವ ಚಟವುಳ್ಳವರಿಗೆ ಅನುಕೂಲ ಕಲ್ಪಿಸುತ್ತಿರುವ ಈ ಕಂಪೆನಿಗಳಿಗೆ ಗೂಗಲ್​ ಕೆಲವೊಂದು ನಿಯಮಗಳನ್ನು ಒಡ್ಡಿದ್ದು, ಅದನ್ನು ಮೀರಿರುವ ಆರೋಪ ಎದುರಿಸುತ್ತಿವೆ.
ಆಫರ್​ ನೀಡುವುದು, ಗಿಫ್ಟ್​ ವೋಚರ್​ ನೀಡುವ ಮೂಲಕ ಗ್ರಾಹಕರಿಗೆ ಮಂಕುಬೂದಿ ಎರೆಚುವ ಕೆಲಸವನ್ನು ಮಾಡಬೇಡಿ ಎಂದು ಈಗಾಗಲೇ ಅನೇಕ ಆ್ಯಪ್ ಆಧಾರಿತ ಕಂಪೆನಿ​ಗಳಿಗೆ ಗೂಗಲ್​ ಹೇಳಿದೆ. ಅದೇ ರೀತಿ ಈ ಎರಡು ಆಹಾರ ಸಂಸ್ಥೆಗಳಿಗೂ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ:ದಾಖಲೆ ಬರೆದ ಉತ್ತರ ಪ್ರದೇಶ: ಒಂದು ಕೋಟಿ ಜನರಿಗೆ ಕೋವಿಡ್​ ಪರೀಕ್ಷೆ
ಆದರೆ ಇವುಗಳನ್ನು ಮೀರಿ ಕೂಪನ್ ಕೋಡ್, ಆಫರ್, ಗಿಫ್ಟ್​ ವೋಚರ್ ನೀಡುವ ಮೂಲಕ ಸ್ವಿಗ್ಗಿ ಮತ್ತು ಜೊಮಾಟೊ ಕಂಪೆನಿಗಳು ಗ್ರಾಹಕರನ್ನು ಆಕರ್ಷಿಸುವ ಕೆಲಸ ಮಾಡುತ್ತಿದೆ ಎನ್ನುವುದು ಗೂಗಲ್​ ಸಂಸ್ಥೆ ಆರೋಪ. ಈ ಹಿನ್ನೆಲೆಯಲ್ಲಿ ಈ ಎರಡೂ ಕಂಪೆನಿಗಳಿಗೆ ಗೂಗಲ್​ ನೋಟಿಸ್​ ಜಾರಿಗೊಳಿಸಿದೆ. ಇವೆರಡೂ ಆ್ಯಪ್‌ ಆಧಾರಿತ ಕಂಪನಿಗಳು ತನ್ನ ಪ್ಲೇ ಸ್ಟೋರ್‌ನ ನಿಯಮಾವಳಿಗಳನ್ನು ಪಾಲಿಸಿಲ್ಲ ಎಂದು ಗೂಗಲ್‌ ಆರೋಪಿಸಿದೆ.
ಆದರೆ ಈ ಆರೋಪವನ್ನು ಜೊಮಾಟೋ ನಿರಾಕರಿಸಿದ್ದು, ಗೂಗಲ್‌ ಪ್ಲೇಸ್ಟೋರ್‌ನ ನಿಯಮಗಳನ್ನು ತಾನು ಉಲ್ಲಂಘಿಸಿಲ್ಲ ಎಂದು ಸ್ಪಷ್ಟನೆ ನೀಡಿದೆ. ಈ ಬಗ್ಗೆ ಸದ್ಯ ಗೂಗಲ್​ ಮುಂದಿನ ಪ್ರಕ್ರಿಯೆ ನಡೆಸುತ್ತಿದೆ.
ಗಾಂಧಿ, ಕಸ್ತೂರಬಾ ವೇಷ ತೊಟ್ಟು ಕೋವಿಡ್​ ಪರೀಕ್ಷೆಗೆ ಬಂದ ಪುಟಾಣಿಗಳು

ದಾಖಲೆ ಬರೆದ ಉತ್ತರ ಪ್ರದೇಶ: ಒಂದು ಕೋಟಿ ಜನರಿಗೆ ಕೋವಿಡ್​ ಪರೀಕ್ಷೆ

ಚೀನಿಯರ ಎದೆನಡುಗಿಸಲು ಸಜ್ಜುಗೊಂಡಿದೆ ‘ನಿರ್ಭಯ್‌’ ಸಬ್‌ಸಾನಿಕ್‌ ಕ್ಷಿಪಣಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + eighteen =
Remember me
