ತಿರುವನಂತಪುರ:ತಿರುವಾಂಕೂರು ದೇವಸ್ವ ಮಂಡಳಿ ಹಾಗೂ ಶಬರಿಮಲೆ ದೇಗುಲದ ಮುಖ್ಯ ತಂತ್ರಿ ಕಾಂತರಾರು ಮಹೇಶ್​ ಮೋಹನಾರು ಅವರೊಂದಿಗೆ ಸಭೆ ನಡೆಸಿದ ಕೇರಳ ಸರ್ಕಾರ, ಶಬರಿಮಲೆ ದೇಗುಲದ ಪ್ರವೇಶವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡಿದೆ. ಇದಲ್ಲದೇ, ಇದೇ ತಿಂಗಳ 19ರಂದು ನಡೆಯಬೇಕಿದ್ದ ಉತ್ಸವವನ್ನು ರದ್ದುಗೊಳಿಸಿದೆ.
ಮುಜರಾಯಿ ಸಚಿವ ಕಡಕಂಪಳ್ಳಿ ಸುರೇಂದ್ರನ್​ ನೇತೃತ್ವದಲ್ಲಿ, ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ 14ರಂದು ಆರಂಭಗೊಳ್ಳಬೇಕಿದ್ದ ದೇಗುಲ ಪ್ರವೇಶ ಮುಂದೂಡಿದಂತಾಗಿದೆ.
ಇದನ್ನೂ ಓದಿ;ಖಾಲಿ ಕ್ರೀಡಾಂಗಣಗಳಲ್ಲಿ ನಡೆಯಲಿದೆ ಐಪಿಎಲ್​; ರಾಜ್ಯ ಕ್ರಿಕೆಟ್​ ಮಂಡಳಿಗಳಿಗೆ ಗಂಗೂಲಿ ಪತ್ರ
ದೇಗುಲಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದನ್ನು ಮುಖ್ಯ ತಂತ್ರಿ ವಿರೋಧಿಸಿದ್ದರು. ಜತೆಗೆ, ಬಿಜೆಪಿ ಕೂಡ ಇದಕ್ಕೆ ಬೆಂಬಲ ನೀಡಿತ್ತು. ಮುಖ್ಯ ತಂತ್ರಿಗಳ ಅಭಿಪ್ರಾಯಕ್ಕೆ ಸರ್ಕಾರ ಮನ್ನಣೆ ನೀಡಬೇಕೆಂದು ಒತ್ತಾಯಿಸಿತ್ತು.
ಈ ನಡುವೆ, ಮುಜರಾಯಿ ಆಯುಕ್ತರು ದೇಗುಲವನ್ನು ತೆರೆಯುವ ಬಗ್ಗೆ ಸಿಎಂ ಸಭೆಗೂ ಮುನ್ನ ಹಾಗೂ ನಂತರ ತನ್ನೊಂದಿಗೆ ಚರ್ಚಿಸಿದ್ದರು. ಅಲ್ಲದೇ, ದೇವಸ್ವಂ ಮಂಡಳಿ ಏಕಪಕ್ಷೀಯವಾಗಿ ಈ ನಿರ್ಧಾರ ಕೈಗೊಂಡಿಲ್ಲ ಎಂದು ದೇಗುಲದ ಮುಖ್ಯ ಅರ್ಚಕ ಮಹೇಶ್​ ಮೋಹನಾರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ;ಮಹಿಳೆಯರಿಗಿನ್ನು ಹದಿನೆಂಟಲ್ಲ, ಮದುವೆ ವಯಸ್ಸು 21…!
ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದ ದೃಷ್ಟಿಯನ್ನು ಮುಖ್ಯವಾಗಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಜೂನ್​ 15ರಿಂದ ಮತ್ತೊಮ್ಮೆ ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್​ ; ಇಲ್ಲಿದೆ ಫ್ಯಾಕ್ಟ್​ಚೆಕ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − four =
Remember me
