ಶಬರಿಮಲೆ ಸ್ವಾಮಿ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸ ಬೇಕೆ, ಬೇಡವೇ ಎಂಬ ವಿಚಾರದಲ್ಲಿ ಸುಪ್ರೀಂಕೋರ್ಟ್​ನಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.ಧಾರ್ಮಿಕ ಆಚರಣೆಯ ಪ್ರಕಾರ ಮಹಿಳೆಯರಿಗೆ ಪ್ರವೇಶ ನಿರಾಕರಿಸಿದರೆ, ಕೆಲವರು ಇದನ್ನು ವಿರೋಧಿಸಿ ಸುಪ್ರೀಂನ ಮೆಟ್ಟಿಲೇರಿದ್ದರು. ಈ ಬಗ್ಗೆ 2018 ಸೆಪ್ಟೆಂಬರ್​ 28ರಂದು ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಒಪ್ಪಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದೇಗುಲ ಪ್ರವೇಶಕ್ಕೆ ಬಂದ ಹೆಣ್ಣುಮಕ್ಕಳಿಗೆ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.ನಂತರ ಈ ತೀರ್ಪನ್ನು ಪ್ರಶ್ನಿಸಿ ಮತ್ತೆ ಮೇಲ್ಮನವಿ ಸಲ್ಲಿಸಲಾಗಿದೆ. ದೇಗುಲ ಪ್ರವೇಶಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧದ ಒಟ್ಟು 60 ಅರ್ಜಿಗಳು ಸಲ್ಲಿಕೆಯಾಗಿದ್ದು ಅವುಗಳ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರೊಂದಿಗೆ ನ್ಯಾಯಮೂರ್ತಿಗಳಾದ ಭಾನುಮತಿ, ಅಶೋಕ್​ ಭೂಷಣ್​, ಎಲ್​. ನಾಗೇಶ್ವರರಾವ್​, ಎಂ.ಎಂ. ಶಂತನು ಗೌಡರ್​, ಎಸ್.ಎ. ನಜೀರ್​, ಆರ್​.ಎಸ್. ರೆಡ್ಡಿ, ಬಿ.ಆರ್​. ಗವಾಯಿ ಮತ್ತು ಸೂರ್ಯಕಾಂತ್​ ಉಪಸ್ಥಿತರಿದ್ದಾರೆ.
11.56:ವಿವಿಧ ಧರ್ಮಗಳಲ್ಲಿನ ಮಹಿಳೆ ಬಗ್ಗೆ ತಾರತಮ್ಯದ ಬಗ್ಗೆ ಮೂರು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್​ ಹೇಳಿತು. ಶಬರಿ ಮಲೆ ಪ್ರಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗೆಹರಿಸಲು ನಾಲ್ಕು ಹಿರಿಯ ವಕೀಲರ ಸಭೆ ಕರೆಯಲು ಸೂಚಿಸಿದೆ.
11.27:ಮುಂದಿನ ವಿಚಾರಣೆಯಲ್ಲಿ ಇಸ್ಲಾಂ, ಪಾರ್ಸಿ ಮತ್ತು ದಾವೂಡಿ ಬೋರ ಜನಾಂಗದ ಅರ್ಜಿಗಳನ್ನು ಶಬರಿ ಮಲೆ ಅರ್ಜಿಯ ಜತೆಗೆ ಪರಿಗಣಿಸಲಾಗುವುದು ಎಂದು ತಿಳಿಸಿದ ಕೋರ್ಟ್​.
10.48:ಈ ಮೊದಲು ನೀಡಿದ ಅರ್ಜಿಗಳ ಪರಿಶೀಲನೆ ಬದಲಿಗೆ, ನವೆಂಬರ್​ 14ರಂದು ನೀಡಿದ ಆದೇಶವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ಆರಂಭಿಸಿದ ಪೀಠ.
10.38:ಪ್ರಕರಣದ ವಿಚಾರಣೆಗಾಗಿ ನ್ಯಾಯಮೂರ್ತಿಗಳ ಆಗಮನ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರೊಂದಿಗೆ ಒಂಭತ್ತು ನ್ಯಾಯಮೂರ್ತಿಗಳುಳ್ಳ ಪೀಠದಲ್ಲಿ 60 ಅರ್ಜಿಗಳ ವಿಚಾರಣೆ ಆರಂಭ.
09.05:2018 ಸೆಪ್ಟೆಂಬರ್​ 28ರಂದು ನೀಡಿದ ತೀರ್ಪಿನಲ್ಲಿ ಶಬರಿ ಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಒಪ್ಪಿಗೆ ನೀಡಲಾಗಿತ್ತು.
08.33:ಜನವರಿ 6ರಂದು ವಿಚಾರಣೆ ಸಂದರ್ಭದಲ್ಲಿ ಮಹಿಳೆಯರು ದೇಗುಲ ಪ್ರವೇಶಿಸುವ ಧಾರ್ಮಿಕ ಪದ್ಧತಿಯನ್ನು ತಡೆಯುವ ಮತ್ತು ಇದಕ್ಕೆ ಸಾಂವಿಧಾನಿಕ ಮನ್ನಣೆ ನೀಡುವ ಬಗ್ಗೆ ಮಾಹಿತಿ ಪಡೆದಿತ್ತು. ಇದನ್ನು ಉನ್ನತ ಪೀಠದ ಗಮನಕ್ಕೆ ತರಲಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
