ನವದೆಹಲಿ: ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿ ದಾವೆಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಸೋಮವಾರ ನಡೆಸಿದ್ದು, ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿ ಮಹಿಳೆಯರಿಗೆ ತಾರತಮ್ಯವಾಗುತ್ತಿರುವ ವಿಚಾರ ಬಹುವಾಗಿ ಕಾಡಿದ್ದು, ಈ ಬಗ್ಗೆ 9 ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ನ್ಯಾಯ ನಿರ್ಣಯ ಮಾಡುವುದಕ್ಕೆ ಅನುವಾಗುವಂತೆ ಕಾನೂನು ಚೌಕಟ್ಟಿನ ಪ್ರಶ್ನೆಗಳನ್ನು ಸಿದ್ಧಪಡಿಸುವುದಾಗಿ ಹೇಳಿದೆ.
ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ನೇತೃತ್ವದ 9 ನ್ಯಾಯಮೂರ್ತಿಗಳ ನ್ಯಾಯಪೀಠ ಈ ವಿಚಾರ ಹೇಳಿದ್ದು, ಫೆಬ್ರವರಿ 6ರಂದು ಈ ಪ್ರಶ್ನೆಗಳನ್ನು ರೂಪಿಸಲಾಗುವುದು ಎಂದು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಮಾಹಿತಿ ನೀಡಿದೆ.
ನ್ಯಾಯಪೀಠದಲ್ಲಿ ಸಿಜೆಐ ಅವರ ಜತೆಗೆ ನ್ಯಾಯಮೂರ್ತಿಗಳಾದ ಆರ್.ಬಾನುಮತಿ, ಅಶೋಕ್ ಭೂಷಣ್, ಎಲ್​.ನಾಗೇಶ್ವರ ರಾವ್​, ಎಂ.ಎಂ.ಶಾಂತನಗೌಡರ್​, ಎಸ್​.ಎ.ನಜೀರ್​, ಆರ್.ಸುಭಾಷ್ ರೆಡ್ಡಿ, ಬಿ.ಆರ್.ಗವಾಯಿ, ಸೂರ್ಯಕಾಂತ್​ ಇದ್ದು, ಈ ಪ್ರಕರಣದ ವಿಚಾರಣೆಯನ್ನು ಇನ್ನೂ ದೊಡ್ಡ ಗಾತ್ರದ ನ್ಯಾಯಪೀಠ ಆಲಿಸಬೇಕೆ ಎಂಬುದನ್ನು ಕೂಡ ನಿರ್ಣಯಿಸಲಿದೆ ಎಂದು ಸೋಮವಾರ ಹೇಳಿದೆ.
ನಾವು ಕೇವಲ ಶಬರಿಮಲೆ ಕೇಸ್​ನ ತೀರ್ಪನ್ನು ಮರುಪರಿಶೀಲಿಸುತ್ತಿಲ್ಲ. ನಾವು ಅದಕ್ಕೂ ಹೆಚ್ಚಿನ ಕಾಳಜಿಯಿಂದ ವಿವಿಧ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಮಹಿಳೆಯರಿಗೆ ತಾರತಮ್ಯವಾಗುತ್ತಿರುವುದನ್ನು ಗಮನಿಸಿ ಸೂಕ್ತ ನ್ಯಾಯ ನಿರ್ಣಯ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಈ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನ ಪ್ರಶ್ನೆಗಳನ್ನು ರೂಪಿಸಬೇಕಾಗಿದೆ ಎಂದು ಹಿರಿಯ ನ್ಯಾಯವಾದಿಗಳಾದ ನಾರಿಮನ್​, ಸಿಬಲ್​, ದಿವಾನ್ ಮತ್ತು ದ್ವಿವೇದಿ ಅವರಿಗೆ ನ್ಯಾಯಪೀಠ ತಿಳಿಸಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + fourteen =
Remember me
