ಬೆಂಗಳೂರು:ಪ್ರತೀ ವರ್ಷವೂ ಅಯ್ಯಪ್ಪನ ದರ್ಶನವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ಶಬರಿಮಲೆಗೆ ಹರಿದು ಬರುತ್ತದೆ. ಈ ವರ್ಷ ಯಾವಾಗದಿಂದ ಅಯ್ಯಪ್ಪನ ಬಾಗಿಲು ತೆರೆಯುತ್ತದೆ ಎಂದು ಕಾತುರರಾಗಿ ಕಾಯುತ್ತಿದ್ದ ಭಕ್ತರಿಗೆ ಶುಭಸುದ್ದಿ ಇಲ್ಲಿದೆ.
ಸ್ವಾಮಿಯೇ ಶರಣಂ ಅಯ್ಯಪ್ಪ… ಸ್ವಾಮಿಯೇ ಶರಣಂ ಅಯ್ಯಪ್ಪ…. ಎಂದು ಹೇಳುತ್ತಾ ಆನಂದ ನೆಮ್ಮದಿ ಪಡೆಯುವ ಭಕ್ತರಿಗೆ ಇದು ಸಂತಸದ ಸುದ್ದಿ. ಈ ವರ್ಷ ನ.17ರಿಂದ ಅಂದರೆ ನಾಳೆಯಿಂದ ಅಯ್ಯಪ್ಪನ ದರ್ಶನಕ್ಕಾಗಿ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳಬಹುದು.
ಪ್ರತೀ ವರ್ಷವೂ ಜನರು ಅಯ್ಯಪ್ಪನ ಅನುಗ್ರಹ ಪಡೆಯಲು ಶಬರಿಮಲೆಯ ಏಳು ಬೆಟ್ಟಗಳ ನಡುವೆ ಕಠಿಣ ಪ್ರಯಾಣವನ್ನು ಮಾಡುತ್ತಾರೆ. ಈ ಏಳು ಬೆಟ್ಟಗಳ ಚಾರಣ ಮಾಡಿದರೆ ಎಲ್ಲ ಕಷ್ಟಗಳೂ ಪರಿಹಾರ ಆಗುತ್ತೆ ಎನ್ನುವ ನಂಬಿಕೆ ಭಕ್ತರದ್ದು. ಈ ಸಂದರ್ಭ ಜೋರಾಗಿ ಅಯ್ಯಪ್ಪ ಸ್ವಾಮಿಯ ಜಪ ಮಾಡುತ್ತಾ ಇಲ್ಲವೆ ಮಂತ್ರಗಳನ್ನು ಹೇಳುತ್ತಾ ಪ್ರಯಾಣ ಮುಂದುವರೆಸುತ್ತಾರೆ.
ವಿಶ್ವಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ನಾಳೆಯಿಂದ ತೆರೆಯಲಿದೆ. ಸಮುದ್ರಮಟ್ಟದಿಂದ ಸುಮಾರು 914 ಮೀಟರ್ ಎತ್ತರದಲ್ಲಿರುವ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಲಕ್ಷಾಂತರ ಜನ ಆಗಮಿಸುತ್ತಾರೆ. ಈ ವರ್ಷ ಶಬರಿಮಲೆ ದೇವಾಲಯದ ತೀರ್ಥಯಾತ್ರಾ ಕಾಲ ಈ ವರ್ಷ ಡಿ.27 ರಂದು ಮಂಡಲ ಪೂಜೆಯಿಂದ ಪ್ರಾರಂಭವಾಗಿ ಜ.14 2023ಕ್ಕೆ ಕೊನೆಗೊಳ್ಳಲಿದೆ. ಈ ಸಮಯವನ್ನು ಮಂಡಲ ಪೂಜಾ ಸಮಯ ಎಂದು ಕರೆಯಲಾಗುತ್ತದೆ. ಇದು ಒಟ್ಟು 41 ದಿನಗಳ ಕಾಲ ಇರಲಿದೆ.
ಅಯ್ಯಪ್ಪನ ದರ್ಶನ ಸುಮ್ಮನೆ ಆಗಲ್ಲ, ಅದಿಕ್ಕೆ ಬೇಕು ಕಠಿಣ ವ್ರತ:
ಈ ಮಂಡಲ ಪೂಜೆಯ ಸಮಯದಲ್ಲಿ ಕಟ್ಟುನಿಟ್ಟಾದ ವ್ರತವನ್ನು ಪಾಲಿಸುವುದು ವಾಡಿಕೆ. ಈ ಸಮಯದಲ್ಲಿ ನಿತ್ಯವೂ ಕಪ್ಪು ಧೋತಿ ಧರಿಸುವ ವ್ರತಧಾರಿಗಳು ವಿಷೇಶವಾದ ರುದ್ರಾಕ್ಷಿಯನ್ನು ಧರಿಸಿಕೊಂಡಿರುತ್ತಾರೆ. ಇವರು ನಿತ್ಯವೂ ಸೂರ್ಯೋದಕ್ಕಿಂತ ಮೊದಲೇ ಎದ್ದು ತಣ್ಣಿರು ಸ್ನಾನ ಮಾಡಬೇಕು. ಈ ಸಮಯದಲ್ಲಿ ಕಠಿಣ ಉಪವಾಸ ವ್ರತವನ್ನು ಕೈಗೊಳ್ಳಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಕಠಿಣ ಬ್ರಹ್ಮಚರ್ಯವನ್ನು ಪಾಲಿಸಬೇಕಾಗುತ್ತದೆ. ಅಂದರೆ ಮಾಂಸಾಹಾರ, ಮದ್ಯ ಸೇವನೆ, ಲೈಂಗಿಕ ಆಸಕ್ತಿ ಇದೆಲ್ಲ ಯಾವುದೂ ಇರಬಾರದು. ಈ 41 ದಿನಗಳ ಸಂದರ್ಭ ಭಕ್ತರು ತಮ್ಮ ಆಹಾರ ತಾವೇ ತಯಾರಿಸಿಕೊಳ್ಳುತ್ತಾರೆ. ಯಾರೊಂದಿಗೂ ಜಗಳಕ್ಕೆ ಇಳಿಯಬಾರದು ಎಂದು ಎಲ್ಲರನ್ನೂ ಸ್ವಾಮಿ ಎಂದೇ ಸಂಬೋಧಿಸುತ್ತಾರೆ.
ಮಕರ ಜ್ಯೋತಿ:
ಮಕರ ಸಂಕ್ರಾಂತಿಯ ರಾತ್ರಿ ಶಬರಿಮಲೆ ದೇಗುಲದ ಬಳಿ ನಿಂತಾಗ ದೂರದಲ್ಲಿ ದಿವ್ಯ ಬೆಳಕೊಂದು ಭಕ್ತರಿಗೆ ಕಾಣಿಸುತ್ತದೆ. ದಟ್ಟವಾದ ಕತ್ತಲಿನ ನಡುವೆಯೂ ಪ್ರಕಾಶಮಾನವಾಗಿ ಕಾಣಿಸಿಕೊಲ್ಳುವ ಈ ಬೆಳಕಿನೊಡನೆ ಶಬ್ದವೂ ಕೇಳಿಸಿಕೊಳ್ಳುತ್ತದೆ ಎಂದು ಭಕ್ತರು ಹೇಳುತ್ತಾರೆ. ಮಕರ ಜ್ಯೋತಿ ಕಾಣಿಸಿಕೊಂಡ ಕೂಡಲೆ ಅಯ್ಯಪ್ಪ ಸ್ವಾಮಿಗೆ ಆಭರಣಗಳನ್ನು ತೊಡಿಸಲಾಗುತ್ತದೆ. ತಕ್ಷಣವೇ ಆ ವಿಶೇಷ ಜ್ಯೋತಿ ನಿಗೂಢವಾಗಿ ಕಣ್ಮರೆ ಆಗುತ್ತದೆ. ಶಬರಿಮಲೆ ದೇಗುಲದ ಎದುರಿನ ಬೆಟ್ಟದಲ್ಲಿ ಈ ಜ್ಯೋತಿ ಮೂರು ಬಾರಿ ಪ್ರಕಾಶಿಸಿ ಭಕ್ತರಿಗೆ ಆಶೀರ್ವಾದ ಮಾಡಿ ಕಣ್ಮರೆ ಆಗಿ ಬಿಡುತ್ತದೆ.
ಮಂಡಲ ಪೂಜೆ ಮುಗಿಸಿದ ನಂತರ ಒಬ್ಬ ವ್ಯಕ್ತಿ ತನಗೆ ಬೇಕಾದುದನ್ನು ಪಡೆಯುತ್ತಾನೆ ಎಂದು ಹೇಳಲಾಗುತ್ತದೆ. ಮಂಡಲ ಪೂಜೆಯ ಆಚರಣೆಗಳು 41 ದಿನಗಳ ತಪಸ್ಸನ್ನು ಸೂಚಿಸುತ್ತದೆ. ಈ ಕಠಿಣ ವ್ರತ ಆತ್ಮವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಈ ವ್ರತವನ್ನು ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಪಾಲಿಸಬಹುದು. 1-9 ವರ್ಷ ವಯಸ್ಸಿನ ಹೆಣ್ಣುಮಕ್ಕಳು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಮಾತ್ರವೇ ಮಂಡಲ ಪೂಜೆ ವ್ರತವನ್ನು ಮಾಡಲು ಅನುಮತಿ ನೀಡಲಾಗುತ್ತದೆ. ಹೀಗೆ ವ್ರತವನ್ನು ಕೈಗೊಳ್ಳುವ ಮಹಿಳೆಯರನ್ನು ‘ಮಾಲಿಕಾಪುರಂ’ ಎಂದು ಕರೆಯಲಾಗುತ್ತದೆ.
ಈ ಬಾರಿಯ ಪೂಜೆಯ ವೇಳಾ ಪಟ್ಟಿ ಹೀಗಿದೆ:
1 ಮಕರವಿಳಕ್ಕು ಪ್ರಾರಂಭ- 14-01-20222 ತಿಂಗಳ ಪೂಜೆ (ಕುಂಭ) ಪ್ರಾರಂಭ: 12-02-2022 ಮುಕ್ತಾಯ: 17-02-20223 ತಿಂಗಳ ಪೂಜೆ (ಮೀನ) ಪ್ರಾರಂಭ: 14-03-2022 ಮುಕ್ತಾಯ:19-03-20224 ತಿರು ಉತ್ಸವ ಪ್ರಾರಂಭ: 08-03-2022 ಮುಕ್ತಾಯ: 19-03-20225 ಕೋಡಿಯೆತ್ತು ಪ್ರಾರಂಭ: 09-03-20226 ಪೇನ್ಕುಣಿ ಉತ್ರ ಮತ್ತು ಆರಟ್ಟು ಪ್ರಾರಂಭ: 18-03-20227 ವಿಶು ಹಬ್ಬ ಪ್ರಾರಂಭ: 10-04-2022 ಮುಕ್ತಾಯ: 18-04-20228 ವಿಶು 15-04-20229 ತಿಂಗಳ ಪೂಜೆ (ಮೇಷ) 14-05-2022 19-05-202210 ಮೂರ್ತಿ ಪ್ರತಿಷ್ಠಾಪನೆ ಪ್ರಾರಂಭ: 08-06-2022 ಮುಕ್ತಾಯ: 09-06-202211 ತಿಂಗಳ ಪೂಜೆ (ಮಿಥುನ) ಪ್ರಾರಂಭ: 14-06-2022 ಮುಕ್ತಾಯ:19-06-202212 ತಿಂಗಳ ಪೂಜೆ (ಕಟಕ) ಪ್ರಾರಂಭ: 16-07-2022 ಮುಕ್ತಾಯ: 21-07-202213 ತಿಂಗಳ ಪೂಜೆ (ಸಿಂಹ) ಪ್ರಾರಂಭ: 16-08-2022 ಮುಕ್ತಾಯ: 21-08-202214 ಓಣಂ ಪ್ರಾರಂಭ: 06-09-2022 ಮುಕ್ತಾಯ: 10-09-202215 ತಿಂಗಳ ಪೂಜೆ (ಕನ್ಯಾ) ಪ್ರಾರಂಭ: 16-09-2022 ಮುಕ್ತಾಯ: 21-09-202216 ತಿಂಗಳ ಪೂಜೆ (ತುಲಾ) ಪ್ರಾರಂಭ: 17-10-2022 ಮುಕ್ತಾಯ: 22-10-202217 ಶ್ರೀ ಚಿತ್ರಾ ಅಟ್ಟತಿರುನಾಳ್ ಪ್ರಾರಂಭ:24-10-2022 ಮುಕ್ತಾಯ: 25-10-202218 ಮಂಡಲ ಪೂಜೆ ಪ್ರಾರಂಭ: 16-11-2022 ಮುಕ್ತಾಯ: 27-12-202219 ಮಂಡಲ ಪೂಜೆ: 27-12-202220 ತಿರುನಡ 30-12-2022
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
