ಉತ್ತರಪ್ರದೇಶ:ಬಹುತೇಕ ಜನರಿಗೆ ಸೀಮಾ ಹೈದರ್ ಯಾರೆಂಬುದು ನೆನಪಿದೆ. ಯಾಕಂದರೆ ಕೆಲವು ತಿಂಗಳುಗಳ ಹಿಂದೆಯಷ್ಟೇ ಈ ಹೆಸರು ಮಾಧ್ಯಮ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು ಹಾಗೂ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ:ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ ಮೈಸೂರಿನ ರಾಮಲಲ್ಲಾ ಮೂರ್ತಿ
ಪಾಕಿಸ್ತಾನದಲ್ಲಿದ್ದ ಈ ಮಹಿಳೆ, ಭಾರತದ ಯುವಕ ಸಚಿನ್ ಎಂಬಾತನನ್ನು ಪ್ರೀತಿಸಿ, ಆತನಿಗೋಸ್ಕರ ಭಾರತದ ಗಡಿಯನ್ನು ದಾಟಿ ಬಂದಿದ್ದೇ ರೋಚಕ! ತನ್ನ ನಾಲ್ಕು ಮಕ್ಕಳೊಂದಿಗೆ ಪ್ರೇಮಿ ಸಚಿನ್‌ನೊಂದಿಗೆ ಜೀವಿಸಲು ಭಾರತಕ್ಕೆ ಬಂದ ಸೀಮಾ ಹೈದರ್, ಸಚಿನ್​ನನ್ನು ವಿವಾಹವಾಗಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣಗಳನ್ನು ಸುತ್ತವರೆದಿದೆ.
ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡುವ ಮೂಲಕ ತಂದೆ-ತಾಯಿಯಾಗಲಿರುವ ಸೀಮ್​ ಹೈದರ್​ ಮತ್ತು ಸಚಿನ್​, ಅತೀವ ಸಂತಸದಿಂದ ನಿರೀಕ್ಷಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸೀಮಾ ಮಾತನಾಡಿದ್ದು, 2024ರ ವರ್ಷ ನಮಗೆ ಒಳ್ಳೆಯ ಸುದ್ದಿಯನ್ನು ತರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚೆನ್ನಕೇಶವ ದೇಗುಲ ಯುನೆಸ್ಕೋ ಪಟ್ಟಿಗೆ ಸೇರಲು ಜಕ್ಕಣಚಾರಿ ಅವರ ವಾಸ್ತುಶಿಲ್ಪವೇ ಕಾರಣ:ಡಿಸಿ. ಸಿ.ಸತ್ಯಭಾಮಾ
ಇವರಿಬ್ಬರ ಲವ್​ಸ್ಟೋರಿ ಸಂಭವಿಸಿದ್ದೇಗೆ?ಪಾಕಿಸ್ತಾನದಲ್ಲಿ ವಾಸವಿದ್ದ ಸೀಮಾ ಹೈದರ್ 2019ರಲ್ಲಿ ಆನ್‌ಲೈನ್ ಗೇಮ್ ಪಬ್​ಜಿಯ ಮೂಲಕ ಸಚಿನ್ ಅವರನ್ನು ಮೊದಲ ಬಾರಿಗೆ ಭೇಟಿಯಾದರು. ಸೀಮಾ ಮತ್ತು ಸಚಿನ್ ಅವರು ನಡುವೆ ಆಗಾಗ್ಗೆ ಸಂಭಾಷಣೆಗಳು ನಡೆಯುತ್ತಿತ್ತು. ಇಬ್ಬರಲ್ಲೂ ಸ್ನೇಹ ಬೆಳೆದು, ನಂತರ ಸ್ನೇಹ ಪ್ರೀತಿಗೆ ತಿರುಗಿ ಅಂತಿಮವಾಗಿ ಸೀಮಾ ಸಚಿನ್​ಗಾಗಿ 2023ರಲ್ಲಿ ಭಾರತಕ್ಕೆ ಬರುವಂತೆ ಆಯಿತು,(ಏಜೆನ್ಸೀಸ್).
ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಬಗ್ಗೆ ಜನರ ಅಭಿಪ್ರಾಯ ಕೋರಿದ ಪ್ರಧಾನಿ; ತಿಳಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 8 =
Remember me
