ನವದೆಹಲಿ: ಕಾಂಗ್ರೆಸ್ ಹೈಕಮಾಂಡ್​ ಭೇಟಿ ಮಾಡಲು ತಮ್ಮ ಆಪ್ತ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಸಚಿನ್​ ಪೈಲಟ್​​ಗೆ ಸೋನಿಯಾಗಾಂಧಿವರೊಂದಿಗೆ ಆಗಲಿ, ರಾಹುಲ್​ ಗಾಂಧಿಯವರೊಂದಿಗೆ ಆಗಲಿ ಮಾತುಕತೆಗೆ ಅವಕಾಶ ಸಿಕ್ಕಿಲ್ಲ.
ಬದಲಿಗೆ, ಇಂದೇ ಜೈಪುರಕ್ಕೆ ತೆರಳಿ, ಅಶೋಕ್​ ಗೆಹ್ಲೋಟ್ ನೇತೃತ್ವದಲ್ಲೇ ಕೆಲಸ ಮಾಡಿ. ಜು.13ರಂದು ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಪಾಲ್ಗೊಳ್ಳಿ ಎಂದು ಸಚಿನ್​ ಪೈಲಟ್​ಗೆ ಹೈಕಮಾಂಡ್​ ಸೂಚನೆ ನೀಡಿದೆ.  ಅದಾದ ಕೆಲವೇ ಹೊತ್ತಲ್ಲಿ ಸಚಿನ್​ ಪೈಲಟ್ ಕೂಡ, ತಾವು ಜೈಪುರಕ್ಕೆ ಹೋಗುವುದಿಲ್ಲ. ನಾಳಿನ ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.
ಆದರೆ ಇದೀಗ ಇನ್ನೊಂದು ಮಾಹಿತಿ ಲಭ್ಯವಾಗಿದ್ದು, ಸಚಿನ್​ ಪೈಲಟ್​ ಅವರು ಇಂದು ಸಂಜೆ ದೆಹಲಿಯಲ್ಲಿ ತಮ್ಮ ಮಾಜಿ ಸಹೋದ್ಯೋಗಿ, ಸ್ನೇಹಿತ, ಈಗಿನ ಬಿಜೆಪಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.ಸಚಿನ್​ ಪೈಲಟ್​ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರು ಸುಮಾರು 40 ನಿಮಷ ಮಾತುಕತೆ ನಡೆಸಿದ್ದಾರೆ. ಈ ವೇಳೆ ರಾಜಸ್ಥಾನದ ರಾಜಕೀಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.ಇದನ್ನೂ ಓದಿ:ಸಚಿನ್​ ಪೈಲಟ್​ ಜತೆ ದೆಹಲಿಗೆ ಹೋಗಿ, ಈಗ ಉಲ್ಟಾ ಹೊಡೆದ ಶಾಸಕರು; ನಾವು ಕಾಂಗ್ರೆಸ್​ ಸೈನಿಕರು ಎಂದರು…!
ಜ್ಯೋತಿರಾದಿತ್ಯ ಸಿಂಧಿಯಾ ಅವರು ಇಂದು ಸಂಜೆ ಟ್ವೀಟ್ ಮಾಡಿ, ಕಾಂಗ್ರೆಸ್​​ನಲ್ಲಿ ಸಚಿನ್​ ಪೈಲಟ್​ಗೆ ಒಳ್ಳೆಯ ಸ್ಥಾನ ಕೊಡುತ್ತಿಲ್ಲ. ಆ ಪಕ್ಷದಲ್ಲಿ ಸಾಮರ್ಥ್ಯಕ್ಕೆ, ಬುದ್ಧಿವಂತಿಕೆಗೆ ಬೆಲೆ ಇಲ್ಲ ಎಂದಿದ್ದರು. ಅಷ್ಟೇ ಅಲ್ಲ, ಸಚಿನ್​ ಪೈಲಟ್​ ಪರಿಸ್ಥಿತಿ ನೋಡಿದರೆ ತುಂಬ ನೋವಾಗುತ್ತದೆ ಎಂದೂ ಹೇಳಿದ್ದರು.
ಇವರಿಬ್ಬರ ಭೇಟಿಯ ಬಳಿಕವೇ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್​ ಮಾಡಿದ್ದಾರೆ ಎಂದು ಅವರ ಆಪ್ತ ವಲಯಗಳಿಂದಲೇ ಮಾಹಿತಿ ಸಿಕ್ಕಿದೆ. (ಏಜೆನ್ಸೀಸ್​)
ಸೋನಿಯಾ ಗಾಂಧಿ ಭೇಟಿ ಸಾಧ್ಯವಾಗಿಲ್ಲ…ನಾನು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳೋದಿಲ್ಲ: ಸಚಿನ್​ ಪೈಲಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
