ಜೈಪುರ:ರಾಜಸ್ಥಾನದ ಡೆಪ್ಯೂಟಿ ಸಿಎಂ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಸಚಿನ್​ ಪೈಲಟ್​ ಅವರ ವಿರುದ್ಧ ಕಾಂಗ್ರೆಸ್​ ಶಾಸಕ ಗಿರಿರಾಜ್​ ಸಿಂಗ್​ ಮಾಲಿಂಗಾ ಅವರು ಕುದುರೆ ವ್ಯಾಪಾರದ ಆರೋಪ ಹೊರೆಸಿದ್ದರು.ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ವೋಟ್​ ಮಾಡಿದರೆ 35 ಕೋಟಿ ರೂ.ನೀಡುವುದಾಗಿ ಆಫರ್​ ನೀಡಿದ್ದರು ಎಂದು ಮಾಲಿಂಗಾ ಹೇಳಿದ್ದರು.
ಈಗ ಸಚಿನ್​ ಪೈಲಟ್​ ಅವರು ಕಾಂಗ್ರೆಸ್ ಶಾಸಕ ಗಿರಿರಾಜ್​ ಸಿಂಗ್​ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.
ಸುಳ್ಳು ಹಾಗೂ ಹುರುಳಿಲ್ಲದ ಆರೋಪ ಮಾಡಿರುವ ಎಂಎಲ್​ಎ ಗಿರಿರಾಜ್ ಸಿಂಗ್​ ಅವರು ಇನ್ನು ಏಳು ದಿನಗಳ ಒಳಗೆ ಲಿಖಿತ ಕ್ಷಮಾಪಣೆ ಪತ್ರದೊಂದಿಗೆ 1 ರೂ.ಪಾವತಿಸಬೇಕು. ಕ್ಷಮೆ ಕೇಳಿದ ಪತ್ರವನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಬೇಕು ಎಂದು ಸಚಿನ್ ಪೈಲಟ್​ ಕಳಿಸಿದ ನೋಟಿಸ್​ನಲ್ಲಿ ಸೂಚಿಸಲಾಗಿದೆ.ಇದನ್ನೂ ಓದಿ:ನಟ ದರ್ಶನ್​, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ವಿರುದ್ಧ ಹೈಕೋರ್ಟ್​ಗೆ ದೂರು!
ಒಂದೊಮ್ಮೆ ನೋಟಿಸ್​ನಲ್ಲಿ ಹೇಳಲಾಗಿದ್ದನ್ನು ಗಿರಿರಾಜ್​ ಅವರು ಕಾರ್ಯರೂಪಕ್ಕೆ ತರದೆ ಇದ್ದಲ್ಲಿ, ಅವರ ವಿರುದ್ಧ ಕ್ರಿಮಿನಲ್​ ಮತ್ತು ಸಿವಿಲ್​ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.
ಗಿರಿರಾಜ್​ ಸಿಂಗ್ ಮಾಲಿಂಗಾ ಅವರು ಮೊನ್ನೆ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಚಿನ್​ ಪೈಲಟ್​, ಇಂಥ ಆರೋಪಗಳನ್ನು ಇನ್ನು ಮುಂದೆ ನನ್ನ ವಿರುದ್ಧ ಪದೇಪದೆ ಮಾಡಲಾಗುತ್ತದೆ. ಆದರೆ ಇದು ಸುಳ್ಳು ಆರೋಪ. ನಾನು ಗಿರಿರಾಜ್​ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.(ಏಜೆನ್ಸೀಸ್​)
ರಾಜ್ಯದಲ್ಲಿ ಹೊಸ ದಾಖಲೆ ಬರೆದ ಸೋಂಕಿತರ ಸಂಖ್ಯೆ; ಕೋವಿಡ್​ ಸಾವು ನಿಯಂತ್ರಣ; ಹೊಸ ಪ್ರಕರಣಕ್ಕಿಲ್ಲ ಕಡಿವಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
