ಜೈಪುರ: ರಾಜಸ್ಥಾನ ಸರ್ಕಾರದಿಂದ ರೆಬಲ್​ ಆಗಿ, ಪಕ್ಷದಿಂದಲೇ ಅಂತರ ಕಾಯ್ದುಕೊಂಡಿರುವ ಸಚಿನ್​ ಪೈಲಟ್​ ಹಾಗೂ ಅವರ ಬೆಂಬಲಿಗ ಶಾಸಕರಿಗೆ ಸ್ಪೀಕರ್ ಅನರ್ಹತೆಯ ನೋಟಿಸ್​ ಕಳಿಸಿದ್ದಾರೆ.
ಅದರ ಬೆನ್ನಲ್ಲೇ ಒಂದು ಆಸಕ್ತಿದಾಯಕ ಘಟನೆ ನಡೆದಿದೆ. ಸಚಿನ್ ಪೈಲಟ್​ ಅವರು ಅನರ್ಹತೆ ವಿರುದ್ಧ ಕಾನೂನು ಹೋರಾಟ ನಡೆಸಲು, ಪಕ್ಷದ ಹಿರಿಯ ಮುಖಂಡ, ಹಿರಿಯ ನ್ಯಾಯವಾದಿ ಅಭಿಷೇಕ್​ ಮನು ಸಿಂಘ್ವಿ ಅವರನ್ನು ಫೋನ್​ ಮೂಲಕ ಸಂಪರ್ಕಿಸಿದ್ದಾರೆ.ಇದನ್ನೂ ಓದಿ:VIDEO| ನಿತ್ಯಾ ಮೆನನ್ ಅಭಿನಯದ ವೆಬ್​ ಸೀರಿಸ್​ ದೃಶ್ಯ ಲೀಕ್​: ಲೆಸ್ಬಿಯನ್​ ಲಿಪ್​ಲಾಕ್​ ವಿಡಿಯೋ ವೈರಲ್!
ಈ ಬಗ್ಗೆ ಮಾಧ್ಯಮವೊಂದಕ್ಕೆ ಅಭಿಷೇಕ್​ ಮನು ಸಿಂಘ್ವಿ ಅವರೇ ಮಾಹಿತಿ ನೀಡಿದ್ದಾರೆ. ಎರಡು ದಿನಗಳ ಹಿಂದೆ ಸಚಿನ್​ ಪೈಲಟ್​ ನನಗೆ ಫೋನ್ ಮಾಡಿದರು. ನನಗೆ ಅವರು ಉತ್ತಮ ಸ್ನೇಹಿತ. ನನಗೂ ಅವರೆಂದರೆ ತುಂಬ ಅಭಿಮಾನ. ಈ ಹೋರಾಟದಲ್ಲಿ ಕಾನೂನು ಸಲಹೆ ಕೇಳಿದರು. ಆದರೆ ನಾನು ಹೇಳಿದೆ, ಕ್ಷಮಿಸಿ, ನಾನೀಗ ಕಾನೂನು ವಿಷಯಗಳ ಬಗ್ಗೆ ನಿಮಗೆ ಸಲಹೆ, ಸೂಚನೆ ಕೊಡುವುದು ಗೌರವವಲ್ಲ. ಯಾಕೆಂದರೆ ಈಗಾಗಲೇ ನಿಮ್ಮ ಎದುರು ಬಣಕ್ಕೆ ನಿಮ್ಮದೇ ವಿಚಾರದಲ್ಲಿ ಕಾನೂನು ಸಲಹೆ ನೀಡುತ್ತಿದ್ದೇನೆ ಎಂದು ಹೇಳಿದೆ. ಇದಾದ ಬಳಿಕ ಇಬ್ಬರೂ ದೊಡ್ಡದಾಗಿ ನಕ್ಕಿದೆವು ಎಂದು ಸಿಂಘ್ವಿ ಹೇಳಿದ್ದಾರೆ.
ಸಚಿನ್​ ಪೈಲಟ್​ ಹಾಗೂ ಅವರ ಬೆಂಬಲಿಗ 18 ಶಾಸಕರು ಸ್ಪೀಕರ್​ ಕಳಿಸಿದ ಅನರ್ಹತಾ ನೋಟಿಸ್​ ವಿರುದ್ಧ ರಾಜಸ್ಥಾನ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. (ಏಜೆನ್ಸೀಸ್​)
ಮೆಡಿಕಲ್​ ಶಾಪ್​ಗೆ ಬಂದು ಅಲ್ಲಿಯೇ ಮೃತನಾದ ವ್ಯಕ್ತಿ; 6 ತಾಸಾದರೂ ಹೆಣ ಎತ್ತಲು ಒಬ್ಬರೂ ಬರಲಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
