ಜೈಪುರ:ರಾಜಸ್ಥಾನದಲ್ಲಿ ಕಾಂಗ್ರೆಸ್​ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಸಾಗಿದೆ. ಎರಡನೇ ದಿನದ ಸಭೆಗೂ ಡಿಸಿಎಂ ಸಚಿನ್​ ಪೈಲಟ್​ ಹಾಗೂ ಆತ ಬೆಂಬಲಿಗರೂ ಹಾಜರಾಗಿಲ್ಲ. ಇದು ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡಿದೆ.
ಜೈಪುರ್​ನ ಐಷಾರಾಮಿ ರೆಸಾರ್ಟ್​ನಲ್ಲಿ ನಡೆಯುತ್ತಿರುವ ಕಾಂಗ್ರೆಸ್​ ಶಾಸಕರ ಸಭೆಯಲ್ಲಿ 104 ಶಾಸಕರು ಹಾಜರಾಗಿದ್ದಾರೆ ಎಂದು ಹೇಳಲಾಗಿದೆ. ಬಹುಮತ ಹಾಜರುಪಡಿಸಲು 101 ಶಾಸಕರು ಸಾಕು. ಹೀಗಾಗಿ ಬಂಡಾಯವೆದ್ದಿರುವ ಸಚಿನ್​ ಪೈಲಟ್ ಹಾಗೂ ಬೆಂಬಲಿತ ಶಾಸಕರನ್ನು ಪಕ್ಷದಿಂದ ಕಿತ್ತೊಗೆಯಿರಿ ಎಂಬ ಕೂಗು ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಸಚಿನ್​ ಪೈಲಟ್​ನನ್ನು ಡಿಸಿಎಂ ಸ್ಥಾನ ಹಾಗೂ ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂದು ಕಾಂಗ್ರೆಸ್​ ವಕ್ತಾರ ರಣದೀಪ್​ ಸುರ್ಜೇವಾಲಾ ಹೇಳಿದ್ದಾರೆ.
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಕೂಡ ಸಚಿನ್​ ಪೈಲಟ್​ ಜತೆ ಮಾತನಾಡಿ ಬಂಡಾಯ ಶಮನಕ್ಕೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಹೀಗಿದ್ದರೂ ಸಭೆಗೆ ಪೈಲಟ್​ ಹಾಜರಾಗಿಲ್ಲ. ಇದು ಸಹಜವಾಗಿಯೇ ಉಳಿದ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಅವರನ್ನು ಡಿಎಸಿಂ ಸ್ಥಾನದಿಮದ ಕೆಳಗಿಳಿಸಲಾಗಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ.
ಸಚಿನ್​ ಪೈಲಟ್​ ಹಾಗೂ 19 ಇತರ ಶಾಸಕರು ಸಭೆಯಿಂದ ದೂರವುಳಿದಿದ್ದಾರೆ ಎಮದೇ ಹೇಳಲಾಗಿತ್ತು. ಸಂಖ್ಯಾಬಲದಲ್ಲಿ ಸಿಎಂ ಅಶೋಕ್​ ಗೆಹ್ಲೋಟ್​ ಮುಂದಿದ್ದಾರೆ. ಆದರೆ, ಗೆಹ್ಲೋಟ್​ಗೆ ಬಹುಮತ ಸಾಧಿಸುವಷ್ಟು ಶಾಸಕರ ಬೆಂಬಲವಿದ್ದರೆ, ರಾಜ್ಯಪಾಲರೆದುರು ಅದನ್ನು ಸಾಬೀತು ಪಡಿಸಲಿ ಎಂದು ಸಚಿನ್​ ಬಣದ ಶಾಸಕರು ನಿನ್ನೆಯಷ್ಟೇ ಸವಾಲು ಹಾಕಿದ್ದರು.
ಕಾಂಗ್ರೆಸ್​ ತಿಕ್ಕಾಟ ಏನೇ ಇದ್ದರೂ ಅವಿಶ್ವಾಸ ನಿಣರ್ಯಕ್ಕೆ ಒತ್ತಾಯಿಸುವುದಿಲ್ಲವೆಂದು ಬಿಜೆಪಿ ಹೇಳಿದೆ. ಬಿಜೆಪಿ 72 ಶಾಸಕರನ್ನು ಹೊಂದಿದ್ದು, ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ 3 ಶಾಸಕರು ಬಿಜೆಪಿಗೆ ಬೆಂಬಲಕ್ಕಿದ್ದಾರೆ.
ಪರಿಶಿಷ್ಟರಿಗೆ ಮೀಸಲಾಗಿದ್ದ ಭೂಮಿ ಕಬಳಿಸಿದೆಯೇ ಗಾಂಧಿ ಪರಿವಾರ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
