ನವದೆಹಲಿ:ರಾಜಸ್ಥಾನ ಕಾಂಗ್ರೆಸ್​ ಸರ್ಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪಮುಖ್ಯಮಂತ್ರಿ ಸಚಿನ್​ ಪೈಲಟ್​ ಮಧ್ಯೆ ಸಣ್ಣದೊಂದು ಭಿನ್ನಮತ ಹುಟ್ಟಿದ್ದು ಗುಟ್ಟಾಗೇನೂ ಉಳಿದಿಲ್ಲ.
ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಸಚಿನ್​ ಪೈಲಟ್​ ಸ್ವಲ್ಪ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ವಜ್ರ ವ್ಯಾಪಾರಿ ರಾಜೀವ್ ಅರೋರಾ ಅವರನ್ನು ರಾಜ್ಯಸಭೆಗೆ ಕಳುಹಿಸುವ ವಿಚಾರದಲ್ಲಿ ಪೈಲಟ್​ ವಿರೋಧ ವ್ಯಕ್ತಪಡಿಸಿದ್ದರೂ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ.
ಅದರ ಹೊರತಾಗಿ ಕೂಡ ಅಲ್ಲಿ ಕೆಲವೊಂದಿಷ್ಟು ಅಸಾಮಾಧಾನಗಳು ಬೂದಿಮುಚ್ಚಿದ ಕೆಂಡದಂತೆ ಇದೆ ಎಂದರೆ ತಪ್ಪಾಗಲಾರದು. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ ತೊರೆದಂತೆ ಮುಂದಿನ ದಿನಗಳಲ್ಲಿ ಸಚಿನ್​ ಪೈಲಟ್​ ಕೂಡ ಅದೇ ದಾರಿ ತುಳಿಯಲಿದ್ದಾರಾ? ಎಂಬ ಅನುಮಾನವೂ ಮೂಡಿದೆ.ಆದರೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ ತೊರೆದು, ಬಿಜೆಪಿ ಸೇರಿದ ಬಗ್ಗೆ ಸಚಿನ್ ಪೈಲಟ್​ ಆಡಿದ ಮಾತುಗಳನ್ನು ನೋಡಿದರೆ, ಸದ್ಯಕ್ಕೇನೋ ರಾಜಸ್ಥಾನ ಸರ್ಕಾರ ಸೇಫ್​ ಅನ್ನಿಸುತ್ತದೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಲೆಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದು ದುರ್ದೈವ. ಅವರಿಗೇನೇ ಅಸಮಾಧಾನ, ಸಮಸ್ಯೆಗಳು ಇದ್ದರೂ ಅದನ್ನು ಪಕ್ಷದೊಳಗೇ ಇದ್ದುಕೊಂಡು, ಹಿರಿಯ ನಾಯಕರ ಸಹಭಾಗಿತ್ವದಲ್ಲಿ ಬಗೆಹರಿಸಿಕೊಳ್ಳಬೇಕಿತ್ತು ಎಂದು ಬುಧವಾರ ರಾತ್ರಿ ಟ್ವೀಟ್​ ಮಾಡಿದ್ದಾರೆ.
ಮಾ.10ರಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ರಾಜೀನಾಮೆ ಪತ್ರವನ್ನು ನೀಡಿದ್ದರು. ನಿನ್ನೆ ಮಾ.11ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಶಿವರಾಜ್​ ಚೌಹಾಣ್​ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಬಳಿಕ ಮಾತನಾಡಿ, ನರೇಂದ್ರ ಮೋದಿಯವನ್ನು ಹೊಗಳಿದ್ದರು. ಹಾಗೇ ಕಾಂಗ್ರೆಸ್​ನಲ್ಲಿ ಯುವನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್​)
VIDEO|ಕಾಂಗ್ರೆಸ್​ ಆಡಳಿತದ ಅವಧಿಯಲ್ಲಿ ರಾಷ್ಟ್ರದಲ್ಲಿ ಅಧಿಕ ಕೋಮು ಗಲಭೆ ನಡೆದಿವೆ: ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + twelve =
Remember me
