ಮುಂಬೈ:ಕ್ರಿಕೆಟ್‌ ಲೋಕದ ದೇವರು ಎಂದೆ ಖ್ಯಾತಿ ಗಳಿಸಿರುವ ಸಚಿನ್‌ ತೆಂಡೂಲ್ಕರ್‌ ಅವರ ತವರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಗೌರವಾರ್ಥವಾಗಿ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ.
ಕ್ರಿಕೆಟ್ ಸಂಸ್ಥೆ (ಎಂಸಿಎ) ಬುಧವಾರ ವಾಂಖೆಡೆ ಸ್ಟೇಡಿಯಂನಲ್ಲಿ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದೆ.  ನವೆಂಬರ್‌ 1ರ ಸಂಜೆ 5 ಗಂಟೆಗೆ ಸಮಾರಂಭ ನಡೆಯಲಿದೆ. ಕ್ರೀಡಾಂಗಣದ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಬಳಿ ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಈ ಪ್ರತಿಮೆಯನ್ನು ಸಚಿನ್ ಅವರ 50 ವರ್ಷಗಳ ಜೀವನದ ಸಾಧನೆಗೆ ಸಮರ್ಪಿಸಲಾಗಿದೆ.
ಇಂದು ಉದ್ಘಾಟನಾ ಸಮಾರಂಭದಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರೊಂದಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಹ ಭಾಗವಹಿಸಲಿದ್ದಾರೆ. ಎರಡು ದಶಕಗಳ ಯಶಸ್ವಿ ವೃತ್ತಿಜೀವನದ ನಂತರ, ಸಚಿನ್ ನವೆಂಬರ್ 2013 ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ತಮ್ಮ 200 ನೇ ಮತ್ತು ಅಂತಿಮ ಟೆಸ್ಟ್ ಆಡಿದರು.
ಪ್ರತಿಮೆ ನಿರ್ಮಾಣದ ಕುರಿತು ಮಾತನಾಡಿದ ತೆಂಡೂಲ್ಕರ್, ‘ನನಗೆ ತುಂಬಾ ಸಂತೋಷವಾಗಿದೆ. ನಾನು ನನ್ನ ಮೊದಲ ರಣಜಿ ಪಂದ್ಯವನ್ನು ಆಡಿದ್ದು ಇಲ್ಲಿಯೇ. ನಾನು ವೃತ್ತಿಪರ ಆಟಗಾರನಾಗುವ ಮೊದಲು, ಇಲ್ಲಿಯೇ ಕೋಚ್ ಅಚ್ರೇಕರ್ ಸರ್ ನನ್ನನ್ನು ಗದರಿಸಿದ್ದರು. ಆ ನಂತರ ನಾನು ಗಂಭೀರವಾಗಿ ಕ್ರಿಕೆಟ್​​ ಬಗ್ಗೆ ಗಮನ ಹರಿಸಿದೆ. ಇದು ನನಗೆ ಬಹಳ ವಿಶೇಷವಾದ ಸ್ಥಳವಾಗಿದೆ. ಈ ಸ್ಥಳದೊಂದಿಗೆ ನನಗೆ ವಿಶೇಷವಾದ ನೆನಪುಗಳಿವೆ. ವಾಂಖೆಡೆ ಸ್ಟೇಡಿಯಂನಲ್ಲಿ ನನ್ನ ಪ್ರತಿಮೆ ನಿರ್ಮಿಸುವುದು ದೊಡ್ಡ ವಿಚಾರ’ ಎಂದರು.
2011ರ ODI ವಿಶ್ವಕಪ್ ಫೈನಲ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದಿತ್ತು. ಇಲ್ಲಿ ಭಾರತ ಶ್ರೀಲಂಕಾವನ್ನು ಸೋಲಿಸಿ 28 ವರ್ಷಗಳ ನಂತರ ವಿಶ್ವಕಪ್ ಗೆದ್ದುಕೊಂಡಿತು. ಭಾರತ ವಿಶ್ವಕಪ್ ಗೆದ್ದ ಮೊದಲ ಆತಿಥೇಯ ತಂಡವಾಯಿತು. ತವರು ನೆಲದಲ್ಲಿ ಈ ಹಿಂದೆ ಯಾವುದೇ ತಂಡ ವಿಶ್ವಕಪ್ ಗೆದ್ದಿರಲಿಲ್ಲ. ಇದರೊಂದಿಗೆ ಸಚಿನ್ ತೆಂಡೂಲ್ಕರ್ ಅವರ ವಿಶ್ವಕಪ್ ಕನಸು ಕೂಡ ನನಸಾಗಿದೆ. ವಾಂಖೆಡೆ ಸ್ಟೇಡಿಯಂನಲ್ಲಿಯೇ ಸಚಿನ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಅಲ್ಲಿ ಅವರ ಹೆಸರಿನ ಸ್ಟ್ಯಾಂಡ್ ಇದೆ. ಸುದೀರ್ಘ ಎರಡು ದಶಕಗಳ ಯಶಸ್ವಿ ವೃತ್ತಿಜೀವನದಲ್ಲಿ ತಮ್ಮ 200ನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಮುಂಬೈಕರ್‌ 2013ರ ನವೆಂಬರ್‌ನಲ್ಲಿ ವಾಂಖೆಡೆಯಲ್ಲಿ ಆಡಿದ್ದರು.
ಕ್ರಿಕೆಟ್‌ನಲ್ಲಿ ತೆಂಡೂಲ್ಕರ್‌ ಮಾಡಿರುವ ಹಲವು ದಾಖಲೆಗಳು ಇನ್ನೂ ಬ್ರೇಕ್‌ ಆಗಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಬರೋಬ್ಬರಿ 15,921 ರನ್‌ಗಳು ಹಾಗೂ ಏಕದಿನ ಸ್ವರೂಪದಲ್ಲಿ 18,426 ರನ್‌ಗಳನ್ನು ಸಿಡಿಸಿರುವ ಸಚಿನ್ ದಾಖಲೆಗಳೂ ಇನ್ನೂ ಮುರಿಯಲು ಸಾಧ್ಯವಾಗಿಲ್ಲ.
10 years at Apple pic.twitter.com/YYQNMzCBgx
— Marcos Alonso (@malonso)October 28, 2023

ಸಚಿನ್ ಕ್ರೀಡಾಂಗಣದಲ್ಲಿ ಪ್ರತಿಮೆ ಸ್ಥಾಪಿಸಿದ ಎರಡನೇ ಭಾರತೀಯ ಕ್ರಿಕೆಟಿಗ. ಇಲ್ಲಿಯವರೆಗೆ, ಭಾರತದ ಮಾಜಿ ನಾಯಕ ಕರ್ನಲ್ ಸಿಕೆ ನಾಯ್ಡು ಅವರ ಪ್ರತಿಮೆಗಳನ್ನು ಮಾತ್ರ ಮೂರು ವಿಭಿನ್ನ ಸ್ಥಳಗಳಲ್ಲಿ ಸ್ಥಾಪಿಸಲಾಗಿದೆ. ಇವುಗಳಲ್ಲಿ ಇಂದೋರ್‌ನ ಹೋಲ್ಕರ್ ಸ್ಟೇಡಿಯಂ, ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ​​(ವಿಸಿಎ) ಸ್ಟೇಡಿಯಂ ಮತ್ತು ಆಂಧ್ರದ ವೈಎಸ್‌ಆರ್ ಸ್ಟೇಡಿಯಂ ಸೇರಿವೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಅವರ ಹೆಸರಿನ ಗೋಡೆಯೂ ಇದೆ. ಅದರ ಮೇಲೆ ಬದ್ಧತೆ, ವರ್ಗ, ಸ್ಥಿರತೆ ಎಂಬ ಮೂರು ಪದಗಳನ್ನು ಬರೆಯಲಾಗಿದೆ. ಈ ಮೂರು ಪದಗಳು ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ವಿವರಿಸುತ್ತವೆ. ದ್ರಾವಿಡ್ ಅತ್ಯುತ್ತಮ ರಕ್ಷಣಾತ್ಮಕ ಆಟಗಾರ ಎಂಬರ್ಥದ ‘ದಿ ವಾಲ್’ ಎಂಬ ಬಿರುದನ್ನು ಸಹ ಪಡೆದರು.
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:7 + two =
Remember me
