ಕರೊನಾ ಲಾಕ್​ಡೌನ್​ ಸಮಯವನ್ನು ತನ್ನ ಫ್ಯಾಮಿಲಿ ಜತೆ ಮನೆಯಲ್ಲೇ ಕಳೆಯುತ್ತಿರುವ ಭಾರತೀಯ ಕ್ರಿಕೆಟ್​ನ ಆರಾಧ್ಯ ದೈವ ಸಚಿನ್​ ತೆಂಡೂಲ್ಕರ್​ ಅವರು ಮಗಳು ಸಾರಾ ಮಾಡಿಕೊಟ್ಟ ತಿಂಡಿಯೊಂದರ ರುಚಿ ಸವಿದು ದಿಲ್​ ಖುಷ್​ ಆಗಿದ್ದಾರೆ. ಒಂದು ಪ್ಲೇಟ್​ ತುಂಬಾ ಇದ್ದ ತಿನಿಸನ್ನು ಕೇವಲ 60 ಸೆಕೆಂಡ್​ನಲ್ಲಿ ಅಂದರೆ, ಒಂದೇ ನಿಮಿಷದಲ್ಲಿ ತಿಂದು ಮುಗಿಸಿದ್ದಾರಂತೆ. ಅಂದಹಾಗೆ, ಆ ತಿಂಡಿಯಾದರೂ ಏನು ಗೊತ್ತಾ?
ತನ್ನ ಪ್ರೀತಿಯ ಅಪ್ಪನಿಗೆ ಖುದ್ದು ಮಗಳೇ ‘ಬೀಟ್​ರೂಟ್​ ಕಬಾಬ್​’ ತಯಾರಿಸಿ ಉಣಬಡಿಸಿದ್ದಾಳೆ. ಒಂದು ಪ್ಲೇಟ್​ನಲ್ಲಿ ಸುಮಾರು 8-9 ಫೀಸ್​ ಬೀಟ್ರೂಟ್​ ಕಬಾಬ್​ ಹಾಕಿ ಮಗಳು ಅಪ್ಪನ ಕೈಗೆ ಇಡುತ್ತಿದ್ದಂತೆ ಅದನ್ನೆಲ್ಲ ಖುಷಿಯಿಂದ ಒಮ್ಮೆಲೆ ತಿಂದು ಮುಗಿಸಿದ್ದಾರೆ. ಈ ಬಗ್ಗೆ ಅವರು ಬುಧವಾರ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿಮಹಿಳಾ ಪಿಎಸ್​ಐಗೆ ಬೆದರಿಕೆಯೊಡ್ಡಿದ್ರಾ ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ? ಮಂಗಳವಾರ ರಾತ್ರಿ ನಡೆದಿದ್ದೇನು?
ಸಚಿನ್​ ಬೀಟ್ರೂಟ್​ ಕಾಬಾಬ್​ ತುಂಬಿದ ತಟ್ಟೆಯನ್ನು ಹಿಡಿದಿರುವ ಮತ್ತು ಎಲ್ಲವನ್ನೂ ತಿಂದಾದ ಮೇಲೆ ಪ್ಲೇಟ್​ ಖಾಲಿ ಆಗಿರುವುದನ್ನು ಅಪ್ಪ-ಮಗಳು ತೋರಿಸುತ್ತಿರುವ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಅಪ್ಲೋಡ್​ ಮಾಡಿರುವ ತೆಂಡೂಲ್ಕರ್​, ಮಗಳು ಸಾರಾಗೆ ಧನ್ಯವಾದ ತಿಳಿಸಿದ್ದಾರೆ. ತಿನಿಸು ಬಹಳ ರುಚಿಯಾಗಿತ್ತು. ಎಲ್ಲವನ್ನೂ 60 ಸೆಂಕೆಂಡಲ್ಲಿ ತಿಂದು ಖಾಲಿ ಮಾಡಿಬಿಟ್ಟೆ ಎಂದೂ ಬರೆದುಕೊಂಡಿದ್ದಾರೆ.
ವಿಶ್ವ ಕ್ರಿಕೆಟ್​ನ ಬ್ಯಾಂಟಿಂಗ್​ ದಿಗ್ಗಜನ ಈ ಫೋಟೋಗೆ ಲಕ್ಷಾಂತರ ಲೈಕ್ಸ್, ಕಮೆಂಟ್​ಗಳು ಬರುತ್ತಿವೆ. ಇನ್ನು ಸಚಿನ್​ ಸಂತಸಕ್ಕೆ ಕಾರಣವಾದ ಮಗಳು ಸಾರಾ ತೆಂಡೂಲ್ಕರ್​ಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತಿವೆ.
https://www.instagram.com/p/B_2mdBrlPDu/

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
