ನವದೆಹಲಿ:ರಾಜಸ್ಥಾನದ ರಾಜಕೀಯ ಬೆಳವಣಿಗೆಗಳಿಂದಾಗಿ ಸಚಿನ್​ ಪೈಲಟ್​ ಈಗ ಟ್ವಿಟರ್​ನಲ್ಲಿ ಭರ್ಜರಿ ಟ್ರೆಂಡಿಂಗ್​ನಲ್ಲಿದ್ದಾರೆ. ಅವರೊಂದಿಗೆ ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡುಲ್ಕರ್​ ಕೂಡ ಟ್ರೆಂಡಿಂಗ್​ಗೆ ಬಂದಿದ್ದಾರೆ. ಆಪ್​ ಮಾಜಿ ನಾಯಕ ಅಶುತೋಷ್​ ವಿಶ್ಲೇಷಣೆಯ ವೇಳೆ ಮಾಡಿದ ಎಡವಟ್ಟು ಇದಕ್ಕೆ ಕಾರಣವಾಗಿದೆ.
ಸಚಿನ್​ ಪೈಲಟ್​ ಅವರ ರಾಜಕೀಯ ನಡೆ ಮತ್ತು ರಾಜಸ್ಥಾನದ ಬೆಳವಣಿಗೆಗಳ ಬಗ್ಗೆ ಟಿವಿ ಚಾನಲ್​ ಒಂದರಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಅಶುತೋಷ್​ ಅವರು ತಮ್ಮ ಅಭಿಪ್ರಾಯವನ್ನು ಮಣಿಸುವ ಭರದಲ್ಲಿ, ‘ಗೆಹ್ಲೋಟ್​ ಈಗ ಗತಕಾಲ. ಸಚಿನ್​ ತೆಂಡುಲ್ಕರ್​ ಭವಿಷ್ಯ’ ಎಂದು ಬಾಯ್ತಪ್ಪಿ ಹೇಳಿದ್ದರು. ಸಚಿನ್​ ಪೈಲಟ್​ ಹೆಸರು ಹೇಳುವ ಬದಲಾಗಿ ಸಚಿನ್​ ತೆಂಡುಲ್ಕರ್​ ಹೆಸರನ್ನು ಅವರು ಉಲ್ಲೇಖಿಸಿದ್ದರು. ಇದರ ಬೆನ್ನಲ್ಲೇ ಅಶುತೋಷ್​ ಬಗ್ಗೆ ಟ್ರೋಲ್​ ಶುರುವಾಗುತ್ತಿದ್ದಂತೆ ಸಚಿನ್​ ತೆಂಡುಲ್ಕರ್​ ಹೆಸರು ಕೂಡ ಟ್ರೆಂಡಿಂಗ್​ಗೆ ಬಂದಿದೆ.
ಇದನ್ನೂ ಓದಿ:ವಿಶ್ವಕಪ್​ ಗೆಲ್ಲುವವರೆಗೆ ಮದುವೆಯಾಗಲ್ಲ ಎಂದ ರಶೀದ್​ ಖಾನ್​ ಭಾರಿ ಟ್ರೋಲ್​, ಸಲ್ಮಾನ್​ ಖಾನ್​ಗೆ ಹೋಲಿಕೆ!
ಸಚಿನ್​ ತೆಂಡುಲ್ಕರ್​ ಭಾರತೀಯ ವಾಯುಸೇನೆಯಲ್ಲಿ ಗೌರವ ಹುದ್ದೆಯನ್ನು ಹೊಂದಿರುವುದನ್ನು ಅಶುತೋಷ್​ ತಪ್ಪಾಗಿ ಗ್ರಹಿಸಿ ಅವರನ್ನೂ ಪೈಲಟ್​ ಮಾಡಿದ್ದಾರೆ ಎಂದು ಜೋಕ್​ ಮಾಡಲಾಗುತ್ತಿದೆ. ಸಚಿನ್​ ಪೈಲಟ್​ ಅವರನ್ನು ಸಚಿನ್​ ತೆಂಡುಲ್ಕರ್​ ಎಂದಿರುವ ಅಶುತೋಷ್​, ಶೀಘ್ರದಲ್ಲಿಯೇ ರಾಹುಲ್​ ಗಾಂಧಿ ಅವರನ್ನು ರಾಹುಲ್​ ದ್ರಾವಿಡ್​ ಎನ್ನಲಿದ್ದಾರೆ ಎಂದೂ ಕಾಲೆಳೆಯಲಾಗಿದೆ. ನಾನು ಯಾಕೆ ಟ್ರೆಂಡಿಂಗ್​ನಲ್ಲಿದ್ದೇನೆ ಎಂದು ಈಗ ಸ್ವತಃ ಸಚಿನ್​ ತೆಂಡುಲ್ಕರ್​ ಕೂಡ ಅಚ್ಚರಿ ಪಡುತ್ತಿರಬಹುದು ಎಂದೂ ತಮಾಷೆ ಮಾಡಲಾಗಿದೆ. ಇದು ಸಚಿನ್​ ತೆಂಡುಲ್ಕರ್​ ಕಾಲ ಅಲ್ಲ, ವಿರಾಟ್​ ಕೊಹ್ಲಿ ಕಾಲ ಎಂದೂ ಕೆಲವರು ಟ್ವೀಟಿಸಿ ಟ್ರೋಲ್​ ಮಾಡಿದ್ದಾರೆ. ಅಲ್ಲದೆ ಈ ಸುದ್ದಿ ಕೇಳಿ ಸಚಿನ್​ ತೆಂಡುಲ್ಕರ್​ಗೂ ಮುಖ್ಯಮಂತ್ರಿ ಆಗುವ ಆಸೆ ಬರಬಹುದು ಎಂದು ಕಾಲೆಳೆದಿದ್ದಾರೆ.
https://twitter.com/ARanganathan72/status/1282688097348538368
Sachin Pilot as per@ashutosh83Bhttps://t.co/JX43U9SAM9pic.twitter.com/WYivsSGmSc
— The Skeptical Indian (@theskepticalind)July 13, 2020

Sachin Tendulkar: why I m in trend…Ashutosh: Don't fear I m here…for trending anyone…https://t.co/f7z6fAnnwQ
— Asif Siraj Ansari (@0786asifsiraj)July 13, 2020

Now what?Rahul Dravid next congress president?@ARanganathan72https://t.co/8sVbKYA3ap
— Satyam Borikar 🏏🏆 (@im_satyam45)July 13, 2020

Now@sachin_rtbe like:are main to CM banunga..😅https://t.co/qcACyvRj5V
— Swapnil Kashid🇮🇳 (@SwapnilKashid7)July 13, 2020

https://twitter.com/devkadev/status/1282708059295371264
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
