ಅಹಮದಾಬಾದ್​:ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಕ್ರೀಡಾಂಗಣವಾದ ಮೊಟೆರೋ ಸ್ಟೇಡಿಯಂನಲ್ಲಿ ಭಾಷಣ ಮಾಡಿದ ಡೊನಾಲ್ಡ್​ ಟ್ರಂಪ್​ ಅವರು ಕ್ರಿಕೆಟ್​ ದಂತಕತೆ ಸಚಿನ್​ ತೆಂಡೂಲ್ಕರ್​ ಹಾಗೂ ಇಂಡಿಯನ್​ ಕ್ರಿಕೆಟ್​ ಟೀಂ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಅವರ ಹೆಸರನ್ನು ಉಲ್ಲೇಖಿಸಿದರು.
ಈ ದೇಶದ ಜನರು ಅಂದಿನ ಸಚಿನ್​ ತೆಂಡೂಲ್ಕರ್​ನಿಂದ ಹಿಡಿದು ಇಂದಿನ ವಿರಾಟ್ ಕೊಹ್ಲಿಯವವರೆಗೆ, ವಿಶ್ವದ ಎಲ್ಲ ಶ್ರೇಷ್ಠ ಕ್ರಿಕೆಟ್​ ಆಟಗಾರರನ್ನೂ ಹುರಿದುಂಬಿಸುತ್ತಾರೆ. ಇದೊಂದು ಒಳ್ಳೆಯ ವಿಚಾರ ಎಂದು ಟ್ರಂಪ್​ ಹೇಳಿದರು.
ಅಮೆರಿಕ ಅಧ್ಯಕ್ಷರ ಬಾಯಲ್ಲಿ ಸಚಿನ್​ ತೆಂಡೂಲ್ಕರ್​ ಮತ್ತು ವಿರಾಟ್​ ಕೊಹ್ಲಿ ಹೆಸರು ಕೇಳುತ್ತಿದ್ದಂತೆ ನೆರೆದಿದ್ದ ಜನರು ದೊಡ್ಡದಾಗಿ ಕೂಗುವ ಮೂಲಕ ಹರ್ಷೋದ್ಘಾರ ಮಾಡಿ, ಚಪ್ಪಾಳೆ ಹೊಡೆದು ಸಂತೋಷ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೂಡ ಮುಗುಳ್ನಕ್ಕರು.
ಅತಿದೊಡ್ಡ ಕ್ರಿಕೆಟ್​ ಸ್ಟೇಡಿಯಂ ಮೊಟೆರಾ ಬಗ್ಗೆ ಮಾತನಾಡುವಾಗ ಸಚಿನ್​ ತೆಂಡೂಲ್ಕರ್​ ಹಾಗೂ ಕೊಹ್ಲಿ ಹೆಸರನ್ನು ಪ್ರಸ್ತಾಪಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
