ನವದೆಹಲಿ:ಪಾಕಿಸ್ತಾನ ಮತ್ತು ಜಮ್ಮು-ಕಾಶ್ಮೀರ ವಿಚಾರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ತಮ್ಮ ಈರ್ವರು ಸಲಹೆಗಾರರನ್ನು ಪಂಜಾಬ್​ ಪ್ರದೇಶ್​ ಕಾಂಗ್ರೆಸ್​ ಕಮಿಟಿ(ಪಿಪಿಸಿಸಿ) ಅಧ್ಯಕ್ಷ ನವಜೋತ್​ ಸಿಂಗ್​ ಸಿಧು ತಕ್ಷಣವೇ ತೆಗೆದು ಹಾಕಬೇಕೆಂದು ಹಿರಿಯ ಕಾಂಗ್ರೆಸ್​ ನಾಯಕ ಹರೀಶ್​ ರಾವತ್​ ಹೇಳಿದ್ದಾರೆ.
ಇತ್ತೀಚೆಗೆ ಸಿಧು ತಂಡ ಸೇರಿದ ಪ್ಯಾರೆ ಲಾಲ್​ ಗರ್ಗ್​​ ಮತ್ತು ಮಲ್ವಿಂದರ್​ ಮಾಲಿ ಅವರನ್ನು ಸಿಧು ಕೂಡಲೇ ವಜಾ ಮಾಡಬೇಕು. ಈ ಬಗ್ಗೆ ಸಿಧು ಕ್ರಮ ಕೈಗೊಳ್ಳದಿದ್ದರೆ ಪಕ್ಷವೇ ಅವರನ್ನು ತೆಗೆದುಹಾಕುತ್ತದೆ ಎಂದು ಎನ್​ಡಿಟಿವಿಗೆ ನೀಡಿರುವ ಸಂದರ್ಶನದಲ್ಲಿ ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿಯಾಗಿರುವ ರಾವತ್​ ಹೇಳಿದ್ದಾರೆ.
ಇದನ್ನೂ ಓದಿ:ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಗ್ಯಾಂಗ್ ರೇಪ್: ಘಟನಾ ಸ್ಥಳದಲ್ಲಿ ಸಿಕ್ಕಿದೆ 34 ಸಾಕ್ಷಿ
ಮಲ್ವಿಂದರ್​ ಮಾಲಿ ಅವರು ಇತ್ತೀಚಿನ ತಮ್ಮ ಫೇಸ್​ಬುಕ್​ ಪೋಸ್ಟ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಕಾಶ್ಮೀರವನ್ನು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು ಎನ್ನಲಾಗಿದೆ.
“ಅವರ ಹೇಳಿಕೆಗಳ ಬಗ್ಗೆ ಇಡೀ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ವಿರೋಧವಿದೆ. ಜಮ್ಮು-ಕಾಶ್ಮೀರದ ಬಗ್ಗೆ ಪಕ್ಷಕ್ಕೆ ಒಂದು ನಿಲುವಿದೆ – ಅದು ಭಾರತದ ಭಾಗ ಎಂಬ ನಿಲುವು” ಎಂದಿರುವ ರಾವತ್​, ಅವರನ್ನು ಪಕ್ಷ ನೇಮಿಸಿಲ್ಲ. ನಾವು ಸಿಧುಗೆ ಅವರನ್ನು ವಜಾ ಮಾಡಲು ಹೇಳಿದ್ದೀವಿ. ಪಕ್ಷಕ್ಕೆ ಮುಜುಗರ ತರುವಂತಹ ಜನರು ನಮಗೆ ಬೇಡ” ಎಂದಿದ್ದಾರೆ.(ಏಜೆನ್ಸೀಸ್)
ಮಹಾ ಸಿಎಂ ಉದ್ಧವ್​ ಠಾಕ್ರೆ, ಪತ್ನಿ ರಶ್ಮಿ ಠಾಕ್ರೆ ವಿರುದ್ಧ ಬಿಜೆಪಿ ನಾಯಕರ ದೂರು

ಖಾಸಗಿ ಬಸ್ಸಿನಲ್ಲಿ 30 ಸಜೀವ ಬಾಂಬ್​ಗಳು ಪತ್ತೆ!

ಬೆಳೆಯುವ ಮಕ್ಕಳಿಗೆ ಎತ್ತರವಾಗಲು ಸಹಕಾರಿ, ಈ ಸುಲಭ ಯೋಗಾಸನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
