ಚಂಡೀಗಢ:ಕೇಂದ್ರದ ಮಾಜಿ ಸಚಿವೆ ಶಿರೋಮಣಿ ಅಕಾಲಿದಳದ ನಾಯಕಿ ಹರ್​ಸಿಮ್ರತ್ ಕೌರ್ ಬಾದಲ್​ ಅವರನ್ನು ಚಂಡೀಗಢದ ಪೋಸ್ಟ್​ ಗ್ರಾಜುವೇಟ್​ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್​ ಗೆ ನಿನ್ನೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆ ಕಂಡು ಬಂದ ಕಾರಣ ತತ್​ಕ್ಷಣವೇ ಆಸ್ಪತ್ರೆಗೆ ಅವರು ದಾಖಲಾಗಿದ್ದರು.
ನೋವಲ್ ಕರೋನಾ ವೈರಸ್​ ಟೆಸ್ಟ್​ಗೂ ಅವರನ್ನು ಒಳಪಡಿಸಲಾಗಿದ್ದು, ಫಲಿತಾಂಶ ನೆಗೆಟಿವ್ ಬಂದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಎಮರ್ಜೆನ್ಸಿ ವಾರ್ಡ್​ನ ಐಸೋಲೇಷನ್ ರೂಮ್​ನಲ್ಲಿ ಉಳಿಸಲಾಗಿತ್ತು. ಅವರ ಆರೋಗ್ಯ ಸ್ಥಿರವಾಗಿ ಕಂಡುಬಂದ ಕಾರಣ, ಉಸಿರಾಟದ ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡಿರುವ ವೈದ್ಯರು ಅವರನ್ನು ಬಳಿಕ ಕೂಡಲೇ ಬಿಡುಗಡೆ ಮಾಡಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಸಮಾಜವಾದಿ ಆರ್ಥಿಕ ನೀತಿ ಪ್ರತಿಪಾದಕ ಅಂಬೇಡ್ಕರ್; ಇಂದು ಪರಿನಿರ್ವಾಣ ದಿನ
ಹರ್​ಸಿಮ್ರತ್ ಕೌರ್ ಅವರು ಕೃಷಿ ಮಸೂದೆ ವಿರೋಧಿಸಿ ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಕೃಷಿ ಮಸೂದೆ ವಿರೋಧಿಸಿ ಶಿರೋಮಣಿ ಅಕಾಲಿದಳ ಎನ್​ಡಿಎ ಮೈತ್ರಿಕೂಟದಿಂದ ಹೊರಬಿದ್ದಿದೆ. (ಏಜೆನ್ಸೀಸ್)
VIDEO| ಸುರಕ್ಷತಾ ಕ್ರಮ ಬಳಸದೇ ಬರಿಗೈಯಲ್ಲಿ 690 ಅಡಿ ಎತ್ತರದ ಕಟ್ಟಡವೇರಿದ ಸಾಹಸಿಗನಿಗೆ ಬಹುಪರಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 4 =
Remember me
