ಕೊಯಂಬತ್ತೂರು:543 ಲೋಕಸಭೆ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಇಂದು (ಏಪ್ರಿಲ್ 19) ಮೊದಲ ಹಂತದ ಮತದಾನ ನಡೆಯುತ್ತಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನವೂ ಶಾಂತ ರೀತಿಯಿಂದ ನಡೆಯುತ್ತಿದ್ದು ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಇನ್ನು ಲೋಕಸಭೆ ಚುನಾವಣೆ ನಿಮಿತ್ತ ಇಶಾ ಫೌಂಡೇಶನ್​ನ ಸಂಸ್ಥಾಪಕರಾದ ವಾಸುದೇವ ಅವರು ತಮಿಳುನಾಡಿದ ಕೊಯಂಬತ್ತೂರಿನಲ್ಲಿ ಮತ ಚಲಾಯಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸದ್ಗುರು ಗುಣಮುಖರಾಗುತ್ತಿದ್ದಾರೆ.
ಏಪ್ರಿಲ್​ 19ರಂದು ಬೆಳಗ್ಗೆ 07 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 06ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
#LokSabhaElections2024pic.twitter.com/js7xPgVCnU
ಇದನ್ನೂ ಓದಿ:ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿಶೇಷ ದಾಖಲೆಗಳನ್ನು ಬರೆದ ರೋಹಿತ್​ ಶರ್ಮಾ; ಏನದು?
1)ಅರುಣಾಚಲಪ್ರದೇಶ (2):ಅರುಣಾಚಲ ಪೂರ್ವ, ಅರುಣಾಚಲ ಪಶ್ಚಿಮ
2)ಅಸ್ಸಾಂ (5):ಕಾಜಿರಂಗ, ಸೋನಿತ್‌ಪುರ್, ಲಖಿಂಪುರ, ದಿಬ್ರುಗಢ್, ಜೋರ್ಹತ್
3)ಬಿಹಾರ (4):ಔರಂಗಾಬಾದ್, ಗಯಾ, ನಾವಡಾ, ಜಮುಯಿ
4)ಛತ್ತೀಸ್‌ಗಢ (1):ಬಸ್ತಾರ್ (ST)
5)ಮಧ್ಯಪ್ರದೇಶ (6):ಛಿಂದ್ವಾರಾ, ಸಿಧಿ, ಶಹದೋಲ್, ಜಬಲ್ಪುರ್, ಮಂಡ್ಲಾ, ಬಾಲಾಘಾಟ್
6)ಮಹಾರಾಷ್ಟ್ರ (5):ನಾಗ್ಪುರ್, ಗಡ್ಚಿರೋಲಿ-ಚಿಮೂರ್ (ಎಸ್ಟಿ), ಭಂಡಾರಾ-ಗೊಂಡಿಯಾ, ಚಂದ್ರಾಪುರ್, ರಾಮ್ಟೆಕ್ (ಎಸ್ಸಿ)
7)ಮಣಿಪುರ (2)
8)ಮೇಘಾಲಯ (2):ಶಿಲ್ಲಾಂಗ್ ಮತ್ತು ತುರಾ
9)ಮಿಜೋರಾಂ (1): ಮಿಜೋರಾಂ
10)ನಾಗಾಲ್ಯಾಂಡ್ (1):ನಾಗಾಲ್ಯಾಂಡ್
11)ಸಿಕ್ಕಿಂ (1):ಸಿಕ್ಕಿಂ
12)ತ್ರಿಪುರ (1):ತ್ರಿಪುರ ಪಶ್ಚಿಮ
13)ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1):ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
14)ಜಮ್ಮು ಮತ್ತು ಕಾಶ್ಮೀರ (1):ಉಧಂಪುರ
15)ಲಕ್ಷದ್ವೀಪ (1):ಲಕ್ಷದ್ವೀಪ
16)ಪುದುಚೇರಿ (1):ಪುದುಚೇರಿ
17)ಪಶ್ಚಿಮ ಬಂಗಾಳ (3):ಕೂಚ್‌ಬೆಹರ್, ಅಲಿಪುರ್ದುವಾರ್, ಜಲ್ಪೈಗುರಿ
18)ಉತ್ತರಾಖಂಡ (5):ನೈನಿತಾಲ್-ಉಧಮ್ ಸಿಂಗ್ ನಗರ, ಅಲ್ಮೋರಾ, ಹರಿದ್ವಾರ, ಗರ್ವಾಲ್ (ಪೌರಿ), ತೆಹ್ರಿ ಗರ್ವಾಲ್
19)ಉತ್ತರ ಪ್ರದೇಶ (8):ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್
20)ರಾಜಸ್ಥಾನ (12):ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ್, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್
21)ತಮಿಳುನಾಡು (39):ತಿರುವಳ್ಳೂರ್ (SC), ಚೆನ್ನೈ ಉತ್ತರ , ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ (SC), ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ (SC), ಕಲ್ಲಕುರಿಚಿ, ಸೇಲಂ, ನಾಮ , ಈರೋಡ್ GEN, ತಿರುಪ್ಪೂರ್, ನೀಲಗಿರಿ (SC), ಕೊಯಮತ್ತೂರು, ಪೊಲ್ಲಾಚಿ, ದಿಂಡುಗಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಕಡಲೂರು, ಚಿದಂಬರಂ (SC), ಮೈಲಾಡುತುರೈ, ನಾಗಪಟ್ಟಣಂ, ತಂಜಾವೂರು, ಮಧುರೈ, ಶಿವಗಂಗಾ , ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ , ತೆಂಕಶಿ (SC), ತಿರುನೆಲ್ವೇಲಿ, ಕನ್ಯಾಕುಮಾರಿ ಕ್ಷೇತ್ರಗಳಿಗೆ ಮತದಾ ನಡೆಯುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 16 =
Remember me
