ಕಾಂಬೋಡಿಯಾದಪ್ರವಾಸೋದ್ಯಮ ಸಚಿವರಾದ ಎಚ್.ಇ. ಸೋಕ್​ ಸೋಕೆನ್ ಅವರು ಶುಕ್ರವಾರ ಸೀಮ್ ರೀಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಗುರುಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿದರು.
ಸದ್ಗುರುಗಳಿಗೆ ಗಮನಾರ್ಹ ಆತಿಥ್ಯದ ಜೊತೆಗೆ ಸಚಿವರು, ಕಾಂಬೋಡಿಯಾದ ಗೌರವಾನ್ವಿತ ಪ್ರಧಾನ ಮಂತ್ರಿಯವರ ವೈಯಕ್ತಿಕ ಪತ್ರವನ್ನು ಪ್ರಸ್ತುತಪಡಿಸಿದರು. ಸಚಿವರೊಂದಿಗೆ ಅವರ ಪತ್ನಿ, ಕಾಂಬೋಡಿಯಾದ ಪ್ರವಾಸೋದ್ಯಮ ಸಚಿವಾಲಯದ ಅಧಿಕಾರಿಗಳು ಮತ್ತು ಭಾರತದ ಕಾನ್ಸುಲೇಟ್ ಜನರಲ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
Thank you Prime Minister Hun Manet for your letter of invitation and welcome to Cambodia. The monuments and culture of this nation are an awe-inspiring tribute to human ingenuity and determination. -Sg@peacepalace_kh@tourismkh@indembcampic.twitter.com/UFvgEPvD8z
— Sadhguru (@SadhguruJV)April 27, 2024

ಇದು ಮೆದುಳು ಶಸ್ತ್ರಚಿಕಿತ್ಸೆಯ ಒಂದು ತಿಂಗಳ ನಂತರ ತಮ್ಮ ಚಟುವಟಿಕೆಗಳಿಗೆ ಮರಳಿರುವ ಸದ್ಗುರುಗಳ ಮೊದಲ ಪ್ರಯಾಣ. ಕಾಂಬೋಡಿಯಾದಲ್ಲಿ ಸದ್ಗುರು ಅವರು ಸ್ಥಳೀಯ ಸಂಸ್ಕೃತಿ ಮತ್ತು ದೇವಾಲಯಗಳ ಹಿಂದಿನ ವಿಜ್ಞಾನವನ್ನು ಅನ್ವೇಷಿಸಲಿದ್ದಾರೆ. ಅವರ ಕಾರ್ಯಕ್ರಮವು ಏಪ್ರಿಲ್ 30 ರವರೆಗೆ ಜರುಗಲಿದ್ದು, ಈ ಸಮಯದಲ್ಲಿ ಅಲ್ಲಿನ ಸ್ಥಳೀಯ ಸಂಸ್ಕೃತಿಯಲ್ಲಿ ಮಿಂದೇಳುವುದರ ಜೊತೆಗೆ, ಕಾಂಬೋಡಿಯಾದ ಸೀಮ್ ರೀಪ್‌ನಲ್ಲಿರುವ ಬೇಯಾನ್ ಮತ್ತು ಅಂಕೋರ್ ವಾಟ್ ದೇವಾಲಯಗಳನ್ನು ಭೇಟಿ ಮಾಡಲಿದ್ದಾರೆ.
Cambodia is brimming with possibilities as a hub for cultural exploration and wellness. It was a pleasure meeting the Hon'ble Minister of Tourism, Sok Soken in Cambodia. -Sg@tourismkh@indembcampic.twitter.com/fJczmoINUY
— Sadhguru (@SadhguruJV)April 27, 2024

ಯಾವುದೇ ಬೋಧನೆ, ತತ್ವಶಾಸ್ತ್ರ, ಮತಧರ್ಮ ಅಥವಾ ನಂಬಿಕೆಯ ವ್ಯವಸ್ಥೆಗಳಿಗೆ ಒಳಗಾಗದ ಸದ್ಗುರುಗಳು, ತಮ್ಮ ಆಧ್ಯಾತ್ಮಿಕ ಮತ್ತು ಸಾಮಾಜಿಕ ಪ್ರಯತ್ನಗಳು, ಪರಿಸರ ಕಾರ್ಯಗಳು, ಗ್ರಾಮೀಣ ಶಿಕ್ಷಣ ಮತ್ತು ಇನ್ನೂ ಹೆಚ್ಚಿನವುಗಳ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ತಲುಪಿದ್ದಾರೆ. ಪ್ರಪಂಚದಾದ್ಯಂತ ಮೂವತ್ತು ಲಕ್ಷ ಜನರು ಅವರ ಪ್ರಮುಖ ಕಾರ್ಯಕ್ರಮವಾದ ಇನ್ನರ್ ಇಂಜಿನಿಯರಿಂಗ್‌ ಕಾರ್ಯಕ್ರಮದ ಪ್ರಯೋಜನ ಪಡೆದಿದ್ದಾರೆ. ಆ ಮೂಲಕ ಜನರು ತಮ್ಮ ಜೀವನದ ಗ್ರಹಿಕೆಯಲ್ಲಿ ಹೆಚ್ಚಿನ ಸಮತೋಲನ ಮತ್ತು ಗಮನಾರ್ಹ ಸ್ಪಷ್ಟತೆಯನ್ನು ಪಡೆದುಕೊಂಡಿದ್ದಾರೆ.
2023ರಲ್ಲಿ ಸದ್ಗುರುಗಳ ಸಾಮಾಜಿಕ ಮಾಧ್ಯಮವು 4.37 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿತ್ತು. ಈ ಹಿನ್ನೆಲೆಯಲ್ಲಿ ಕಾಂಬೋಡಿಯಾದ ಅವರ ಅನ್ವೇಷಣೆಯು, ಆ ದೇಶದ ಬಗೆಗಿನ ಅವರ ಒಳನೋಟಗಳಿಂದ ಪ್ರಯೋಜನ ಪಡೆಯಲು ಜಗತ್ತಿಗೆ ಒಂದು ವಿಶಿಷ್ಟ ಅವಕಾಶವನ್ನು ಒದಗಿಸಲಿದೆ.
ಬರಪರಿಹಾರ ಬಿಡುಗಡೆ ವಿಚಾರ: ಮೇ 6ಕ್ಕೆ ಪ್ರಕರಣ ಮುಂದೂಡಿದ ಸುಪ್ರೀಂಕೋರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × one =
Remember me
