ರೋಮ್​:ಮಣ್ಣು ರಕ್ಷಣೆ ಸಲುವಾಗಿ ಈಶ ಫೌಂಡೇಷನ್​ನ ಸದ್ಗುರು ಕೈಗೊಂಡಿರುವ ಮಣ್ಣು ರಕ್ಷಿಸಿ ಅಭಿಯಾನ ಲಂಡನ್​ನಲ್ಲಿ ಆರಂಭಗೊಂಡಿದ್ದು, ಇದೀಗ ಐರೋಪ್ಯ ರಾಷ್ಟ್ರಗಳಾದ ಆಸ್ಟ್ರಿಯಾ, ಸ್ಲೊವೇನಿಯಾ ಮತ್ತು ಇಟಲಿಯಲ್ಲೂ ಪ್ರತಿಧ್ವನಿಸಿದೆ.
ಮಣ್ಣು ರಕ್ಷಣೆ ಕುರಿತು ಜಾಗೃತಿ ಮೂಡಿಸಲು ಮಾ.21ರಂದು ಲಂಡನ್​ನಿಂದ ಏಕಾಂಗಿಯಾಗಿ ಬೈಕ್​ ಪ್ರಯಾಣ ಹೊರಟಿರುವ ಸದ್ಗುರು, 27 ರಾಷ್ಟ್ರಗಳಲ್ಲಿ ನೂರು ದಿನಗಳೊಳಗೆ ಒಟ್ಟು 30 ಸಾವಿರ ಕಿ.ಮೀ. ಸಂಚರಿಸುವ ಗುರಿ ಇರಿಸಿಕೊಂಡಿದ್ದು, ಸದ್ಯ ರೋಮ್​ ತಲುಪಿದ್ದಾರೆ.
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಮ್ಯೂಸಿಯಮ್ಸ್​ ಕ್ವಾರ್ಟಿಯರ್​ಗೆ ಸದ್ಗುರು ಭೇಟಿ ನೀಡಿದ್ದು, ಅದರ ನಿರ್ದೇಶಕ ಬೆಟಿನಾ ಲೀಡ್ಲ್​ ಸದ್ಗುರುಗೆ ಆತ್ಮೀಯ ಸ್ವಾಗತ ಕೋರಿದರು. ನಂತರ ಸದ್ಗುರು ವಿಯೆನ್ನಾದಲ್ಲಿನ ರಾಯಭಾರ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಸ್ಟ್ರಿಯಾದಲ್ಲಿನ ಭಾರತದ ರಾಯಭಾರಿ ಜೈದೀಪ್ ಮಜುಮ್ದಾರ್​ ಸದ್ಗುರುವನ್ನು ಸ್ವಾಗತಿಸಿದರು. ಜನರು ಭೂಸ್ನೇಹಿಗಳಾಗಬೇಕು ಎಂದು ಕರೆ ನೀಡಿದ ಸದ್ಗುರು, ಪ್ರತಿಯೊಬ್ಬರೂ ಮಣ್ಣು ರಕ್ಷಣೆ ಸಲುವಾಗಿ ಪ್ರತಿ ದಿನ ಕನಿಷ್ಠ 10-15 ನಿಮಿಷ ಮೀಸಲಿಡಬೇಕು ಎಂದರು.
ಸ್ಲೊವೇನಿಯಾದಲ್ಲಿ ಭಾರತೀಯ ರಾಯಭಾರ ಕಚೇರಿಗೆ ತೆರಳಿದ ಸದ್ಗುರು, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿತ್ತಿದ್ದನ್ನೆಲ್ಲ ಬೆಳೆಯುವ ಮಣ್ಣಿನ ಅದ್ಭುತ ಶಕ್ತಿ ಕುರಿತು ವಿವರಿಸಿದರು. ಇನ್ನು ನಟ ಗೋರನ್​ ವಿಸ್ನ್​ಜಿಕ್​ ಜತೆ ಸಂವಾದ ನಡೆಸಿದ ಅವರು, ಮಣ್ಣು ರಕ್ಷಣೆ ಅಭಿಯಾನ ಕಾರ್ಯರೂಪಕ್ಕೆ ಬರುವಲ್ಲಿ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡುವ ಅಗತ್ಯವನ್ನು ತಿಳಿಸಿದರು. ಸ್ಲೊವೇನಿಯಾದಲ್ಲಿನ ಭಾರತದ ರಾಯಭಾರಿ ನಮ್ರತಾ ಎಸ್​. ಕುಮಾರ್ ಮಾತನಾಡಿ, ಜಗತ್ತಿಗೇ ಸದ್ಗುರು ಭಾರತದ ರಾಯಭಾರಿ ಎಂದು ಬಣ್ಣಿಸಿದರು.
ರೋಮ್​ನಲ್ಲಿ ಮಣ್ಣು ರಕ್ಷಿಸಿ ಕುರಿತಾಗಿ ಐವರು ಇಟಾಲಿಯನ್ ಕಲಾವಿದರು ನೀಡಿದ ಕಚೇರಿ ಅಭಿಯಾನಕ್ಕೆ ಕಲಾತ್ಮಕ ಕಳೆಯನ್ನು ನೀಡಿತು. ಅಲ್ಲಿ ಸದ್ಗುರು ಅವರು ‘ರೋಮ’ ಎಂಬ ಕವಿತೆಯನ್ನು ವಾಚಿಸಿದರು. ಯುನೈಟೆಡ್ ನೇಷನ್ಸ್​ ವರ್ಲ್ಡ್​ ಫುಟ್ ಪ್ರೋಗ್ರಾಮ್​ನ ಸಿಎಫ್​ಒ ಮತ್ತು ಅಸಿಸ್ಟೆಂಟ್ ಎಕ್ಸ್​ಕ್ಯೂಟಿವ್ ಡೈರೆಕ್ಟರ್ ಮನೋಜ್ ಜುನೇಜ ಮಾತನಾಡಿ, ಸದ್ಗುರು ಅವರ ಮಣ್ಣು ರಕ್ಷಿಸಿ ಅಭಿಯಾನಕ್ಕೆ ತಮ್ಮ ಬೆಂಬಲ ಘೋಷಿಸಿದರು. ಇದಕ್ಕೂ ಮೊದಲು ವೆನಿಸ್​ ತಲುಪಿದ್ದ ಸದ್ಗುರು, ಅಲ್ಲಿನ ಯುನಿವರ್ಸಿಟ ಕಾ ಫಾಸ್ಕರಿಯಲ್ಲಿ ಪರಿಣತರ ಜತೆ ಜಗತ್ತಿನಲ್ಲಿ ಮಣ್ಣು ರಕ್ಷಣೆಯ ಅಗತ್ಯದ ಕುರಿತು ಸಂವಾದ ನಡೆಸಿದರು.
ಮಣ್ಣು ರಕ್ಷಿಸಿ ಅಭಿಯಾನ; ಮಳೆಯಲ್ಲೂ ತಡೆ ಇಲ್ಲದೆ ಸಾಗಿದೆ ಸದ್ಗುರು ಬೈಕ್ ಯಾನ..

ಸದ್ಗುರು ಮಣ್ಣು ರಕ್ಷಿಸಿ ಅಭಿಯಾನ; ಹೇಗಿತ್ತು ಮೊದಲ ವಾರ?

ಜೆಕ್​ ಗಣರಾಜ್ಯದಲ್ಲಿ ಸದ್ಗುರು; ಪ್ರೇಗ್​​ ತಲುಪಿತು ಮಣ್ಣು ರಕ್ಷಿಸಿ ಅಭಿಯಾನ

ಲಂಡನ್​ನಲ್ಲಿ ಬಸವೇಶ್ವರ ಪುತ್ಥಳಿಗೆ ಸದ್ಗುರು ನಮನ; ಮಣ್ಣು ರಕ್ಷಿಸಿ ಬೈಕ್​ ರ‌್ಯಾಲಿಗೆ ನೀರಜ್ ಪಾಟೀಲ್ ಸ್ವಾಗತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 14 =
Remember me
