ನವದೆಹಲಿ:ಈಶ ಫೌಂಡೇಷನ್​ ಸಂಸ್ಥಾಪಕ ಸದ್ಗುರು ಮಣ್ಣು ಉಳಿಸಿ ಅಭಿಯಾನ ಅಂಗವಾಗಿ ಹಮ್ಮಿಕೊಂಡಿರುವ ಜಾಗತಿಕ ಅಭಿಯಾನದ ಸಲುವಾಗಿ ಕೈಗೊಂಡಿರುವ ಏಕಾಂಗಿ ಬೈಕ್ ಪ್ರಯಾಣವು 26 ದೇಶಗಳಲ್ಲಿ ಜಾಗೃತಿ ಮೂಡಿಸಿದ್ದು, ಇತ್ತೀಚೆಗೆ ಭಾರತವನ್ನೂ ಪ್ರವೇಶಿಸಿದೆ. ನೂರು ದಿನಗಳ ಬೈಕ್ ಪ್ರಯಾಣದ ಈ ಅಭಿಯಾನವು 76ನೆಯ ದಿನ ದೆಹಲಿ ತಲುಪಿದ್ದು, ಅಲ್ಲಿ ಅಭಿಯಾನದ ಅಂಗವಾಗಿ ಸದ್ಗುರು ಭಾಗವಹಿಸಿದ ಸಾರ್ವಜನಿಕ ಕಾರ್ಯಕ್ರಮ ರಾಷ್ಟ್ರ ರಾಜಧಾನಿಯಲ್ಲಿ ಸಂಚಲನವನ್ನು ಸೃಷ್ಟಿಸಿದೆ.
ದೆಹಲಿಯಲ್ಲಿ ಈ 76ನೇ ದಿನವು ಹಲವಾರು ಸಡಗರದ ಕಾರ್ಯಕ್ರಮಗಳಿಗೆ ಸಾಕ್ಷಿಯಾಯಿತು. ಅವುಗಳಲ್ಲಿ ಪ್ರಧಾನಿ ಜತೆಗಿನ ಮಣ್ಣು ಉಳಿಸಿ ಕಾರ್ಯಕ್ರಮವೂ ಒಂದಾಗಿತ್ತು. ತದನಂತರ ಕಿಕ್ಕಿರಿದು ತುಂಬಿದ್ದ ದೆಹಲಿಯ I.G. ಸಂಕೀರ್ಣದಲ್ಲಿ ಸಾರ್ವಜನಿಕ ಕಾರ್ಯಕ್ರಮವೂ ನಡೆಯಿತು.
ನವದೆಹಲಿಯ ಐಜಿ ಸಂಕೀರ್ಣದಲ್ಲಿ ತುಂಬಿದ, ಹುರುಪಿನ ಹಾಗೂ ಅಬ್ಬರಿಸುವ 15 ಸಾವಿರದಷ್ಟಿದ್ದ ಜನಸಮೂಹವನ್ನು ಉದ್ದೇಶಿಸಿದ ಸದ್ಗುರು, ಎಲ್ಲರೂ ಮಣ್ಣನ್ನು ಉಳಿಸುವ ತಮ್ಮ ಕಳವಳದ ಬಗ್ಗೆ ಧ್ವನಿ ಎತ್ತಬೇಕು ಎಂಬ ಸ್ಪಷ್ಟ ಸಂದೇಶ ಮೊಳಗಿಸಿದರು. ಭಾರತ ಸರ್ಕಾರದ ಪ್ರಿನ್ಸಿಪಾಲ್ ಎಕನಾಮಿಕ್ ಅಡ್ವೈಸರ್ ಸಂಜೀವ್ ಸನ್ಯಾಲ್ ನಮ್ಮ ಮುಂದಿನ ಪೀಳಿಗೆಯವರಿಗಾಗಿ ಈ ಗ್ರಹವು ವಾಸಯೋಗ್ಯವಾಗಿ ಇರಬೇಕೆಂದರೆ ಮಣ್ಣನ್ನು ಸಂರಕ್ಷಿಸುವ ಅತಿ ದೊಡ್ಡ ಜಾಗತಿಕ ಪ್ರಯತ್ನವು ಅತ್ಯಗತ್ಯ ಎಂಬುದನ್ನು ಸಮ್ಮತಿಸಿದರು.

ಸಾಯುತ್ತಿರುವ ಮಣ್ಣಿನ ಗಂಭೀರವಾದ ಅಪಾಯವನ್ನು ಎತ್ತಿ ತೋರಿಸಿದ ಸದ್ಗುರು, ಮನುಕುಲವನ್ನು ಅನರ್ಥದ ಅಂಚಿನಿಂದ ಪಾರು ಮಾಡಿದ ತಲೆಮಾರು ನಾವಾಗಬಹುದು ಎಂದು ನೆನಪಿಸಿದರು. ಪ್ರಜಾಪ್ರಭುತ್ವದ ದೇಶಗಳಲ್ಲಿ ಸರ್ಕಾರಗಳು ನಿಯಮಿತ ಕಾಲಮಿತಿಗಷ್ಟೇ ಆಯ್ಕೆಯಾಗಿದ್ದರೂ, ಸುದೀರ್ಘ ಕಾಲದಲ್ಲಿ ಫಲ ಕೊಡುವಂತಹ ಕೆಲಸ ಮಾಡಲು ಜನಾದೇಶವು ಸರ್ಕಾರಗಳಿಗೆ ಸ್ಫೂರ್ತಿ ಕೊಡುತ್ತದೆ. “ಜನಾದೇಶವು ಕೇವಲ ಮತದಿಂದಷ್ಟೇ ಅಲ್ಲ, ಧ್ವನಿಯಿಂದಲೂ ಸಾಧ್ಯ” ಎಂದ ಸದ್ಗುರು, “ಈ ದೇಶದಲ್ಲಿ ಮತ್ತು ಉಳಿದ ಜಗತ್ತಿನಲ್ಲಿ ಮಣ್ಣಿನ ವಿಷಯ ಪರಿಹಾರವಾಗುವವರೆಗೂ ಜನರು ತಮ್ಮ ಧ್ವನಿ ಎತ್ತುತ್ತಿರಬೇಕು” ಎಂದು ಒತ್ತಾಯಿಸಿದರು.
ಪರಿಸರದ ಬೇರೆಲ್ಲ ವಿಷಯಗಳು ಮಣ್ಣು ಜೀವಂತವಾಗಿ ಇರುವವರೆಗಷ್ಟೇ ಪ್ರಸ್ತುತ ಎಂದ ಸದ್ಗುರು; ಮಣ್ಣಿನ ವಿನಾಶವನ್ನು ಒಂದು ಪ್ರತ್ಯೇಕ ವಿಷಯವಾಗಿ ಪರಿಗಣಿಸಬೇಕು ಎಂದು ಕರೆ ಕೊಟ್ಟರು. ಒಮ್ಮೆ ಮಣ್ಣಿನ ವಿನಾಶ ವ್ಯಕ್ತವಾಗಲು ಶುರುವಾಯಿತೆಂದರೆ, ಈ ಉಳಿದ್ಯಾವ ವಿಷಯಗಳೂ ಮಣ್ಣಿನ ಸತ್ವ ಕಳೆಯುವ ವಿಷಯದಷ್ಟು ಮುಖ್ಯವಾಗುವುದಿಲ್ಲ ಎಂದು ಹೇಳಿ, ಇದೊಂದು “ಮೂಲ ಅಸ್ತಿತ್ವದ ಪ್ರಮುಖ ವಿಷಯ” ಮತ್ತು ಇದು “ನಮ್ಮ ಜೀವದ ಅಸ್ತಿತ್ವದ ಬಗ್ಗೆ ಪರಿಣಾಮ” ತರುವುದು ಎಂದರು.

ಸಭೆಯು ಸದ್ಗುರು ಆಗಮಿಸುತ್ತಿದ್ದಂತೆ ವಿವಿಧ ರಾಜ್ಯಗಳ ಕಲಾವಿದರ ರೋಮಾಂಚಕ ಪ್ರದರ್ಶನದಿಂದ ಶುರುವಾಯಿತು. ನಂತರ ಗಾಯಕ ಮೋಹಿತ್ ಚೌಹಾನ್, ಶಾಸ್ತ್ರೀಯ ನರ್ತಕಿ ರಾಧೆ ಜಗ್ಗಿ ಮತ್ತು ಈಶ ಸಂಸ್ಕೃತಿಯವರ ಮಿಡಿಯುವ ಪ್ರದರ್ಶನಗಳು ನಡೆದವು.
ಇದಕ್ಕೆ ಮೊದಲು ವಿಜ್ಞಾನ ಭವನದಲ್ಲಿನ ಮಣ್ಣು ಉಳಿಸಿ ಕಾರ್ಯಕ್ರಮದಲ್ಲಿ ಸದ್ಗುರು ಜೊತೆಗೂಡಿದ ಪ್ರಧಾನಿ ನರೇಂದ್ರ ಮೋದಿಯವರು ಅಭಿಯಾನಕ್ಕೆ ತುಂಬು ಹೃದಯದ ಬೆಂಬಲ ಮತ್ತು ಉತ್ತೇಜನ ನೀಡಿದರು. ಅಭಿಯಾನವನ್ನು ಮಾನವೀಯತೆಗೆ ಒಂದು ದೊಡ್ಡ ಸೇವೆ ಎಂದು ಕರೆದ ಪ್ರಧಾನಿ, ಸದ್ಗುರುರವರ ದ್ವಿಚಕ್ರವಾಹನದ ಪ್ರವಾಸದ ಕಠಿಣ ಪರಿಶ್ರಮವನ್ನು ಗುರುತಿಸಿದರು. ಜಗತ್ತಿನಲ್ಲಿ ಮಣ್ಣಿನ ಬಗೆಗಿನ ಸ್ನೇಹ ಹೆಚ್ಚಾಗಿರುವುದರ ಬಗ್ಗೆ ವಿಶ್ವಾಸವಿದೆಯಷ್ಟೆ ಅಲ್ಲದೆ, ಎಲ್ಲರಿಗೂ ಭಾರತದ ಮಣ್ಣಿನ ಶಕ್ತಿಯ ಪರಿಚಯವಾಗಿದೆ ಅಂತಲೂ ಚುಟುಕಾಗಿ ಹೇಳಿದರು. ಸಭೆಯ ನಂತರ, ಸದ್ಗುರು ಪ್ರಧಾನಿಯವರಿಗೆ ಮಣ್ಣು ಉಳಿಸುವ ನೀತಿಯ ಕೈಪಿಡಿಯ ಕೊಡುಗೆ ನೀಡಿದರು. ಅದರಲ್ಲಿ ಮಣ್ಣನ್ನು ಪುನರುಜ್ಜೀವಿಸಲು ಕಾರ್ಯರೂಪಕ್ಕೆ ತರಬಹುದಾದಂಥ ವೈಜ್ಞಾನಿಕ ಪರಿಹಾರಗಳನ್ನು ಕೊಡಲಾಗಿದೆ.

ಮಣ್ಣು ಉಳಿಸುವ ಸಲುವಾಗಿ ಸದ್ಗುರುರವರ ಏಕಾಂಗಿಯಾದ ೧೦೦ ದಿನಗಳ ದ್ವಿಚಕ್ರ ವಾಹನದ ೨೭ ದೇಶಗಳ ಪ್ರವಾಸದ ೭೫ನೆಯ ದಿನವು ಇದಾಗಿತ್ತು. ಅಭಿಯಾನವು ಇಂದಿನ ವರೆಗೆ ೨.೫ ಶತಕೋಟಿ ಜನರನ್ನು ಮುಟ್ಟಿದ್ದು, ೭೪ ದೇಶಗಳು ತಮ್ಮ ಮಣ್ಣನ್ನು ಉಳಿಸಿಕೊಳ್ಳಲು ಒಪ್ಪಿವೆ. ಭಾರತದಲ್ಲಿ ೧೫ ಲಕ್ಷಕ್ಕಿಂತಲೂ ಹೆಚ್ಚು ಮಕ್ಕಳು ದೇಶದ ಮಣ್ಣು ಮತ್ತು ತಮ್ಮ ಸಮೂಹಿಕ ಭವಿಷ್ಯದ ಉಳಿವಿಗಾಗಿ ಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
ಮಣ್ಣು ಉಳಿಸಿ ಅಭಿಯಾನದ ಪ್ರಾಥಮಿಕ ಉದ್ದೇಶವೆಂದರೆ ಜಗತ್ತಿನ ಎಲ್ಲ ದೇಶಗಳಲ್ಲಿ ವ್ಯವಸಾಯದ ಮಣ್ಣಿನಲ್ಲಿನ ಜೈವಿಕ ಅಂಶವನ್ನು ಕನಿಷ್ಟ ಶೇ. 3-6ಕ್ಕೆ ತರುವಂತೆ ತುರ್ತು ನೀತಿ ಸುಧಾರಣೆಗೆ ಜನಾದೇಶ ಹೊರಡಿಸುವುದು. ಕನಿಷ್ಟ ಪಕ್ಷ ಅಷ್ಟು ಜೈವಿಕ ಅಂಶ ಇರದೇ ಹೋದಲ್ಲಿ, ಮಣ್ಣಿನ ವಿಜ್ಞಾನಿಗಳು ಹೇಳುವ ಪ್ರಕಾರ ಇಷ್ಟರಲ್ಲಿಯೇ ಮಣ್ಣು ಸತ್ತು ಹೋಗುತ್ತದೆ ಅಲ್ಲದೆ ‘ಮಣ್ಣಿನ ವಿನಾಶ’ ಒಂದು ಪ್ರತ್ಯಕ್ಷ ಘಟನೆಯಾಗಲಿದೆ.

ಭಾರತದಲ್ಲಿನ ಶೇ. 30ರಷ್ಟು ಫಲವತ್ತಾದ ಭೂಮಿಯು ಬರಡಾಗಿದೆ ಮತ್ತು ಬೆಳೆಯಲು ಅಸಮರ್ಥವಾಗಿದೆ. 2050ರ ಮೊದಲೇ ಶೇ.90ರಷ್ಟು ಭೂಮಿಯು ಮರುಭೂಮಿಯಾಗಲಿದೆ ಎಂದು ಯುನೈಟೆಡ್ ನೇಷನ್ಸ್ ಎಚ್ಚರಿಕೆ ನೀಡಿದೆ. ಇಂತಹ ದುರಂತವನ್ನು ತಪ್ಪಿಸಲು ಈ ವರ್ಷದ ಮಾರ್ಚ್​ನಲ್ಲಿ ಅಭಿಯಾನ ಶುರು ಮಾಡಿದ ಸದ್ಗುರು 27 ದೇಶಗಳ ನಾಯಕರು, ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ಪ್ರಜೆಗಳನ್ನು ಭೇಟಿ ಮಾಡಿ ಮಣ್ಣು ಉಳಿಸುವ ಕಡೆಗೆ ಬೆಂಬಲ ಹೆಚ್ಚಿಸಲು ಪ್ರವಾಸ ಮಾಡುತ್ತಿದ್ದಾರೆ.

ಹೆಣ್ಮಕ್ಳೂ ಸ್ಟ್ರಾಂಗು ಅನ್ನೋದಕ್ಕೆ ಈಕೆ ‘ಸಾಕ್ಷಿ’: ಏಕಾಂಗಿಯಾಗಿ ಬೈಕ್​ನಲ್ಲಿ ಜಮ್ಮು-ಕಾಶ್ಮೀರಕ್ಕೆ ಹೋಗಿಬಂದ ವಿದ್ಯಾರ್ಥಿನಿ..

ಐಆರ್​​ಸಿಟಿಸಿ ಮೂಲಕ ಇನ್ಮುಂದೆ ಎಷ್ಟು ರೈಲ್ವೆ ಟಿಕೆಟ್​​ಗಳನ್ನು ಕಾದಿರಿಸಬಹುದು?; ಇಲ್ಲಿದೆ ಹೆಚ್ಚಳದ ಕುರಿತ ವಿವರ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 6 =
Remember me
