ತಿರುಪತಿ:ತುಂಬಾ ಕನಸು ಹೊತ್ತುಕೊಂಡು ಪತಿಯ ಮನೆಗೆ ಆಗಮಿಸಿದ ವಧುವಿಗೆ ಪಾಪಿ ಪತಿರಾಯ ನರಕ ದರ್ಶನ ಮಾಡಿಸಿರುವ ಅಮಾನವೀಯ ಘಟನೆ ತಿರುಪತಿಯಲ್ಲಿ ಬೆಳಕಿಗೆ ಬಂದಿದೆ. ಇದುವರೆಗೂ ಕೇವಲ ಚಲನಚಿತ್ರಗಳಲ್ಲಿ ನೋಡಿದಂತಹ ಅತ್ಯಂತ ಕ್ರೂರ ಪತಿಯ ಪಾತ್ರ ಈ ಸ್ಟೋರಿಯಲ್ಲಿ ನಿಜವಾಗಿದೆ.
ತನ್ನ ಪತ್ನಿಯನ್ನು ಕಾಲ್​ ಗರ್ಲ್​ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿರುವ ಪಾಪಿ ಪತಿ, ವಾಟ್ಸ್​ಆ್ಯಪ್​ ಗ್ರೂಪ್​ಗಳಲ್ಲಿ ಪತಿಯ ಫೋಟೋಗಳನ್ನು ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ.
ಇದನ್ನೂ ಓದಿ:ಸಮಾನ ಮತಗಳಿಂದ ಗೊಂದಲ, ಲಾಟರಿ ಮೂಲಕ ಸಮಸ್ಯೆಗೆ ಉಪಾಯ ಕಂಡುಕೊಂಡ ಅಧಿಕಾರಿಗಳು
ಘಟನೆಯ ವಿವರಣೆಗೆ ಬರುವುದಾದರೆ, ತಿರುಪತಿ ಉಪನಗರ ತಿಮ್ಮಿನಾಯುಡು ಪಾಳೆಂನ ಎಸ್​ಜಿಎಸ್​ ಕಾಲೇಜಿನಲ್ಲಿ ಕಿರಿಯ ಸಹಾಯಕನಾಗಿ ಕೆಲಸ ಮಾಡುತ್ತಿರುವ ರೋಹಿತ್​ ಕುಮಾರ್, ರೇವಂತ್​ ಹೆಸರಿನಲ್ಲಿ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿಕೊಂಡು ಕಳೆದ ಆಗಸ್ಟ್​ನಲ್ಲಿ ಮದುವೆಯಾಗಿದ್ದ. ಕೆಲವು ದಿನಗಳ ಬಳಿಕ ತನ್ನ ನಿಜ ಹೆಸರು ಮತ್ತು ವಿಳಾಸವನ್ನು ಹೇಳಿ ಪತ್ನಿಗೆ ಕಿರುಕುಳ ನೀಡಲು ಆರಂಭಿಸಿದ.
ಮದುವೆಯಾದಾಗಿನಿಂದ ಕಿರುಕುಳ ನೀಡುತ್ತಿದ್ದ ರೋಹಿತ್​, 10 ಲಕ್ಷ ರೂ. ನಗದು, ಚಿನ್ನಾಭರಣ ಸೇರಿದಂತೆ ಹೆಚ್ಚುವರಿಗೆ ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಆದರೆ, ಇದಕ್ಕೆ ಒಪ್ಪದಿದ್ದಾಗ ಪತ್ನಿಯನ್ನು ಮನೆಯಿಂದ ಆಚೆಗೆ ನೂಕಿದ್ದ. ಅಲ್ಲದೆ, ವರದಕ್ಷಿಣೆ ತರದಿದ್ದರೆ ಪೋರ್ನ್​ ವೆಬ್​ಸೈಟ್​ಗೆ ಫೋಟೋಗಳನ್ನು ಅಪ್​​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ:ಅಮ್ಮನನ್ನು ಕೊಂದು, ಅಂಗಳದಲ್ಲಿ ಬೆಂಕಿ ಹಚ್ಚಿ ಮಂತ್ರ ಪಠಿಸಿದ ಮಗ! ಕೊಲೆಗೆ ಕಾರಣ ಕೇಳಿ ಶಾಕ್​ ಆದ ಸಹೋದರಿ
ಕೇವಲ ಬೆದರಿಕೆ ಮಾತ್ರವಲ್ಲದೆ, ನಿಜವಾಗಿಯೂ ಆತ ಕಾಲ್​ ಗರ್ಲ್​ ಎಂದು ಹೇಳಿ ಫೋಟೋಗಳನ್ನು ಪೋಸ್ಟ್​ ಮಾಡಿರುವ ಆರೋಪ ಕೇಳಿಬಂದಿದೆ. ಮಗಳ ಬಗ್ಗೆ ತಿಳಿದ ಆಕೆಯ ಪಾಲಕರು ರೋಹಿತ್​ ಮನೆಗೆ ಧಾವಿಸುತ್ತಾರೆ. ಇದೊಂದು ಕೌಟುಂಬಿಕ ಸಮಸ್ಯೆ ಎಂದು ಅರಿಯುವ ಪೊಲೀಸರು ಎರಡು ಕುಟುಂಬವನ್ನು ಕೂರಿಸಿ ಸಂಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ, ರೋಹಿತ್​ ಸಂತ್ರಸ್ತೆಯ ಪಾಲಕರನ್ನೇ ಹಿಗ್ಗಾಮುಗ್ಗ ಬೈಯುತ್ತಾನೆ. ಇದೀಗ ಆತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ.(ಏಜೆನ್ಸೀಸ್​)
ಕಣ್ಣು ಬಿಟ್ಟುಕೊಂಡು ಸೀನಿದ್ರೆ ಏನಾಗಲಿದೆ ಎಂದು ನೋಡುವ ಕುತೂಹಲ: ಸೀನಿದವನಿಗೆ ಕಾದಿತ್ತು ಶಾಕ್​!

ಗ್ರಾಮ ಪಂಚಾಯಿತಿ ಫೈಟ್​: ಬಿಜೆಪಿಗೆ ಭರ್ಜರಿ ಮುನ್ನಡೆ

ಹುಡುಗನಿಗೆ ಮದುವೆ ವಯಸ್ಸು ಆಗದಿದ್ದರೂ ವಯಸ್ಕರಿಬ್ಬರು ಒಟ್ಟಿಗೇ ಇರಬಹುದು ಎಂದ ಹೈಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 3 =
Remember me
