ನವದೆಹಲಿ:ಡಿಮಾನಿಟೈಸೇಶನ್ ಬಳಿಕ ಗೃಹಿಣಿಯರ ಬ್ಯಾಂಕ್ ಖಾತೆಗೆ 2.50 ಲಕ್ಷ ರೂಪಾಯಿ ತನಕ ಹಣ ಜಮೆಯಾಗಿದ್ದರೆ ಅಂತಹ ಖಾತೆಗಳ ಪರಿಶೀಲನೆ ಅವಶ್ಯಕತೆ ಇಲ್ಲ. ಇಂತಹ ಖಾತೆಗಳು ಆದಾಯ ತೆರಿಗೆ ಇಲಾಖೆಯ ಪರಿಶೀಲನಾ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ) ಮಹತ್ವದ ಆದೇಶ ನೀಡಿದೆ.
ಮಧ್ಯಪ್ರದೇಶದ ಗ್ವಾಲಿಯರ್​ನ ಗೃಹಿಣಿ ಉಮಾ ಅಗರ್​ವಾಲ್ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿ, ಇಂತಹ ಇತರೆ ಪ್ರಕರಣಗಳಿಗೆ ಅನ್ವಯವಾಗುವಂತೆ ಈ ತೀರ್ಪು ನೀಡಿದೆ. ಉಮಾ ಅಗರ್​ವಾಲ್ 2016-17ರಲ್ಲಿ 1,30,810 ರೂಪಾಯಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದರು. ಆದಾಗ್ಯೂ, ಡಿಮಾನಿಟೈಸೇಶನ್ ನಂತರದಲ್ಲಿ 2.11 ಲಕ್ಷ ರೂಪಾಯಿ ಹಣವನ್ನು ಅವರು ಖಾತೆಯಲ್ಲಿ ಠೇವಣಿ ಇರಿಸಿದ್ದರು. ಈ ಕುರಿತು ಆದಾಯ ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿತ್ತು.
ತಮ್ಮ ಹಿಂದಿನ ಉಳಿತಾಯ, ಪತಿ, ಮಗ ಮತ್ತು ಸಂಬಂಧಿಕರು ನೀಡಿದ ಹಣ ಎಂದು ಉಮಾ ವಿವರಣೆ ನೀಡಿದ್ದರು. ಆದರೆ ಇದನ್ನು ಇಲಾಖೆ ಮಾನ್ಯ ಮಾಡಲಿಲ್ಲ. ಹೀಗಾಗಿ ಆದಾಯ ತೆರಿಗೆ ಇಲಾಖೆ ನಿಲುವು ಪ್ರಶ್ನಿಸಿ ಅವರು ಸಿಐಟಿ (ಅಪ್ಪೀಲ್ಸ್)ಗೆ ದೂರು ಸಲ್ಲಿಸಿದ್ದರು. ಆದರೆ, ಅದು ತಿರಸ್ಕೃತವಾಗಿತ್ತು. ಬಳಿಕ ಐಟಿಎಟಿಗೆ ಅಹವಾಲು ಸಲ್ಲಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − six =
Remember me
