ಮುಂಬೈ :ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟಿಗಳು ತಮ್ಮ ಇಂದಿನ ಹೋಳಿ ಆಚರಣೆಯ ವಿಡಿಯೋ, ಫೋಟೋಗಳೊಂದಿಗೆ ಕಳೆದ ವರ್ಷಗಳ ಅದ್ಧೂರಿ ಆಚರಣೆಗಳ ತ್ರೋಬ್ಯಾಕ್ ಚಿತ್ರಗಳನ್ನೂ ಶೇರ್ ಮಾಡುತ್ತಿದ್ದಾರೆ. ನಟ ಅಕ್ಷಯ್​ ಕುಮಾರ್ ತಮ್ಮ ಇನ್ಸ್​ಟಾಗ್ರಾಂ ಖಾತೆಯಲ್ಲಿ ಮಗಳು ನಿತಾರಾಳೊಂದಿಗೆ ಆಚರಿಸಿದ ಹೋಳಿ ಸಂಭ್ರಮದ ಫೋಟೋ ಶೇರ್ ಮಾಡಿದ್ದಾರೆ. ಅದಕ್ಕೆ “ನಿಮ್ಮ ಭಾಗವೇ ಆಗಿರುವವರೊಂದಿಗೆ ಹಬ್ಬಗಳನ್ನು ಆಚರಿಸುವುದಕ್ಕಿಂತ ಹೆಚ್ಚು ಸಂತೋಷದಾಯಕವಾದದ್ದು ಯಾವುದೂ ಇಲ್ಲ” ಎಂದು ಟಿಪ್ಪಣಿ ಬರೆದಿದ್ದಾರೆ.
ಇದಕ್ಕೆ ಹೋಳಿಹ್ಯಾಪಿನೆಸ್, ಸ್ಟೇಸೇಫ್ ಮತ್ತು ಫ್ಯಾಮಿಲಿಫನ್​ ಎಂದು ಹ್ಯಾಶ್​ಟ್ಯಾಗ್​ಗಳನ್ನು ಅಕ್ಷಯ್ ಹಾಕಿದ್ದಾರೆ. ಈ ಮುನ್ನ ಟ್ವಿಟರ್​​ನಲ್ಲಿ ಅಕ್ಷಯ್​ಕುಮಾರ್​ ಅವರ ಒಂದು ಸಂದೇಶ ಟ್ರೆಂಡ್ ಆಗುತ್ತಿತ್ತು. “ನನಗೊಂದು ಫೇವರ್ ಮಾಡಿ. ಹೋಳಿ ಆಡುವುದು ಬೇಡ. ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷತೆಗಾಗಿ ಮನೆಯಲ್ಲೇ ಆಚರಿಸಿ. ಎಲ್ಲರಿಗೂ ಹ್ಯಾಪಿ ಹೋಳಿ” ಎಂದು ಅಕ್ಷಯ್ ಇಂದು ಬೆಳಿಗ್ಗೆಯೇ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ:ಹಂಪಿಯಲ್ಲಿ ಇಲ್ಲ ಹೋಳಿ ಸಂಭ್ರಮ: ಮೊದಲ ಸಲ ಸ್ಥಳೀಯರೊಂದಿಗೆ ವಿದೇಶಿಗರ ರಂಗಿನಾಟವಿಲ್ಲ
ಈ ಬಾರಿ ಕರೊನಾ ಕೃಪೆಯಿಂದಾಗಿ ಮತ್ತೆ ಹೋಳಿಯ ಬಣ್ಣಗಳು ಮಂಕಾಗಿವೆ. ಸಾರ್ವಜನಿಕವಾಗಿ ಹೋಳಿ ಆಚರಣೆ ಮಾಡದಂತೆ ಬಹುತೇಕ ರಾಜ್ಯಗಳಲ್ಲಿ ಸರ್ಕಾರಿ ಆದೇಶಗಳು ಹೊರಬಿದ್ದಿವೆ. ಹೀಗಿರುವಾಗ ದೇಶದಲ್ಲೇ ಅತಿಹೆಚ್ಚು ಕರೊನಾ ಸೋಂಕು ಕಂಡುಬರುತ್ತಿರುವ ಮಹಾರಾಷ್ಟ್ರದ ಮುಂಬೈನಲ್ಲಿ ವಾಸಿಸುವ ಅಕ್ಷಯ್, ಮನೆಯಲ್ಲೇ ಇದ್ದು ಹೋಳಿಯನ್ನು ಕುಟುಂಬದೊಂದಿಗೆ ಆಚರಿಸಿ ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.(ಏಜೆನ್ಸೀಸ್)
ಇರ್ಫಾನ್​ಗೆ ಅತ್ಯುತ್ತಮ ನಟ ಮತ್ತು ಜೀವಮಾನ ಸಾಧನೆ ಪ್ರಶಸ್ತಿ; ಹಲವು ಟ್ರೋಫಿ ಗೆದ್ದ ‘ಥಪ್ಪಡ್’ ಚಿತ್ರ

VIDEO | ಹೊಸದಾಗಿ ಬಂದಿದೆ… ಮೂಗಿಗೆ ಮಾತ್ರ ಹಾಕುವ ಮಾಸ್ಕ್ !

ಚಿಕ್ಕ ಮಕ್ಕಳಲ್ಲಿ ಹೆಚ್ಚಿದ ಕರೊನಾ ಸೋಂಕು; ಎಚ್ಚರವಾಗಿರಲು ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
