ಮುಂಬೈ:ಮಹಾರಾಷ್ಟ್ರ ನವನಿರ್ಮಾಣ ಸೇನಾದ ಬಾವುಟದ ವಿನ್ಯಾಸ ಬದಲಾಗಿದೆ. ಇಂದು ನಡೆದ ಸಭೆಯಲ್ಲಿ ಹಿಂದುತ್ವವನ್ನು ಪ್ರತಿಪಾದಿಸುವ ಕೇಸರಿ ಬಣ್ಣದ ಬಾವುಟವನ್ನು ಹಾರಿಸಲಾಯಿತು.
ಬಾಳಾ ಠಾಕ್ರೆ ಅವರ ಜನ್ಮದಿನವಾದ ಇಂದು ಹೀಗೆ ಎಂಎನ್​ಎಸ್​ ಬಾವುಟ ಬದಲಾಯಿಸಿರುವುದು ಕಾಕತಾಳೀಯವಲ್ಲ. ಎಂಎನ್‌ಎಸ್ ಹೊಸ ಧ್ವಜವು ಕೇಸರಿ ಬಣ್ಣದಾಗಿದ್ದು ಅದರಲ್ಲಿ ಛತ್ರಪತಿ ಶಿವಾಜಿಯ ಆಳ್ವಿಕೆಯ ಕಾಲದ ಮುದ್ರೆ ಇದೆ. ಈ ಮೊದಲಿನದು ನೀಲಿ, ಹಸಿರು ಮತ್ತು ಕೇಸರಿ ಬಣ್ಣದಿಂದ ಕೂಡಿತ್ತು. ಅದರಲ್ಲಿ ರೈಲು ಇಂಜಿನ್​ನ ಚಿತ್ರವಿತ್ತು.
ಗುರುವಾರ ನಡೆದ ಎಂಎನ್​ಎಸ್​ ಸಭೆಯಲ್ಲಿ ಶಿವಾಜಿ ಮತ್ತು ವೀರ ಸಾವರ್ಕರ್​ ಅವರ ಭಾವಚಿತ್ರಗಳಿದ್ದವು. ಸಭೆಯಲ್ಲಿ ರಾಜ್​ ಠಾಕ್ರೆ ಅವರ ಮಗ ಅಮಿತ್​ ಕೂಡ ಭಾಗವಹಿಸಿದ್ದರು.
200ರಲ್ಲಿ ಶಿವಸೇನಾ ತೊರೆದ ರಾಜ್​ ಠಾಕ್ರೆ ಎಂಎನ್​ಎಸ್​ ಕಟ್ಟಿದ್ದರು. ನಂತರ ನಡೆದ ಚುನಾವಣೆಯಲ್ಲಿ ಒಟ್ಟು 289 ಸ್ಥಾನವಿರುವ ಮಹಾರಾಷ್ಟ್ರದಲ್ಲಿ ಎಂಎನ್​ಎಸ್​ನ ಒಬ್ಬರು ಮಾತ್ರ ಚುನಾಯಿತರಾಗಿದ್ದರು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − fourteen =
Remember me
