ಮುಂಬೈ:ಸೌಂದರ್ಯ, ನೃತ್ಯ, ಅಭಿನಯ ಎಲ್ಲವೂ ಇದ್ದರೂ ಪಾತ್ರ ಇಷ್ಟವಾದರೆ, ಸಂಭಾವನೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಪಾತ್ರಕ್ಕೆ ಜೀವ ತುಂಬುವ ನಟಿ ಸಾಯಿ ಪಲ್ಲವಿ ಸದ್ಯ ತೆಲುಗಿನ ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಎದುರು ನಟಿಸುತ್ತಿರುವುದು ಗೊತ್ತೇ ಇದೆ.
ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಸೊಂಟ ಬಳುಕಿಸಿದ ಮಹಿಳೆ! ಈ ರೋಗ ಇಲ್ಲಿಗೂ ಬಂತಾ… ನೆಟ್ಟಿಗರಿಂದ ಛೀಮಾರಿ
ತಾಂಡೇಲ್ ಜೊತೆಗೆ ಸಾಯಿ ಪಲ್ಲವಿ ಬಾಲಿವುಡ್‌ನ ಪ್ರತಿಷ್ಠಿತ ಚಿತ್ರ ರಾಮಾಯಣದಲ್ಲಿಯೂ ನಟಿಸುತ್ತಿದ್ದಾರೆ. ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಚಿತ್ರಕ್ಕೆ ಸಾಯಿ ಪಲ್ಲವಿ ಭಾರೀ ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಚಾಲ್ತಿಗೆ ಬಂದಿತ್ತು. ಈ ಚಿತ್ರಕ್ಕಾಗಿ ಈ ಚೆಲುವೆ ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ಸಾಮಾನ್ಯವಾಗಿ ಪ್ರತಿ ಚಿತ್ರಕ್ಕೆ 2 ಕೋಟಿ ರೂ.ಪಡೆಯುವ ಸಾಯಿ ಪಲ್ಲವಿ ರಾಮಾಯಣಕ್ಕೆ 15 ಕೋಟಿ ರೂ.ಪಡೆಯಲಿದ್ದಾರೆ ಎನ್ನಲಾಗುತ್ತಿದೆ.
ರಾಮಾಯಣ ಸಿನಿಮಾ ಮೂರು ಭಾಗಗಳಲ್ಲಿ ತಯಾರಾಗುತ್ತಿದ್ದು, ಮೂರು ಭಾಗಗಳಿಗೆ ಸಾಯಿ ಪಲ್ಲವಿ 10-15 ಕೋಟಿ ರೂ. ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಇದು ನಿಜವೇ ಆಗಿದ್ದರೆ ಸಂಭಾವನೆ ವಿಚಾರದಲ್ಲಿ ಸಾಯಿ ಪಲ್ಲವಿ ನಯನತಾರಾ ಅವರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾರೆ. ಸೀತೆಯ ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ ಸಾಯಿ ಪಲ್ಲವಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ಸಿನಿಮಾ ರಾಮಾಯಣದಲ್ಲಿ ರಣಬೀರ್, ಯಶ್ ಮತ್ತಿತರರು ನಟಿಸುತ್ತಿರುವುದು ಗೊತ್ತೇ ಇದೆ.
ಮಲಯಾಳಂನ ‘ಪ್ರೇಮಂ’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದ ಸಾಯಿ ಪಲ್ಲವಿ ಹಿಂತಿರುಗಿ ನೋಡಿದ್ದೇ ಇಲ್ಲ. ತೆಲುಗಿನಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದರ. ಆದರೆ ಕಳೆದ ಎರಡು ವರ್ಷಗಳಿಂದ ನಟನೆಗೆ ಬ್ರೇಕ್ ನೀಡಿದ್ದ ಈ ಮುದ್ದಾದ ಹುಡುಗಿ ಇತ್ತೀಚೆಗೆ ಮತ್ತೆ ಬ್ಯುಸಿಯಾಗಿದ್ದಾಳೆ. ಸದ್ಯ ಸಾಯಿ ಪಲ್ಲವಿ ತಮಿಳಿನಲ್ಲಿ ಸಿನಿಮಾ ಮಾಡುತ್ತಿದ್ದು, ಆಮೀರ್ ಪುತ್ರ ಜುನೈದ್ ಖಾನ್ ಜೊತೆ ಹಿಂದಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.
ನನಗೆ ಗಂಡಸು ಬೇಕಿಲ್ಲ.. ಬಾಹುಬಲಿ ನಾಯಕಿ ಬೋಲ್ಡ್ ಕಾಮೆಂಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
