ನವದೆಹಲಿ:ಬ್ಯಾಡ್ಮಿಂಟನ್​ ಚಾಂಪಿಯನ್​ ಸೈನಾ ನೆಹ್ವಾಲ್​ ಬುಧವಾರ ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದು, ಫೆಬ್ರವರಿ 8ರಂದು ನಿಗದಿಯಾಗಿರುವ ರಾಷ್ಟ್ರ ರಾಜಧಾನಿ ದೆಹಲಿ ಚುನಾವಣೆಗೆ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೈನಾ ನೆಹ್ವಾಲ್​ ಜತೆ ಸಹೋದರಿ ಚಂದ್ರಂಶು ಕೂಡ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್​ ಸಿಂಗ್​ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಬಳಿಕ ಇಬ್ಬರು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ನೆಹ್ವಾಲ್​, ದೇಶಕ್ಕಾಗಿ ನಾನು ಪದಕಗಳನ್ನು ಗೆದ್ದಿದ್ದೇನೆ. ನಾನು ತುಂಬಾ ಶ್ರಮ ಜೀವಿ ಮತ್ತು ಶ್ರಮ ಪಡುವವರನ್ನು ನಾನು ಇಷ್ಟಪಡುತ್ತೇನೆ. ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಕಷ್ಟು ದುಡಿದಿರುವುದನ್ನು ನೋಡಿದ್ದೇನೆ. ಅವರೊಂದಿಗೆ ಕೈಜೋಡಿಸಿ ದೇಶಕ್ಕಾಗಿ ಏನಾದರೂ ಮಾಡಬೇಕೆಂದು ಬಯಸಿದ್ದೇನೆ ಎಂದರು. ಅಲ್ಲದೆ, ಪ್ರಧಾನಿ ಮೋದಿ ಅವರಿಂದ ಸಾಕಷ್ಟು ಸ್ಫೂರ್ತಿಗೊಂಡಿದ್ದಾಗಿ ತಿಳಿಸಿದರು.
ಹರಿಯಾಣದ ಹಿಸ್ಸಾರ್​ ಮೂಲದ ಸೈನಾ ನೆಹ್ವಾಲ್​(29) ಬಿಜೆಪಿ ಸೇರಿರುವದರಿಂದ ಪಕ್ಷಕ್ಕೆ ಪ್ರಭಾವಿ ಮಹಿಳೆಯೊಬ್ಬರ ಆಗಮನವಾಗಿದೆ. ಪ್ರಖ್ಯಾತ ಕ್ರೀಡಾಪಟು ಆಗಿದ್ದು ಬಹುದೊಡ್ಡ ಅಭಿಮಾನಿಗಳ ಬಳಗ ಹೊಂದಿರುವುದರಿಂದ ಪಕ್ಷಕ್ಕೂ ಹೊಸ ವರ್ಚಸ್ಸು ಬರುವ ನಿರೀಕ್ಷೆ ಇದೆ. ಅಂದಹಾಗೆ ಸೈನಾ ನೆಹ್ವಾಲ್​ 2020ರಲ್ಲಿ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ತಯಾರಿ ನಡೆಸುತ್ತಿದ್ದು, ಇದರ ನಡುವೆ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ.
ಮಾಜಿ ನಂ 1 ಬ್ಯಾಡ್ಮಿಂಟನ್​ ತಾರೆಯಾಗಿರುವ ನೆಹ್ವಾಲ್​, ದೇಶದ ಅತ್ಯುನ್ನತ ಪ್ರಶಸ್ತಿಗಳಾದ ರಾಜೀವ್​ ಗಾಂಧಿ ಖೇಲ್​ ರತ್ನ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ನೆಹ್ವಾಲ್​ 24 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಲಂಡನ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ವಿಶ್ವದ ಬ್ಯಾಡ್ಮಿಂಟನ್ ತಾರೆಗಳಲ್ಲಿ 2019ರಲ್ಲಿ 2 ಮತ್ತು 2015ರಲ್ಲಿ 1ನೇ ಸ್ಥಾನದಲ್ಲಿದ್ದರು.​
ತಮ್ಮ ಟ್ವೀಟ್​ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದುದ್ದು ಬಿಜೆಪಿ ಕಡೆಗಿನ ಅವರ ಆಸಕ್ತಿಯನ್ನು ತೋರುತ್ತಿತ್ತು.(ಏಜೆನ್ಸೀಸ್​)
Delhi: Badminton Player Saina Nehwal joins BJP in the presence of Party's National General Secretary Arun Singhpic.twitter.com/uXPSJmDVcn— ANI (@ANI)January 29, 2020
Delhi: Badminton Player Saina Nehwal joins BJP in the presence of Party's National General Secretary Arun Singhpic.twitter.com/uXPSJmDVcn
Saina Nehwal's sister Chandranshu also joined BJPhttps://t.co/UwmOe8Hifypic.twitter.com/29BDF4G2QW— ANI (@ANI)January 29, 2020
Saina Nehwal's sister Chandranshu also joined BJPhttps://t.co/UwmOe8Hifypic.twitter.com/29BDF4G2QW
Delhi: Badminton Player Saina Nehwal and her sister Chandranshu meet BJP Chief JP Nadda after joining the party earlier today.https://t.co/5Ds3pSjFNJpic.twitter.com/TnTCJ4zQV9— ANI (@ANI)January 29, 2020
Delhi: Badminton Player Saina Nehwal and her sister Chandranshu meet BJP Chief JP Nadda after joining the party earlier today.https://t.co/5Ds3pSjFNJpic.twitter.com/TnTCJ4zQV9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 4 =
Remember me
