ಹೈದರಾಬಾದ್​​:ನೀರಜ್ ಚೋಪ್ರಾ 2021ರಲ್ಲಿ ಚಿನ್ನದ ಪದಕ ಗೆಲ್ಲುವವರೆಗೂ ಜಾವೆಲಿನ್ ಒಲಿಂಪಿಕ್ ಕ್ರೀಡೆ ಎಂದು ತನಗೆ ತಿಳಿದಿರಲಿಲ್ಲ ಎಂದು ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ.
ಇದನ್ನು ಓದಿ:ಪ್ಯಾರಿಸ್​ ಒಲಿಂಪಿಕ್ಸ್​​ 2024; ಬ್ರೇಕಿಂಗ್​​​​ ವಿಭಾಗದಲ್ಲಿ ಹೈಲೈಟ್ ಆದ ‘ಇಂಡಿಯಾ’ ​​.. ಕಾರಣ ಹೀಗಿದೆ
ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಸೈನಾ, ನೀರಜ್ ಗೆದ್ದಾಗ, ಅಥ್ಲೆಟಿಕ್ಸ್​ನಲ್ಲಿ ಈ ಆಟವೂ ಇದೆ ಎಂಬುದು ನನಗೆ ತಿಳಿಯಿತು. ನೀವು ಆ ಕ್ರೀಡೆಯನ್ನು ನೋಡಿದಾಗ ಮಾತ್ರ ನಿಮಗೆ ಅದರ ಬಗ್ಗೆ ತಿಳಿಯುತ್ತದೆ. ನೋಡದಿದ್ದರೆ ಹೇಗೆ ತಿಳಿಯುತ್ತದೆ? ಜಾವೆಲಿನ್​ ಎಸೆತದ ಬಗ್ಗೆ ನನ್ಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅದಷ್ಟೆ ಅಲ್ಲದೆ, ಅಥ್ಲೆಟಿಕ್ಸ್‌ನಲ್ಲಿ ಹಲವು ಕ್ರೀಡೆಗಳಿವೆ. ಫಲಿತಾಂಶ ಬಂದ ನಂತರವೇ ಕ್ರೀಡೆ ಬಗ್ಗೆ ತಿಳಿಯುತ್ತದೆ. ಬ್ಯಾಡ್ಮಿಂಟನ್ ಬಗ್ಗೆಯೂ ಜನರಿಗೆ ತಿಳಿದಿರಲಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರಕಾಶ್ ಸರ್ ಯಾರೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದರು.
ತಿಳಿದುಕೊಳ್ಳಲು ಬಯಸುವುದಿಲ್ಲ ಎಂದು ಅರ್ಥ ಅಲ್ಲ. ನೀವು ನಿಮ್ಮ ವಿಭಾಗದಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಬೇರೆ ವಿಚಾರವನ್ನು ಎಷ್ಟು ಅರ್ಥಮಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ನೀವು ಎಲ್ಲಾ ವಿಚಾರವನ್ನು ಗೂಗಲ್​ ಮಾಡಬೇಕಾಗುತ್ತದೆ. ಯಾರೇ ಆದರೂ ನಿಮ್ಮ ಸ್ವಂತ ಕ್ಷೇತ್ರದಲ್ಲಿ ಪರಿಪೂರ್ಣರಾಗಿದ್ದರೆ ಸಾಕು ಎಂದು ತಿಳಿಸಿದರು.
ಸದ್ಯ ಸೈನಾ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಗನಾ ರಣಾವತ್​ ಆಫ್​ ಸ್ಫೋಟ್ಸ್​​​​ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಸೈನಾ ನೆಹ್ವಾಲ್​ ಕ್ರೀಡಾಪಟುವಾಗಿದ್ದು ಈ ಹೇಳಿಕೆ ಆಕೆಯ ಅಜ್ಞಾನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ನೀರಜ್​ ಚೋಪ್ರಾ ಮತ್ತು ಪ್ರಕಾಶ್​​ ಅವರ ಬಗ್ಗೆ ತಿಳಿದಿಲ್ಲ ಎಂಬ ಮಾತಿಗೆ, ಇಡೀ ಭಾರತಕ್ಕೆ ಸೈನಾ ನೆಹ್ವಾಲ್ ಮಾತ್ರ ತಿಳಿದಿತ್ತು ಏಕೆಂದರೆ ಅವರ ಹೆಸರು ಟೆನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾಗೆ ಹೋಲುತ್ತದೆ ಎಂದು ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.
ಸೈನಾ ಮತ್ತು ನೀರಜ್ ಇಬ್ಬರೂ ಹರಿಯಾಣದವರು. ಮೂರು ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದಿದ್ದಾರೆ. ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಸೈನಾ ನೆಹ್ವಾಲ್ ಸದ್ಯ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. 2020ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.(ಏಜೆನ್ಸೀಸ್​​)
ಕಮಲಾ ಹ್ಯಾರಿಸ್​ ಸಂದರ್ಶನಕ್ಕೆ ಎಲಾನ್​​​ ಮಸ್ಕ್​ ಆಹ್ವಾನ; ಪೋಸ್ಟ್​ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 19 =
Remember me
