ಜಮ್ಮು-ಕಾಶ್ಮೀರ: ಭಾರತೀಯ ಸೇನೆ ವಿರುದ್ಧ ಕೆಟ್ಟದಾಗಿ ಟ್ವಿಟರ್​​ನಲ್ಲಿ ಪೋಸ್ಟ್​ ಹಾಕಿದ್ದ ಜೆಎನ್​ಯು ವಿದ್ಯಾರ್ಥಿ ಸಜೀಬ್​ (ಸೈಯದ್​) ವಿರುದ್ಧ ನಿನ್ನೆ ಎಫ್​ಐಆರ್​ ದಾಖಲಾಗಿದೆ. ಅದರ ಬೆನ್ನಲ್ಲೇ ಹುತಾತ್ಮ ಸ್ಕ್ವಾಡ್ರನ್​ ಲೀಡರ್​ ರವಿ ಖನ್ನಾ ಅವರ ಪತ್ನಿ ನಿರ್ಮಲಾ ಖನ್ನಾ, ಸೈಯದ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರೆಲ್ಲ ತುಕ್ಡೆ ತುಕ್ಡೆ ಗ್ಯಾಂಗ್​ನವರು. ಸೇನೆ ವಿರುದ್ಧ ಮಾತನಾಡುವ ಇಂಥ ದೇಶದ್ರೋಹಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ:ಕೋವಿಡ್‍ ರಿಪೋರ್ಟಿಂಗ್ ಕರ್ನಾಟಕ ಬೆಸ್ಟ್ – ಸ್ಟ್ಯಾನ್ ಫೋರ್ಡ್ ಅಧ್ಯಯನ ವರದಿ
ಮಾಧ್ಯಮವೊಂದು ನಡೆಸಿದ್ದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಲಾ ಖನ್ನಾ, ಭಾರತೀಯ ಸೇನೆ ಕಾಶ್ಮೀರದಲ್ಲಿ ನರಮೇಧ ನಡೆಸುತ್ತಿದೆ ಎಂದು ಹೇಳಿರುವ ಜೆಎನ್​​ಯು ವಿದ್ಯಾರ್ಥಿಗೆ ನಾಚಿಕೆ ಆಗಬೇಕು. ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟಿರುವ ಸೈನಿಕರ ವಿರುದ್ಧ ಓದಿರುವ, ಶಿಕ್ಷಣವಂತರಾಗಿರುವವರೇ ಕೆಟ್ಟದಾಗಿ ಮಾತನಾಡುವುದು ನಿಜಕ್ಕೂ ವಿಪರ್ಯಾಸ ಎಂದಿದ್ದಾರೆ.ನಮ್ಮ ದೇಶದಲ್ಲಿ ಇದ್ದುಕೊಂಡು ಪಾಕಿಸ್ತಾನದ ಜಪ ಮಾಡುತ್ತ, ದ್ರೋಹ ಎಸಗುತ್ತಿರುವವರಿಗೆ ಸರ್ಕಾರ ಕಠಿಣ ಶಿಕ್ಷೆ ನೀಡಬೇಕು. ಈ ತುಕ್ಡೆ ತುಕ್ಡೆ ಗ್ಯಾಂಗ್​ ರಾಷ್ಟ್ರದ ಭವಿಷ್ಯಕ್ಕೇ ಮಾರಕವಾಗಿದೆ ಎಂದು ಹೇಳಿದ್ದಾರೆ.
ನಿರ್ಮಲಾ ಖನ್ನಾ ಅವರ ಪತಿ ರವಿ ಖನ್ನಾ ಅವರು 1990ರ ದಶಕದಲ್ಲಿ ಯಾಸಿನ್​ ಮಲಿಕ್ ಮತ್ತು ಆತನ ಸಹಚರರಿಂದ ಹುತಾತ್ಮರಾಗಿದ್ದಾರೆ. ರವಿ ಖನ್ನಾ ಮತ್ತು ಅವರ ಸಹೋದ್ಯೋಗಿಗಳು ಸಶಸ್ತ್ರರಹಿತರಾಗಿ ಬಾಘತ್​ ಚೌಕ್​ನಲ್ಲಿ ನಿಂತು ಬಸ್​ಗೆ ಕಾಯುತ್ತಿದ್ದಾಗ, ಉಗ್ರರು ಹೇಡಿಗಳಂತೆ ಆಗಮಿಸಿ ಅವರನ್ನು ಹತ್ಯೆ ಮಾಡಿದ್ದರು. (ಏಜೆನ್ಸೀಸ್​)
ಸೊಸೆಯ ದುಷ್ಟಶಕ್ತಿ ಓಡಿಸಲು ಮಾವನ ಸಾಯಿಸಿದ ‘ದೇವಮಾನವ’ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 13 =
Remember me
