
ಕೆಲವೊಂದು ತಿಂಗಳಲ್ಲಿ 30 ದಿನ ಇದ್ರೆ ಇನ್ನೂ ಹಲವು ತಿಂಗಳಿನಲ್ಲಿ 31 ದಿನ ಇರುತ್ತೆ. ಜನವರಿಯಂದೇ ಯಾಕೆ ವರ್ಷ ಪ್ರಾರಂಭವಾಗುತ್ತೆ? ಒಂದು ವರ್ಷಕ್ಕೆ 12 ತಿಂಗಳು ಯಾಕೆ? ಅಷ್ಟಕ್ಕೂ ಮೊದಲು ಕ್ಯಾಲೆಂಡರನ್ನ ಪರಿಚಯಿಸಿದ್ದು ಯಾರು? ಈ ಎಲ್ಲಾ ಪ್ರಶ್ನೆಗೆ ಏನು ಉತ್ತರ ಅನ್ನೋದನ್ನ ನೋಡೋಣ:
ಕಾಲವನ್ನ ಸೂಚಿಸಿ ಜನವರಿ, ಫೆಬ್ರವರಿ ಅಮತಾ ಹೆಸರಿಟ್ಟುದ್ದು ಅನ್ನೋದನ್ನ ನೋಡೋಣ. ಹಳೇ ಕ್ಯಾಲೆಂಡರ್​​ ಹೋಗಿ ಈ ವರ್ಷದ ಹೊಸ ಕ್ಯಾಲೆಂಡರ್​ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಅದನ್ನ ನಾವು ಮೋಬೈಲ್​​ ಸ್ಕ್ರೀನ್​​ನಲ್ಲೂ ಬದಲಾಗಿರೋದನ್ನ ನೋಡೋಣ.
ಕ್ಯಾಲೆಂಡರ್​​ ಅನ್ನೋದು ಲ್ಯಾಟಿನ್​ನ ಕ್ಯಾಲೆಂಡೆ ಅನ್ನೋ ಪದದಿಂದ ಬಂದಿದೆ. ರೋಮ್​ನಲ್ಲಿ ತಿಂಗಳ ಮೊದಲ ದಿನವನ್ನ ಕ್ಯಾಲೆಂಡೆ ಅಂತ್ಹೇಳಿ ಕರೀತಾರೆ. ಇನ್ನು ಕ್ಯಾಲೆಂಡರ್​​ಗೂ ಸಾಕಷ್ಟು ವರ್ಷದ ಇತಿಹಾಸವಿದೆ. ಹಿಂದಿನ ಕಾಲದಲೆಲ್ಲಾ ಸೂರ್ಯ, ಚಂದ್ರ ಬದಲಾದಂತೆ ಟೈಮ್​ ಅಳೆಯಲಾಗುತ್ತಿತ್ತು. ಇಲ್ಲಿ ಚಂದ್ರನೇ ಮುಖ್ಯ ಆಧಾರವಾಗಿರೋದ್ರಿಂದ ಅದನ್ನ ಲೂನಾರ್​ ಕ್ಯಾಲೆಂಡರ್​ ಅಮತ್ಹೇಳಿ ಕರೆಯಲಾಗುತ್ತಿತ್ತು.
ಕ್ರಿಸ್ತಪೂರ್ವ 3 ಸಾವಿರದಿಂದ 1 ಸಾವಿರದವರೆಗಿದ್ದ ಈಜಿಪ್ಟಿನ್​​ನರು, ಸುಮೇರಿಯನರು ಮತ್ತು ವೇದಿಕ್​​​ ಕಾಲದ ಭಾರತೀಯರು ಈ ಲೂನಾರ್​​​ ಕ್ಯಾಲೆಂಡರನ್ನೇ ಬಳಸುತ್ತಿದ್ದರು.
ಭಾರತದಲ್ಲಿ ಖಗೋಳಶಾಸ್ತ್ರಕ್ಕೆ ಬದ್ಧವಾದ ಸರಿಯಾಗಿ ರಚಿಸಿದ ಕ್ಯಾಲೆಂಡರ್​ ಪ್ರಚಲಿತದಲ್ಲಿತ್ತೆಂದು ಇತಿಹಾಸಕಾರರು ಹೇಳುತ್ತಾರೆ. ನಂತರದಲ್ಲಿ ಮಾಯನ್​ ಕ್ಯಾಲೆಂಡರ್​​, ಹಿಂದು ಕ್ಯಾಲೆಂಡರ್​, ಇಸ್ಲಾಮಿಕ್​​ ಕ್ಯಾಲೆಂಡರ್​ ಪ್ರಚಲಿತದಲಿದ್ವು. ಈಗ ಈ ಎಲ್ಲಾ ಕ್ಯಾಲೆಂಡರ್​ಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ಹಬ್ಬ ಹರಿದಿನಗಳಿಗೆ ಆಯಾ ಧರ್ಮದವರೂ ಈ ಕ್ಯಾಲೆಂಡರ್​​ಗಳನ್ನ ಬಳಸುತ್ತಾರೆ.
ವಿಶ್ವಾದ್ಯಂತ ಬಳುಸುತ್ತಿರುವ ಕ್ಯಾಲೆಂಡರ್​ ಯಾವುದು?ನಾವಿದೀಗ ವಿಶ್ವಾದ್ಯಂತ ಜಾಗತಿಕವಾಗಿ ಬಳಸುತ್ತಿರೋದು ಗ್ರೆಗೊರಿಯನ್​ ಕ್ಯಾಲೆಂಡರ್​​. ಇದನ್ನ 1582 ರಲ್ಲಿ ರೋಮನ್​ ಕ್ಯಾಥೋಲಿಕ್​ ಚರ್ಚ್​​ನ ಪೋಪ್​ ಗ್ರೆಗರಿ13 ಅನ್ನುವವರು ತೆಗೆದುಕೊಂಡು ಬಂದವರು. ಆದ್ದರಿಂದ ಈ ಕ್ಯಾಲೆಂಡರ್​ಗೆ ಗ್ರೆಗೊರಿಯನ್​ ಕ್ಯಾಲೆಂಡರ್​ ಅನ್ನುವಂತಹ ಹೆಸರು ಬಂತು.
ಈ ಕ್ಯಾಲೆಂಡರ್​​ನ ಮೂಲವನ್ನ ಹುಡುಕಿಕೊಂಡು ಹೋದಲ್ಲಿ ನಮಗೆ ರೋಮನ್​ ಮತ್ತು ಜೂಲಿಯನ್​ ಕ್ಯಾಂಲೆಂಡರ್​ಗಳು ಸಿಗುತ್ತದೆ. ರೋಮ್​ನ ಸ್ಥಾಪಕ ರೋಮಲನ್​ ಈ ರೋಮನ್​ ಕ್ಯಾಲೆಂಡರ್​ ಸಿದ್ಧ ಪಡಿಸಿದ್ದ ಎಂದು ಹೇಳಲಾಗುತ್ತೆ. ಇದೂ ಲೂನಾರ್​ ಕ್ಯಾಲೆಂಡರ್​ ಆಗಿದ್ದು, ಇದರಲ್ಲಿ 304 ದಿನಗಳ 10 ತಿಂಗಳು ಮಾತ್ರವಿತ್ತು, ಅಲ್ಲದೇ ವರ್ಷದ ಮೊದಲ ತಿಂಗಳು ಮಾರ್ಚ್​ ಎಂದು ಪರಿಗಣಿಸಲಾಗಿತ್ತು.
ಗ್ರೆಗರಿ ಕ್ಯಾಲೆಂಡರನ್ನೇ ಜಗತ್ತಿನ ರಾಜ ವಂಶಸ್ತರು ಫಾಲೋ ಮಾಡೋಕೆ ಪ್ರಾರಂಭಿಸಿದ್ರು. ದೇಶಗಳ ಅದನ್ನೇ ಫಾಲೋ ಮಾಡೋಕೆ ಶುರು ಮಾಡಿದ್ವು. ಪರಿಣಾಮ ಇದೀಗ ವಿಶ್ವಾದ್ಯಂ.ತ ಗ್ರೆಗೊರಿಯನ್​ ಕ್ಯಾಲೆಂಡರನ್ನೇ ಫಾಲೋ ಮಾಡುತ್ತಿದ್ದಾರೆ.
ಇನ್ನು ಪ್ರಾಚೀನ ರೋಮನ್​ ಕ್ಯಾಲೆಂಡರ್​​ಗಳಲ್ಲಿ 8 ದಿನಗಳ ವಾರವಿತ್ತು ಬಳಿಕ ಅದನ್ನ 7 ದಿನಕ್ಕೆ ಸೀಮಿತಗೊಳಿಸಲಾಯ್ತು. ಅದರಲ್ಲಿ ಬರುವ ದಿನಗಳಿಗೆ ಗ್ರಹಗಳ ಹೆಸರನ್ನ ಗ್ರೀಕ್​ ಮತ್ತ ಲ್ಯಾಟಿನ್​ ಭಾಷೆಗಳಲ್ಲಿ ಇಡಲಾಯ್ತು.SUNDAY-ಸೂರ್ಯ, MON-ಸೂರ್ಯ , TUES- ಚಂದ್ರ , WED-ಮಂಗಳ , THU-ಬುಧ , FRI-ಶುಕ್ರ, SAT-ಶನಿ ,ಇನ್ನು ಸೂರ್ಯ ಭೂಮಿಯನ್ನ ಸುತ್ತು ಹಾಕೋಕೆ 365 ದಿನ ಬೇಕು ಹಾಗಾಗಿ ವರ್ಷಕ್ಕೆ 365 ದಿನ ಎಂದು ಪರಿಗಣಿಸಲಾಗುತ್ತೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
