ಹೈದರಬಾದ್​​:ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ಎಂಬ ನಿರ್ಮಾಣ ಕಂಪನಿಯನ್ನು ಸ್ಥಾಪಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಗೊತ್ತೇ ಇದೆ. ಅವರ ಪತ್ನಿ ಸಾಕ್ಷಿ ಈ ಪ್ರೊಡಕ್ಷನ್ ಹೌಸ್‌ ನೋಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:VIDEO| ಗಿನ್ನೆಸ್ ದಾಖಲೆ ಬರೆದ ವಿಶ್ವದ ಅತ್ಯಂತ ಚಿಕ್ಕ ಎಸ್ಕಲೇಟರ್
ಈ ನಿರ್ಮಾಣ ಸಂಸ್ಥೆಯ ಮೊದಲ ಪ್ರಾಜೆಕ್ಟ್, LGM ಎಂಬ ತಮಿಳು ಚಲನಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಕಾಲಿವುಡ್ ಯಂಗ್ ಹೀರೋ ಹರೀಶ್ ಕಲ್ಯಾಣ್ ಮತ್ತು ಲವ್ ಟುಡೇ ಸಿನಿಮಾ ಖ್ಯಾತಿಯ ಇವಾನಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಫ್ಯಾಮಿಲಿ, ಕಾಮಿಡಿ ಎಂಟರ್​​​ಟೈನರ್ ಆಗಿ ಮೂಡಿಬರಲಿದೆ. ಈ ಸಿನಿಮಾ ತಮಿಳು ಜತೆಗೆ ತೆಲುಗಿನಲ್ಲಿಯೂ ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಆಟೋ ಪ್ರಯಾಣ ಸಖತ್​​ ದುಬಾರಿ; 500 ಮೀಟರ್ ಆಟೋ ಸವಾರಿಗೆ 100 ರೂ. ವಸೂಲಿ
ಹೈದರಾಬಾದ್​​ನಲ್ಲಿ ‘ಎಲ್​ಜಿಎಂ’ ಸಿನಿಮಾದ ಪ್ರಮೋಷನ್​ ವೇಳೆ ಮಾತನಾಡಿದ ಸಾಕ್ಷಿ, ಅಲ್ಲು ಅರ್ಜುನ್ ಅವರ ನಟನೆ ಎಂದರೆ ನನಗೆ ಇಷ್ಟ ಎಂದು ಹೇಳಿದ್ದಾರೆ. ಪತ್ರಕರ್ತರೊಬ್ಬರು ಸಾಕ್ಷಿಯನ್ನು ಪ್ರಶ್ನಿಸಿದರು..’ಪವನ್ ಕಲ್ಯಾಣ್ ಮತ್ತು ಪ್ರಭಾಸ್ ಅವರಂತಹ ಟಾಲಿವುಡ್ ಸ್ಟಾರ್‌ ಜತೆಗೆ ಸಿನಿಮಾ ಮಾಡುತ್ತೀರಾ?’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಾಕ್ಷಿ.. “ಇಬ್ಬರೂ ದೊಡ್ಡ ಸ್ಟಾರ್‌ಗಳು. ನಾನಿನ್ನೂ ಆರಂಭಿಕ ಹಂತದಲ್ಲಿದ್ದೇನೆ. ಪವನ್ ಕಲ್ಯಾಣ್ ಮತ್ತು ಪ್ರಭಾಸ್​​​ ಅವರಿಗೆ ಸಂಭಾವನೆ ಕೊಡುವಷ್ಟು ಹಣ ನನ್ನ ಬಳಿ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಬರೋಬ್ಬರಿ 87 ಸಾವಿರ ವಾಹನಗಳನ್ನು ಹಿಂಪಡೆಯಲಿರುವ ಮಾರುತಿ ಸುಜುಕಿ
ಮತ್ತೊಬ್ಬ ವರದಿಗಾರ, ‘ಧೋನಿ ಅವರು ನಾಯಕನಾಗಿ ಸಿನಿಮಾ ಮಾಡುವ ಸಾಧ್ಯತೆ ಇದೆಯೇ?’  ಸಾಕ್ಷಿ , “ಏನೋ ಆಗಬಹುದು. ನಾನು ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗುತ್ತಿವೆ.
ನಾಯಕಿಯರ ಸೀರೆ ಎಳೆಯುವುದು ನನಗೆ ಬೇಸರತರಿಸುತ್ತದೆ ಎಂದ ಖ್ಯಾತ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
