ನವದೆಹಲಿ:ಬಿಜೆಪಿ ವಿರುದ್ಧ ಕೆಂಡಕಾರಿದ ಭಾರತೀಯ ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್, ಬಿಜೆಪಿಯು ಮಾಜಿ ಡಬ್ಲ್ಯೂಎಫ್​ಐ ಮುಖ್ಯಸ್ಥ ಬ್ರಿಜ್​ಭೂಷಣ್ ಪುತ್ರ ಕರಣ್​ ಭೂಷಣ್​ಗೆ ಉತ್ತರಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ನೀಡಿದ್ದನ್ನು ಖಂಡಿಸಿದ್ದಾರೆ. ಆತನ ಪುತ್ರನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ ದಿನವೇ ಭಾರತೀಯ ಹೆಣ್ಣುಮಕ್ಕಳು ಸೋಲನ್ನು ಕಂಡರು ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:ಹಾಸನ ಪೆನ್​ಡ್ರೈವ್​ ಪ್ರಕರಣ: ಸಂತ್ರಸ್ತೆ ನಾಪತ್ತೆ, ಮಾಜಿ ಸಚಿವ ಎಚ್.​ಡಿ. ರೇವಣ್ಣಗೆ ಮತ್ತೊಂದು ಸಂಕಷ್ಟ!
ಬಿಜೆಪಿ ಯಾವಾಗ ಇಂತಹ ನಿರ್ಧಾರ ಕೈಗೊಂಡಿತೋ ಅಂದೇ ಭಾರತದ ಹೆಣ್ಣುಮಕ್ಕಳು ಸೋತರು, ಬ್ರಿಜ್​ಭೂಷಣ್​ ಗೆದ್ದ ಎಂದು ತಮ್ಮ ಎಕ್ಸ್​ (ಈ ಹಿಂದಿನ ಟ್ವಿಟರ್​) ಖಾತೆಯಲ್ಲಿ ಬರೆದು ಕಿಡಿಕಾರಿದ್ದಾರೆ. “ಅರೆಸ್ಟ್​ ಬಿಟ್ಟಾಕಿ, ಇಂದು ಅವರ ಮಗನಿಗೆ ಟಿಕೆಟ್ ನೀಡುವ ಮೂಲಕ ದೇಶದ ಕೋಟ್ಯಂತರ ಹೆಣ್ಣು ಮಕ್ಕಳ ನೈತಿಕ ಸ್ಥೈರ್ಯವನ್ನು ಮುರಿದಿದ್ದೀರಿ. ಒಂದೇ ಕುಟುಂಬಕ್ಕೆ ಟಿಕೆಟ್ ಬಂದರೆ ಒಬ್ಬ ವ್ಯಕ್ತಿಯ ಮುಂದೆ ದೇಶದ ಸರ್ಕಾರ ಇಷ್ಟೊಂದು ದುರ್ಬಲವಾಗಿದೆಯೇ? ಭಗವಂತ ಶ್ರೀರಾಮನ ಹೆಸರಿನಲ್ಲಿ ಕೇವಲ ಮತಗಳು ಮಾತ್ರವೇ? ಅವರು ತೋರಿಸಿದ ಮಾರ್ಗದ ಬಗ್ಗೆ?” ಎಂದು ಪ್ರಶ್ನಿಸಿದ್ದಾರೆ.
ಕಳೆದ ವರ್ಷ ಕುಸ್ತಿಗೆ ನಿವೃತ್ತಿ ಘೋಷಿಸಿದ ಸಾಕ್ಷಿ, ದೇಶದ ಹೆಸರಾಂತ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ, ವಿನಿಶ್​ ಫೋಗಟ್ ಜತೆಗೆ ಡಬ್ಲ್ಯೂಎಫ್​ಐ ಮುಖ್ಯಸ್ಥರಾಗಿ​ ಬ್ರಿಜ್​ಭೂಷಣ್​ ಅಧಿಕಾರದಲ್ಲಿದ್ದಾಗ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ನೇರವಾಗಿ ಆರೋಪಿಸಿ, ನ್ಯಾಯಕ್ಕಾಗಿ ಮನವಿ ಮಾಡಿದ್ದರು.
https://twitter.com/SakshiMalik/status/1786035687722021153
ತದನಂತರ ಕೆಲವು ತಿಂಗಳ ಕಾಲ ಜಂತರ್​ ಮಂತರ್​ ಮುಂದೆ ಕುಳಿತು ಬ್ರಿಜ್​ಭೂಷಣ್​ ಬಂಧನಕ್ಕಾಗಿ ಆಗ್ರಹಿಸಿ, ಪ್ರತಿಭಟನೆ ಮಾಡಿದ ಕುಸ್ತಿಪಟುಗಳು, ಅಂತಿಮವಾಗಿ ನಮಗೆ ನ್ಯಾಯ ದೊರಕಲಿಲ್ಲ. ನಮಗೆ ಮತ್ತು ನಮ್ಮ ಇಡೀ ಕುಸ್ತಿಪಟು ವರ್ಗಕ್ಕೆ ನ್ಯಾಯ ಸಿಗದೆ, ಅನ್ಯಾಯವಾಗಿದೆ ಎಂದು ಕಣ್ಣೀರಾಕುವ ಮೂಲಕ ಅಸಮಾಧಾನ ಹೊರಹಾಕಿದ್ದರು,(ಏಜೆನ್ಸೀಸ್).
ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

ಜೀವನದಲ್ಲಿ ಇದೆಲ್ಲಾ ಇದ್ದದ್ದೇ ಬಿಡಿ… ಕಡೆಗೂ ಎಂಐ ನಾಯಕತ್ವದ ಬಗ್ಗೆ ಮೌನಮುರಿದ ರೋಹಿತ್ ಶರ್ಮಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
