ಮುಂಬೈ:ಭಾರತೀಯ ಬ್ಯಾಂಕುಗಳ ಸಂಘವು 11ನೇ ಬೈಪರ್​ಟೈಟ್ ವೇತನ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರ ಅನ್ವಯ ಉದ್ಯೋಗಿಗಳ ವೇತನ ಶೇ.15 ಹೆಚ್ಚಳವಾಗಲಿದೆ. ಈ ಒಪ್ಪಂದವು ಸಾರ್ವಜನಿಕ ವಲಯದ ಬ್ಯಾಂಕುಗಳು, ಕೆಲವು ಹಳೆಯ ಖಾಸಗಿ ಬ್ಯಾಂಕುಗಳು ಮತ್ತು ಕೆಲವು ವಿದೇಶಿ ಬ್ಯಾಂಕುಗಳಿಗೆ ಅನ್ವಯಿಸುತ್ತದೆ.
ಬೈಪರ್​ಟೈಟ್ ಒಪ್ಪಂದವು, ಬ್ಯಾಂಕ್ ಉದ್ಯೋಗಿಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ವೇತನದ ಕುರಿತು ಮರು ಮಾತುಕತೆ ನಡೆಸುವ ವೇದಿಕೆಯಾಗಿದೆ. ಜೀವ ವಿಮಾ ನಿಗಮ ಮತ್ತು ಇತರ ಸಾರ್ವಜನಿಕ ವಲಯದ ವಿಮಾ ಕಂಪನಿಗಳು, ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್​ನಂತಹ ಸಾರ್ವಜನಿಕ ಹಣಕಾಸು ಸಂಸ್ಥೆಗಳು ಸೇರಿದಂತೆ ಇತರ ಸಾರ್ವಜನಿಕ ವಲಯದ ಉದ್ಯೋಗಿಗಳಿಗೆ ಬ್ಯಾಂಕ್ ವೇತನ ಒಪ್ಪಂದವು ಮಹತ್ವದ್ದಾಗಿದೆ. ಬ್ಯಾಂಕ್ ಒಕ್ಕೂಟಗಳೊಂದಿಗೆ ಸಹಿ ಮಾಡಿದ ವೇತನ ಒಪ್ಪಂದದ ಆಧಾರದ ಮೇಲೆ ಈ ಸಂಸ್ಥೆಗಳ ನೌಕರರಿಗೆ ವೇತನ ಮಾಪನವನ್ನು ಸರ್ಕಾರ ಪರಿಷ್ಕರಿಸುತ್ತದೆ. ಹೊಸ ಒಪ್ಪಂದದ ಅನ್ವಯ ಬ್ಯಾಂಕುಗಳು ಪ್ರತಿ ವರ್ಷ ಹೆಚ್ಚುವರಿ -ಠಿ; 7,898 ಕೋಟಿ ವ್ಯಯಿಸಬೇಕಾಗುತ್ತದೆ.
ಸ್ಪರ್ಧಾತ್ಮಕ ಪ್ರಜ್ಞೆ ಬೆಳೆಸಲು ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆಯ ಪರಿಕಲ್ಪನೆಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಿಂದ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂದು ಭಾರತೀಯ ಬ್ಯಾಂಕುಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಪಿಎಲ್​ಐ ಯೋಜನೆ ಬ್ಯಾಂಕಿನ ನಿರ್ವಹಣಾ ಲಾಭ/ನಿವ್ವಳ ಲಾಭವನ್ನು ಆಧರಿಸಿರುತ್ತದೆ. ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳಿಗೆ ಇದು ಐಚ್ಛಿಕವಾಗಿರಲಿದೆ.
ದಾಖಲೆ ಪತ್ರಗಳಿಲ್ಲದೆ 500 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನ ಇಟ್ಟುಕೊಂಡಿದ್ದ ಜುವೆಲ್ಲರಿ ಮಳಿಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
