ಮುಂಬೈ: ದೇಶದಲ್ಲಿ ಕರೊನಾದಿಂದಾಗಿ ತೀವ್ರ ಸಂಕಷ್ಟಕ್ಕೀಡಾಗಿರುವ ಮಹಾರಾಷ್ಟ್ರ ತನ್ನ ಉದ್ಯೋಗಿಗಳ ಸಂಬಳದಲ್ಲಿ ಭಾರಿ ಕಡಿತ ಘೋಷಿಸಿದೆ.
ಮಂಗಳವಾರ (ಮಾರ್ಚ್​ 31) ಡಿಸಿಎಂ ಅಜಿತ್​ ಪವಾರ್​ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು. 2019-20 ನೇ ಸಾಲಿನ ಆದಾಯದಲ್ಲಿ ತೀವ್ರ ಕುಸಿತ ಉಂಟಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಆರ್ಥಿಕ ಸಂಕಷ್ಟವನ್ನು ಕೊಂಚಮಟ್ಟಿಗೆ ಸರಿದೂಗಿಸಲು ಈ ಕ್ರಮಕ್ಕೆ ಮುಂದಾಗಲಾಗಿದೆ. ಮಾರ್ಚ್​ ತಿಂಗಳಿನಿಂದಲೇ ಅನ್ವಯವಾಗುವಂತೆ ಸಂಬಳ ಕಡಿತ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
ಸಿಎಂ, ಡಿಸಿಎಂ, ಸಚಿವರು, ಶಾಸಕರು ಸೇರಿ ಗ್ರಾಮಪಂಚಾಯತ್ ವರೆಗಿನ ಎಲ್ಲ ಜನಪ್ರತಿನಿಧಿಗಳ ಸಂಬಳದಲ್ಲಿ ಶೇ.60 ಕಡಿತ ಮಾಡಲಾಗಿದೆ. ಇವರಿಗೆ ಇನ್ನುಳಿದ ಶೇ.40 ಸಂಬಳವನ್ನು ಮಾತ್ರ ನೀಡಲಾಗುತ್ತದೆ. ಇನ್ನು, ಗ್ರುಪ್​ ಎ ಮತ್ತು ಬಿ ಹುದ್ದೆಗಳ ಅಧಿಕಾರಿಗಳ ವೇತನದಲ್ಲಿ ಅರ್ಧದಷ್ಟುಮಾತ್ರ ಬಟವಾಡೆ ಮಾಡಲಾಗುವುದು. ಕಾರ್ಯದರ್ಶಿಗಳಿಂದ ಹಿಡಿದು ಸಹಾಯಕ ದರ್ಜೆ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಗ್ರೂಪ್​ ಸಿ ಅಂದರೆ ಗುಮಾಸ್ತ ಸಿಬ್ಬಂದಿಗೆ ಶೇ.75 ಸಂಬಳ ನೀಡಲಾಗುವುದು.
ಗ್ರೂಪ್​ ಡಿ ನೌಕರರಿಗೆ ಪೂರ್ಣ ಸಂಬಳ: ಸರ್ಕಾರಿ ಉದ್ಯೋಗಿಗಳಲ್ಲಿ ಕೊನೆಯ ಹಂತದಲ್ಲಿರುವ ಗ್ರೂಪ್​ ಡಿ ನೌಕರರ ಸಂಬಳದಲ್ಲಿ ಯಾವುದೇ ಕಡಿತ ಇರುವುದಿಲ್ಲ. ಅಂದರೆ. ಜವಾನರು, ಕಚೇರಿ ಸಹಾಯಕರ ವೇತನವನ್ನು ಪೂರ್ಣವಾಘಿ ಪಾವತಿಸಲಾಗುವುದು ಎಂದು ಅಜಿತ್​ ಪವಾರ್​ ತಿಳಿಸಿದ್ದಾರೆ.
ಸರ್ಕಾರಿ ನೌಕರರ ವಿವಿಧ ಸಂಘಟನೆಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಇದೇ ವೇಳೆ, ರಾಜ್ಯದ ವಿವಿಧ ರಾಜಕೀಯ ಪಕ್ಷಗಳು ತಮ್ಮ ಸದಸ್ಯರ ಒಂದು ತಿಂಗಳ ಸಂಬಳವನ್ನು ಸರ್ಕಾರದ ಪರಿಹಾರದ ನಿಧಿಗೆ ನೀಡುವುದಾಗಿ ಘೋಷಿಸಿವೆ.
ನಿಮ್ಮ ಜಿಲ್ಲೆಯ COVID19 ಸಹಾಯವಾಣಿ ಸಂಖ್ಯೆ ಗೊತ್ತೆ?- ಜಿಲ್ಲಾವಾರು ಸಹಾಯವಾಣಿ ಸಂಖ್ಯೆ ಪ್ರಕಟಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
