ಸೇಲಂ:ಸೂಟ್​ಕೇಸ್​ನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾದ ನಾಲ್ಕು ದಿನಗಳ ನಂತರ ತಮಿಳುನಾಡಿನ ಯೇರ್ಕಾಡ್ ಪಟ್ಟಣ ಪೊಲೀಸರು ಭಾನುವಾರ (ಮಾರ್ಚ್​ 24) ಪ್ರಕರಣವನ್ನು ಭೇದಿಸಿದ್ದಾರೆ. ಸಂತ್ರಸ್ತೆಯನ್ನು ಗುರುತಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಮೃತಳನ್ನು ಎನ್​. ಸುಬ್ಬಲಕ್ಷ್ಮೀ (30) ಎಂದು ಗುರುತಿಸಲಾಗಿದೆ. ಈಕೆ ಕೊಯಮತ್ತೂರು ಮೂಲದವಳು. ಆರೋಪಿಗಳಿಬ್ಬರನ್ನು ತಿರುವರೂರ್​ ಜಿಲ್ಲೆಯ ಮನ್ನಾರ್​ಗುಡಿ ನಿವಾಸಿ ಎಂ. ನಟರಾಜನ್​ (32) ಮತ್ತು ಆತನ ಸಂಬಂಧಿ ಮನ್ನಾರ್​ಗುಡಿ ಮೂಲದ ಎಸ್​. ಕನಿವಳಗನ್​ (35) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಬಗ್ಗೆ ಸೇಲಂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎ.ಕೆ. ಅರುಣ್​ ಕಬಿಲನ್​ ಮಾತನಾಡಿ, ಕತಾರ್​ನಲ್ಲಿ ಇಬ್ಬರು ಒಟ್ಟಿಗೆ ಕೆಲಸ ಮಾಡುವಾಗ ಸುಬ್ಬಲಕ್ಷ್ಮೀ ಮತ್ತು ನಟರಾಜನ್​ಗೆ ಪರಿಚಯವಿತ್ತು. ನಟರಾಜನ್​ಗೆ ಈಗಾಗಲೇ ಮದುವೆಯಾಗಿದ್ದು, ಮನ್ನಾರ್​ಗುಡಿಯಲ್ಲಿ ಇಬ್ಬರು ಮಕ್ಕಳಿದ್ದಾರೆ. ಇನ್ನೊಂದೆಡೆ ಸುಬ್ಬಲಕ್ಷ್ಮೀ ಕೌಟುಂಬಿಕ ಕಲಹ ಕಾರಣದಿಂದ ಗಂಡ ಮತ್ತು ಇಬ್ಬರು ಮಕ್ಕಳಿಂದ ದೂರವಿದ್ದಳು. ಕತಾರ್​ನಲ್ಲಿ ಇರುವಾಗಲೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರು ಕೊಯಮತ್ತೂರು ನಗರದ ಪೀಲಮೇಡುವಿನಲ್ಲಿ ಲಿವಿಂಗ್​ ಟುಗೆದರ್​ನಲ್ಲಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಮಾರ್ಚ್​ 2ರಂದು ನಟರಾಜನ್​ ಮತ್ತು ಸುಬ್ಬಲಕ್ಷ್ಮೀ ನಡುವೆ ಜಗಳ ಆರಂಭವಾಯಿತು. ಮಗು ಹೊಂದಲು ಸುಬ್ಬಲಕ್ಷ್ಮೀ ಒತ್ತಾಯ ಮಾಡಿದ್ದಕ್ಕೆ ನಟರಾಜನ್​ಗೆ ಕೋಪ ಬಂದು ಜಗಳವಾಡಿದನು. ಆದರೆ, ಸುಮ್ಮನಾಗದ ಸುಬ್ಬಲಕ್ಷ್ಮೀ ಒತ್ತಾಯ ಮಾಡುತ್ತಲೇ ಇದ್ದಳು. ಆದರೆ, ನಟರಾಜನ್​ ಮಾತ್ರ ತಿರಸ್ಕರಿಸುತ್ತಲೇ ಇದ್ದ. ನಾಲ್ಕು ದಿನಗಳ ಹಿಂದೆ ಇದೇ ವಿಚಾರಕ್ಕೆ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಸಹನೆ ಕಳೆದುಕೊಂಡ ನಟರಾಜನ್​, ಸುಬ್ಬಲಕ್ಷ್ಮೀಯ ತಲೆಯನ್ನು ಹಿಡಿದು ಗೋಡೆ ಬಲವಾಗಿ ಡಿಕ್ಕಿ ಹೊಡೆಸಿದ್ದಾರೆ. ಇದರ ಪರಿಣಾಮ ಸುಬ್ಬಲಕ್ಷ್ಮೀ ಸ್ಥಳದಲ್ಲೇ ಕುಸಿದುಬಿದ್ದು ಕೊನೆಯುಸಿರೆಳೆದಳು ಎಂದು ಎಸ್​ಪಿ ಹೇಳಿದ್ದಾರೆ.
ಸುಬ್ಬಲಕ್ಷ್ಮೀ ಸಾವಿಗೀಡಾದ ಬಳಿಕ ಕನಿವಳಗನ್​​ ಬೆಂಬಲದೊಂದಿಗೆ ನಟರಾಜನ್​, ಮೃತದೇಹವನ್ನು ಸೂಟ್​ಕೇಸ್​ನಲ್ಲಿ ತುಂಬಿ, ಮಾರನೇ ದಿನ ಯೇರ್ಕಾಡ್​ನ ಘಾಟ್​ ರಸ್ತೆಯಲ್ಲಿ ಎಸೆದು ಬಂದಿದ್ದರು. ಸೂಟ್​ಕೇಸ್​ ಪತ್ತೆಯಾದ ಬಳಿಕ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿತ್ತು. ಸೂಟ್​ಕೇಸ್​ ಒಳಗೆ ಪತ್ತೆಯಾದ ರಶೀದಿಯ ಜಾಡನ್ನು ಹಿಡಿದು ಹೋದಾಗ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಎಸ್​ಪಿ ತಿಳಿಸಿದರು.
ಯೆರ್ಕಾಡ್ ಪೊಲೀಸರು ಆರೋಪಿಗಳನ್ನು ಬಂಧಿಸಿ, ಸೇಲಂ ಕೇಂದ್ರ ಕಾರಾಗೃಹದಲ್ಲಿ ಇರಿಸಿದ್ದಾರೆ.(ಏಜೆನ್ಸೀಸ್​)
ಮಗಳಿದ್ರೂ ಪರ್ವಾಗಿಲ್ಲ ಮೀನಾ ಓಕೆ ಅಂದ್ರೆ ನಾನು ರೆಡಿ ಎಂದ ಯೂಟ್ಯೂಬರ್! ಈತನ ಅವಾಂತರ ಒಂದೆರಡಲ್ಲ

ಆಕಾಶ್​ ಅಂಬಾನಿ ಮುಂದೆಯೇ ಹಾರ್ದಿಕ್​ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ರೋಹಿತ್!​ ವಿಡಿಯೋ ವೈರಲ್​

ಮೊದಲ ಪಂದ್ಯದಲ್ಲೇ ಹಾರ್ದಿಕ್​ ಅಟ್ಟರ್​ಫ್ಲಾಪ್​! ಮುಂಬೈ ಸೋಲಿಗೆ ಪ್ರಮುಖ ಕಾರಣಗಳು ಹೀಗಿವೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
