ಭೋಪಾಲ್:ದೇಶದಲ್ಲಿ ಕರೊನಾ ರುದ್ರತಾಂಡವ ಆಡುತ್ತಿದೆ. ಪ್ರತಿದಿನ ಸಾವಿರಾರು ಜನರು ಸಾವನ್ನಪ್ಪುತ್ತಿದ್ದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್​ ವ್ಯವಸ್ಥೆ ಭರ್ತಿಯಾಗಿದೆ. ಹೀಗಿರುವಾಗ ನಗರಕ್ಕೆ ಬಂದರೆ ಕರೊನಾ ಬಂದಿದೆ ಎನ್ನುತ್ತಾರೆ ಎಂದ ಭಯಪಟ್ಟ ಗ್ರಾಮದ ರೋಗಿಗಳು ಮರದಡಿಯಲ್ಲೇ ಚಿಕಿತ್ಸೆ ಪಡೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ಈ ರೀತಿಯ ಘಟನೆ ನಡೆದಿದೆ. ಅಲ್ಲಿನ ಹಳ್ಳಿಯೊಂದರಲ್ಲಿ ಅನೇಕರು ತಂಡಿ ಜ್ವರದಿಂದ ಬಳಲುತ್ತಿದ್ದಾರೆ. ಆದರೆ ಜಿಲ್ಲಾಸ್ಪತ್ರೆಗೆ ತೆರಳಿದರೆ ಕರೊನಾ ಪರೀಕ್ಷೆ ಮಾಡಿಸಲು ಹೇಳುತ್ತಾರೆ ಎನ್ನುವ ಭಯದಿಂದ ಅವರು ಗ್ರಾಮದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಆಸ್ಪತ್ರೆಯ ಬೆಡ್​ಗಳು ಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅಲ್ಲೇ ಹತ್ತಿರದಲ್ಲಿರುವ ಮರಗಳ ಕೆಳಗೆ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಮರದ ಕೆಳಗೆ ಹಾಸಿಗೆ ಹಾಸಿ, ಮರದ ಕೊಂಬೆಗಳಿಗೆ ಸಲೈನ್​ ಬಾಟೆಲ್​ಗಳನ್ನು ಕಟ್ಟಿ ರೋಗಿಗಳಿಗೆ ನೀಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಈ ರೀತಿಯ ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಹಾಗೆಯೇ ತಂಡಿ, ಜ್ವರ, ತಲೆನೋವಿನಂತಹ ರೋಗ ಲಕ್ಷಣವಿರುವವರು ದಯಮಾಡಿ ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)
ಮತ್ತೆ ಫೀಲ್ಡಿಗಿಳಿದ ನಟಿ ರಾಗಿಣಿ; ಸ್ಮಶಾನ ಸಿಬ್ಬಂದಿಗೆ ಆಹಾರ ಸಾಮಾಗ್ರಿ ವಿತರಣೆ

ಬೆಳಗ್ಗೆ ಅಪ್ಪ, ರಾತ್ರಿ ಮಗ.. ಒಂದೇ ದಿನ ಕುಟುಂಬದ ಇಬ್ಬರನ್ನು ಬಲಿ ಪಡೆದ ಕರೊನಾ!

ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
