ಮುಂಬೈ:ಬಾಲಿವುಡ್​ ಬ್ಯಾಡ್​ ಬಾಯ್​ ಎಂದೇ ಖ್ಯಾತಿಯಾಗರುವ ನಟ ಸಲ್ಮಾನ್​ ಖಾನ್​ಗೂ ಕೋರ್ಟ್​ ವಿಚಾರಣೆಗೂ ಬಿಡಿಸಲಾರದ ನಂಟು ಎಂದೇ ಹೇಳಬಹುದು. ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿ, ಕೆಲ ಕಾಲ ಜೈಲು ಶಿಕ್ಷೆಯೂ ಅನುಭವಿಸಿರುವ ನಟ ಸಲ್ಮಾನ್​ ವಿರುದ್ಧ ಮತ್ತೊಂದು ಪ್ರಕರಣ ವಿಚಾರಣಾ ಹಂತದಲ್ಲಿದೆ.
ಅದೇನೆಂದರೆ…. ಪತ್ರಕರ್ತನೊಬ್ಬನನ್ನು ಬೆದರಿಸಿ ಕಿರುಕುಳ ನೀಡಿದ್ದಾರೆ ಎಂಬ ದೂರು ಸದ್ಯ ಸಲ್ಮಾನ್​ ಮೇಲಿದೆ. 2019ರಲ್ಲಿ ಈ ಘಟನೆ ನಡೆದಿತ್ತು. ಇನ್ನು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಈಗಾಗಲೇ ಕೋರ್ಟ್​ ಸಮನ್ಸ್ ಜಾರಿ ಮಾಡಿತ್ತು.
ಏಪ್ರಿಲ್​ 5 ರಂದು ಸಲ್ಮಾನ್​ ಖಾನ್ ಹಾಜರಾಗಿರಲಿಲ್ಲ. ಇದೀಗ ಸದ್ಯ ಸಮನ್ಸ್ ಅವಧಿಯನ್ನು ವಿಸ್ತರಿಸಲಾಗಿದೆ.ಪತ್ರಕರ್ತ ಅಶೋಕ್​ ಪಾಂಡೆ ಎಂಬುವವರಿಗೆ ಸಲ್ಮಾನ್​ ಖಾನ್​ ಹಾಗೂ ಅವರ ಬಾಡಿಗಾರ್ಡ್​​ ನವಾಜ್​ ಶೇಖ್​ ದುರ್ವರ್ತನೆ ತೋರಿದ್ದರು. ಸದ್ಯ ಜೂನ್​ 13ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
2019ರಲ್ಲಿ ಸಲ್ಮಾನ್​ ಖಾನ್​ ಮುಂಬೈನ ರಸ್ತೆಯಲ್ಲಿ ಸೈಕಲ್​ ತುಳಿಯುತ್ತಿರುವ ದೃಶ್ಯವನ್ನು ಪತ್ರಕರ್ತ ಸೆರೆ ಹಿಡಿದಿದ್ದರು. ಈ ವೇಳೆ ಸಲ್ಮಾನ್​ ಹಾಗೂ ಅವರ ಬಾಡಿಗಾರ್ಡ್​​ ನಿಂದಿಸಿ ಹಲ್ಲೆ ನಡೆಸಿದ್ದರು.
9 ವರ್ಷಗಳ ಬಳಿಕ ಸೈನಿಕರಿಗೆ ಸಿಹಿಸುದ್ದಿ: ಕೆಲವೇ ದಿನದಲ್ಲಿ ಕೈ ಸೇರಲಿದೆ ಬುಲೆಟ್​ ಪ್ರೂಫ್​ ಜಾಕೆಟ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
