ಮುಂಬೈ:ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ನೋಟ ಮತ್ತು ನಟನೆಯ ಹೊರತಾಗಿ ಹಾಸ್ಯ ಮತ್ತು ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ವಿಕ್ಕಿ ಕೌಶಲ್ ಅವರನ್ನು ಮದುವೆಯಾಗುವ ಮೊದಲು, ಅವರ ಹೆಸರನ್ನು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ರಣಬೀರ್ ಕಪೂರ್ ಜೊತೆ ಜೋಡಿಸಲಾಗಿತ್ತು.
ನಟಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಆಗಾಗ್ಗೆ ಮೌನವಾಗಿರುತ್ತಾರೆ. ಸಂದರ್ಶನವೊಂದರ ಸಂದರ್ಭದಲ್ಲಿ, ಯಾರನ್ನು ಮದುವೆಯಾಗುತ್ತೀರಿ ಎಂದು ಪುಟಾಣಿ ಅಭಿಮಾನಿಯೊಬ್ಬ ಕೇಳಿದಾಗ, ಕತ್ರಿನಾ ಕೈಫ್ ಉತ್ತರಿಸಲು ಸ್ವಲ್ಪ ಕಷ್ಟವಾಗಿತ್ತು. ಕತ್ರಿನಾರನ್ನು ಸಂಕಷ್ಟಕ್ಕೆ ಸಿಲುಕಿಸಿದ ಈ ಪುಟಾಣಿ ಫ್ಯಾನ್​ನ ಈ ವಿಡಿಯೋ ಮತ್ತೊಮ್ಮೆ ಈಗ ವೈರಲ್ ಆಗಿದೆ.
2010 ರಲ್ಲಿ, ಕತ್ರಿನಾ ಕೈಫ್ ಅವರು ತಮ್ಮ ‘ರಾಜನೀತಿ’ ಚಿತ್ರದ ಇಡೀ ತಂಡದೊಂದಿಗೆ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಾರ್ವಜನಿಕರಿಂದ ಪ್ರಶ್ನೆಗಳ ಸರಣಿ ನಡೆಯುತ್ತಿರುವಾಗ, ಒಬ್ಬ ಪುಟಾಣಿ ಅಭಿಮಾನಿ ಎದ್ದು ನಿಂತು ಕತ್ರೀನಾ ಕೈಫ್ ಅವರನ್ನು “ನೀವು ಯಾರನ್ನು ಮದುವೆಯಾಗುತ್ತೀರಿ? ಸಲ್ಮಾನ್ ಖಾನ್ ಅಥವಾ ರಣಬೀರ್ ಕಪೂರ್?” ಎಂದು ಪ್ರಶ್ನಿಸಿಯೇಬಿಟ್ಟ. ಏಕಾಏಕಿ ತೂರಿಬಂದ ಪ್ರಶ್ನೆಗೆ ಉತ್ತರಿಸಲು ಕತ್ರಿನಾ ಕೈಫ್ ಅವರಿಗೆ ಕಷ್ಟವಾಯಿತು. ಆಗ ಅವರು ಯೋಚಿಸಲು ಸಮಯ ತೆಗೆದುಕೊಂಡರು. ಏಕೆಂದರೆ ಅವರ ಜೊತೆ ರಣಬೀರ್ ಕಪೂರ್ ಕೂಡ ಪಕ್ಕದಲ್ಲೇ ಕುಳಿತಿದ್ದರು. ತದನಂತರ ನಟಿ ಜಾಣತನದಿಂದ ಈ ಉತ್ತರವನ್ನು ನೀಡಿದರು
ಸ್ವಲ್ಪ ಸಮಯ ಯೋಚಿಸಿದ ನಂತರ ಕತ್ರಿನಾ ಕೈಫ್ ಅವರು, “ನಾನು ನಿನ್ನನ್ನು ಮದುವೆಯಾಗುತ್ತೇನೆ” ಎಂದು ಪುಟಾಣಿಗೆ ಉತ್ತರಿಸಿದರು. ಈ ಉತ್ತರವನ್ನು ಕೇಳಿದ ಈ ಮಗುವಿನ ಪ್ರತಿಕ್ರಿಯೆ ನೋಡುವಂತಹುದಾಗಿತ್ತು. ಕತ್ರಿನಾ ಕೈಫ್ ಈ ಅಭಿಮಾನಿಯನ್ನು ತನ್ನ ಬಳಿ ಕರೆದು ಅವನನ್ನು ತಬ್ಬಿಕೊಂಡು ವಿಷಯವನ್ನು ಬಹಳ ಸುಲಭವಾಗಿ ತಿಳಿಗೊಳಿಸಿದರು.

A post shared by Katrina Kaif Türkiye (@katrinakaifturkey)
ಚಿತ್ರೋದ್ಯಮದಲ್ಲಿ ಕತ್ರಿನಾ ಕೈಫ್ ಅವರ ಹೆಸರು ಸಾಕಷ್ಟು ಕಾಲ ಸಲ್ಮಾನ್ ಖಾನ್ ಅವರೊಂದಿಗೆ ಥಳಕು ಹಾಕಿಕೊಂಡಿತ್ತು. ನಂತರ ಕತ್ರಿನಾ ಅವರು ರಣಬೀರ್ ಕಪೂರ್ ಜತೆ ಕೆಲಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ, ಅಂತಿಮವಾಗಿ ನಟಿ ವಿಕ್ಕಿ ಕೌಶಲ್ ಅವರನ್ನು ವಿವಾಹವಾದರು.

ಮತ್ತೊಂದು ಡೀಪ್​ ಫೇಕ್​ ವಿಡಿಯೋದಲ್ಲಿ ನಟಿ ಆಲಿಯಾ ಭಟ್​: ಈ ಬಾರಿ ನಕಲು ಆಗಿದ್ದೇನು?

ಸಂಜೆವರೆಗೆ ಕರ್ನಾಟಕದಲ್ಲಿ 66%; ದೇಶದಲ್ಲಿ 60% ಮತದಾನ

ಬಿಜೆಪಿ ಸೇರುವ ಕುರಿತು ನಿನ್ನೆವರೆಗೂ ಗೊತ್ತಿರಲಿಲ್ಲ: ಕೇಸರಿ ಪಡೆ ಸೇರ್ಪಡೆ ಬಗ್ಗೆ ನಟ ಶೇಖರ್ ಸುಮನ್ ಹೇಳಿದ್ದೇನು?

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:three × one =
Remember me
