ಮುಂಬೈ:ದೀಪಾವಳಿ ಸಂಭ್ರಮವಾದ್ದರಿಂದ ಈಗೆರಡು ದಿನಗಳಿಂದ ದೇಶದ ಹಲವೆಡೆ ಎಲ್ಲೆಂದರಲ್ಲಿ ಪಟಾಕಿ ಸದ್ದು ಕೇಳಿಸುತ್ತಿರುತ್ತದೆ. ಆದರೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ನಟ ಸಲ್ಮಾನ್ ಖಾನ್, ಇದು ಅಪಾಯಕಾರಿ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿರುವ ವಿಡಿಯೋ ವೈರಲ್ ಆಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಿದ ನಟ, ಇದು ಅಪಾಯಕಾರಿ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಕಿವಿಮಾತನ್ನೂ ಹೇಳಿದ್ದಾರೆ.
ಮಹಾರಾಷ್ಟ್ರದ ಮುಂಬೈನ ಮಾಲೇಗಾಂವ್​ನ ಥಿಯೇಟರ್​ವೊಂದರಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್ 3 ಸಿನಿಮಾ ವೀಕ್ಷಣೆ ವೇಳೆ ಅವರ ಅಭಿಮಾನಿಗಳು ಪಟಾಕಿಯನ್ನು ಸಿಡಿಸಿದ್ದರು. ಅಷ್ಟಕ್ಕೂ ಟಾಕೀಸ್ ಒಳಗೇ ಈ ಪಟಾಕಿಗಳನ್ನು ಸಿಡಿಸಿದ್ದರಿಂದ ಸಲ್ಮಾನ್​ ಖಾನ್ ಈ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ:ಎಂ. ಚಿನ್ನಸ್ವಾಮಿ ಸ್ಟೇಡಿಯಂ ಎಲ್ಲರಿಗೂ ಗೊತ್ತು: ಆದರೆ ಈ ಕ್ರೀಡಾಂಗಣಕ್ಕೆ ಯಾಕೆ ಆ ಹೆಸರು ಬಂತು?
ಟೈಗರ್ 3 ಪ್ರದರ್ಶನ ವೇಳೆ ಥಿಯೇಟರ್ ಒಳಗೇ ಪಟಾಕಿ ಸಿಡಿಸಿದ್ದು ತಿಳಿಯಿತು. ಇದು ಅಪಾಯಕಾರಿ, ನಮ್ಮನ್ನು ಹಾಗೂ ಇತರರನ್ನೂ ಅಪಾಯಕ್ಕೆ ಒಡ್ಡದೆ ಸುರಕ್ಷಿತವಾಗಿ ಸಿನಿಮಾ ವೀಕ್ಷಿಸೋಣ ಎಂಬುದಾಗಿ ಅವರು ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಹುಚ್ಚರಲ್ಲ ಅಂದುಕೊಂಡಿದ್ದೇನೆ. ಇದು ಸುರಕ್ಷಿತ ಅಲ್ಲವೇ ಅಲ್ಲ. ಇನ್ನೊಬ್ಬರನ್ನು ಅಪಾಯಕ್ಕೀಡಾಗಿಸುವ ಇಂಥವರನ್ನು ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
Salman Khan Fans bursted fire crackers inside the cinema hall in Malegaon which caused stampede like situation.pic.twitter.com/LA0uaye96z
‘ಹ್ಯಾಪಿ ದಿವಾಳಿ..’ ಎಂದ ಅಭಿಮಾನಿಗೆ ಶಿವಣ್ಣ ಕೊಟ್ಟ ರಿಪ್ಲೈ ವೈರಲ್; ಅಂಥದ್ದೇನಂದ್ರು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − thirteen =
Remember me
