ವಾಷಿಂಗ್ಟನ್​:ಬಾಲಿವುಡ್​ ನಟ ಸಲ್ಮಾನ್​ ಖಾನ್​ ಅವರ ಮಾಜಿ ಗರ್ಲ್​ಫ್ರೆಂಡ್​, ಪಾಕಿಸ್ತಾನ ಮೂಲದ ನಟಿ ಸೋಮಿ ಅಲಿ ತಮ್ಮ ಬಾಲ್ಯದಲ್ಲಿ ಆದ ಕಹಿ ಘಟನೆಗಳನ್ನು ಮಾಧ್ಯಮದ ಎದುರು ಬಿಚ್ಚಿಟ್ಟಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಆಕೆಯ ಮೇಲೆ 5ನೇ ವಯಸ್ಸಿನಲ್ಲಿಯೇ ಲೈಂಗಿಕ ದೌರ್ಜನ್ಯವಾಗಿತ್ತು ಎನ್ನುವುದು ಇದೀಗ ತಿಳಿದುಬಂದಿದೆ.
ಸೋಮಿ ಅಲಿ ಪ್ರಸ್ತುತ ನೋ ಮೋರ್​ ಟಿಯರ್ಸ್​ ಹೆಸರಿನ ಎನ್​ಜಿಒ ಒಂದನ್ನು ನಡೆಸುತ್ತಿದ್ದಾರೆ. ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಗಾದವರ ಸಹಾಯಕ್ಕಾಗಿ ಎನ್​ಜಿಒ ಅನ್ನು ನಡೆಸಲಾಗುತ್ತಿದೆ. ಈ ಎನ್​ಜಿಒ ಆರಂಭಿಸಿದ ನಂತರ ಧೈರ್ಯ ತಂದುಕೊಂಡಿರುವುದಾಗಿ ಹೇಳಿರುವ ಸೋಮಿ, ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. ನಾನು ಆಗ ಪಾಕಿಸ್ತಾನದಲ್ಲಿದ್ದೆ. ಮೂರು ವರ್ಷದವಳಿದ್ದಾಗಲೇ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಯಿತು. ಈ ವಿಚಾರವನ್ನು ನಾನು ನನ್ನ ತಂದೆ ತಾಯಿಯ ಬಳಿ ಹೇಳಿಕೊಂಡೆ. ತಪ್ಪಿತಸ್ತರಿಗೆ ಶಿಕ್ಷೆಯೂ ಆಯಿತು. ಆದರೆ ನನ್ನ ತಂದೆ ತಾಯಿ ಆಗ ನನಗೆ ಬುದ್ಧಿ ಹೇಳಿದ್ದರು. ಇಂತಹ ವಿಚಾರವನ್ನು ಯಾರೊಂದಿಗೂ ಹೇಳಬಾರದು ಎಂದು ಹೇಳಿದ್ದರು. ನಾನು ಆಗ ನಾನೇನೋ ತಪ್ಪು ಮಾಡಿದೆ ಎಂದು ತಿಳಿದಿದ್ದೆ.
ಅದಾದ ಮೇಲೆ 9 ವರ್ಷದವಳಾಗಿದ್ದಾಗ ಮತ್ತು 14 ವರ್ಷದವಳಾಗಿದ್ದಾಗ ಮತ್ತೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವಾಯಿತು. ಆದರೆ ಅದನ್ನು ಹೇಳಿಕೊಳ್ಳಲು ಭಯ ಪಟ್ಟು ಕುಳಿತಿದ್ದೆ. ಕಳೆದ ಎರಡು ಮೂರು ವರ್ಷಗಳಿಂದ ನಾನು ಧೈರ್ಯವಾಗಿ ಮಾತನಾಡಲು ಕಲಿತಿದ್ದೇನೆ ಎಂದು ಸೋಮಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)
ಮೀನು ಹುಟ್ಟಿದ್ದು ಹೇಗೆ ಗೊತ್ತಾ? ಅಬ್ಬಬ್ಬಾ.. ಮೀನಿನ ಇತಿಹಾಸ ಹೇಗಿದೆ ನೋಡಿ…

4ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವೃದ್ಧ ದಂಪತಿ! ಇಳಿ ವಯಸ್ಸಿನಲ್ಲಿ ಜೈಲು ಪಾಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
