ನವದೆಹಲಿ: ಮೇ 3ರವರೆಗೆ ಲಾಕ್​ಡೌನ್​ ಇದ್ದರೂ ಕೇಂದ್ರ ಸರ್ಕಾರ ಹಲವು ನಿರ್ಬಂಧಗಳನ್ನು ತೆರವುಗೊಳಿಸುತ್ತಿದೆ.ಏಪ್ರಿಲ್​ 20ರಿಂದಲೇ ಅನ್ವಯವಾಗುವಂತೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಹಾಗೂ ಕೈಗಾರಿಕೆಗಳ ಕಾರ್ಯಾರಂಭಕ್ಕೆ ಅನುಮತಿ ನೀಡಲಾಗಿದೆ.
ಉದ್ಯೋಗ ಖಾತ್ರಿ ಯೋಜನೆ, ಕಟ್ಟಡ ಕಾಮಗಾರಿ, ನೀರಾವರಿ ಯೋಜನೆಯ ಕೆಲಸಗಳನ್ನು ನಿರ್ವಹಿಸಬಹುದು.ದಿನಸಿ, ತರಕಾರಿ ಸೇರಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮೊದಲಿನಿಂದಲೇ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಫ್ಯಾನ್​, ಎಸಿ ಮೊದಲಾದ ಎಲೆಕ್ಟಿಕಲ್​ ದುರಸ್ತಿ, ವಾಹನ ದುರಸ್ತಿ ಮಳಿಗೆಗಳು ತೆರೆಯಬಹುದು. ಇದಲ್ಲದೆ, ಮೊಬೈಲ್​ ದುರಸ್ತಿ, ಕರೆನ್ಸಿ ರಿಚಾರ್ಜ್​ ಅಂಗಡಿಗಳನ್ನು ತೆರೆದು ವಹಿವಾಟು ನಡೆಸಬಹುದು.
ಇನ್ನು, ಹಾಲಿನ ಸಂಸ್ಕರಿತ ಉತ್ಪನ್ನಗಳ ಘಟಕ, ಬ್ರೆಡ್​ ಕಾರ್ಖಾನೆ, ದಾಲ್​ಮಿಲ್​ಗಳನ್ನು ತೆರೆಯಲು ಕೂಡ ಈಗಾಗಲೇ ಆದೇಶ ಹೊರಡಿಸಿದೆ. ಇದಲ್ಲದೇ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳನ್ನು ಕಡಿಮೆ ಸಿಬ್ಬಂದಿಯೊಂದಿಗೆ ಆರಂಭಿಸಬಹುದು.
ಆದರೆ, ಸಲೂನ್​, ಕ್ಷೌರದಂಗಡಿ ಹಾಗೂ ರೆಸ್ಟೋರಂಟ್​ ಹಾಗೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವತ್ಸ ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಕರೊನಾ ಪರೀಕ್ಷೆಗಾಗಿ ರ್ಯಾಪಿಡ್​ ಟೆಸ್ಟಿಂಗ್​ ಕಿಟ್​ಗಳನ್ನು ಬಳಸುವುದನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಟೆಸ್ಟಿಂಗ್​ ಕಿಟ್​ಗಳು ಕಳಪೆಯಾಗಿವೆ ಎಂದು ವರದಿಗಳು ಬಂದ ಹಿನ್ನೆಲೆಯಲ್ಲಿ ಎರಡು ದಿನಗಳವರೆಗೆ ಬಳಕೆ ಬೇಡ ಎಂದು ರಾಜ್ಯಗಳಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​) ಈ ಹಿಂದೆ ಹೇಳಿತ್ತು. ಈಗ ಬಳಕೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
ಕರೊನಾ ಚಿಕಿತ್ಸೆಗೆ ಕ್ರಿಮಿನಾಶಕ ಬಳಸುವ ಐಡಿಯಾ ಕೊಟ್ಟ ಅಮೆರಿಕ ಅಧ್ಯಕ್ಷ; ಮುಜುಗರದಿಂದ ಪಾರಾಗಲು ವೈಟ್​ಹೌಸ್​ ಹೆಣಗಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 11 =
Remember me
