ನವದೆಹಲಿ:ಚಾಟ್‌ಜಿಪಿಟಿಯನ್ನು ತಯಾರಿಸಿದ ಕಂಪನಿಯಾದ ಓಪನ್‌ಎಐನ ಸಹ-ಸಂಸ್ಥಾಪಕ ಸ್ಯಾಮ್ ಆಲ್ಟ್‌ಮನ್ ಮತ್ತೆ  ಕಂಪನಿಗೆ ಮರಳಲಿದ್ದಾರೆ. ಇದನ್ನು ಸ್ವತಃ ಓಪನ್‌ಎಐ ದೃಢಪಡಿಸಿದೆ. ಸ್ಯಾಮ್‌ನ ವಾಪಸಾತಿಗಾಗಿ ಓಪನ್‌ಎಐ ( OpenAI) ನಲ್ಲಿ ಹೊಸ ಬೋರ್ಡ್ ಅನ್ನು ಸಹ ರಚಿಸಲಾಗಿದೆ. ಸ್ಯಾಮ್ ಆಲ್ಟ್‌ಮನ್ ಅವರನ್ನು ಕಳೆದ ವಾರ ಓಪನ್‌ಎಐ ನಿಂದ ಹೊರಹಾಕಲಾಯಿತು. ಇದಾದ ನಂತರ ನೌಕರರು ಕಂಪನಿಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.
ಹಾಗೆ ನೋಡುವುದಾದರೆ ಸ್ಯಾಮ್ ಆಲ್ಟ್‌ಮ್ಯಾನ್ ಅವರನ್ನು ಕಂಪನಿ ವಜಾಗೊಳಿಸಿದ ನಂತರ ಕಂಪನಿಯ ನೂರಾರು ಉದ್ಯೋಗಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದರು. ಅಷ್ಟೇ ಅಲ್ಲ, ಮೈಕ್ರೋಸಾಫ್ಟ್‌ಗೆ ಸೇರುವ ಬಗ್ಗೆ ಮಾತನಾಡಿದರು. ಸ್ಯಾಮ್ ಆಲ್ಟ್‌ಮನ್ ಅವರನ್ನು ವಜಾಗೊಳಿಸಿದ ಬೋರ್ಡ್ ಅನ್ನು ತೆಗೆದುಹಾಕಿ, ಅವರನ್ನು ಆದಷ್ಟು ಬೇಗ ಮರಳಿ ಕರೆತರಬೇಕು ಎಂದು ಉದ್ಯೋಗಿಗಳು ಷರತ್ತು ಕೂಡ ವಿಧಿಸಿದರು. ತದ ನಂತರ ಕಂಪನಿಯು ಆಲ್ಟ್‌ಮ್ಯಾನ್‌ನ ವಾಪಸಾತಿ ಪ್ರಕ್ರಿಯೆಯನ್ನು ಆರಂಭಿಸಿತು.
ಸ್ಯಾಮ್ ಆಲ್ಟ್‌ಮ್ಯಾನ್‌ನ ವಾಪಸಾತಿಗೆ ಸಂಬಂಧಿಸಿದಂತೆ ಇತ್ತೀಚಿನ ವರದಿಯ ಪ್ರಕಾರ, ಈಗ ಓಪನ್‌ಎಐನಲ್ಲಿ ಹೊಸ ಬೋರ್ಡ್ ರಚಿಸಲಾಗಿದೆ. ಹೊಸ ಮಂಡಳಿಯ ಸದಸ್ಯರಲ್ಲಿ ಬ್ರೆಟ್ ಟೇಲರ್ (ಅಧ್ಯಕ್ಷ), ಲ್ಯಾರಿ ಸಮ್ಮರ್ಸ್ ಮತ್ತು ಆಡಮ್ ಡಿ’ಏಂಜೆಲೊ ಸೇರಿದ್ದಾರೆ.
ಓಪನ್‌ಎಐಗೆ ಹಿಂದಿರುಗಿದ ಬಗ್ಗೆ, ಸ್ಯಾಮ್ ಆಲ್ಟ್‌ಮ್ಯಾನ್ “ನಾನು ಓಪನ್‌ಎಐನಲ್ಲಿ ಕೆಲಸ ಮಾಡಲು ಇಷ್ಟಪಡುತ್ತೇನೆ. ನಾನು ಈ ತಂಡದ ಏಕತೆಯನ್ನು ಕಾಪಾಡಿಕೊಳ್ಳುವ ಮತ್ತು ಕಂಪನಿಯ ಧ್ಯೇಯವನ್ನು ಮುಂದಕ್ಕೆ ಕೊಂಡೊಯ್ಯುವ ಗುರಿ ಹೊಂದಿದ್ದೇನೆ. ಮೈಕ್ರೋಸಾಫ್ಟ್‌ಗೆ ಸೇರುವುದು ನನಗೆ ಮತ್ತು ನನ್ನ ತಂಡಕ್ಕೆ ಉತ್ತಮ ನಿರ್ಧಾರವಾದರೂ ಈಗ ನಾನು ಓಪನ್‌ಎಐ ಗೆ ಮರಳಲು ಉತ್ಸುಕನಾಗಿದ್ದೇನೆ” ಎಂದು ಹೇಳಿದರು.
https://twitter.com/OpenAI/status/1727206187077370115/history
ಸತ್ಯ ನಾದೆಲ್ಲಾ ಹೇಳಿದ್ದೇನು?ಓಪನ್‌ಎಐ ನಿಂದ ವಜಾಗೊಂಡ ನಂತರ, ಸ್ಯಾಮ್ ಆಲ್ಟ್‌ಮ್ಯಾನ್ ಮತ್ತು ಗ್ರೆಗ್ ಬ್ರಾಕ್‌ಮನ್ ಇಬ್ಬರೂ ಮೈಕ್ರೋಸಾಫ್ಟ್‌ಗೆ ಸೇರಲಿದ್ದಾರೆ ಎಂಬ ಮಾಹಿತಿಯನ್ನು ಸ್ವತಃ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಆಲ್ಟ್‌ಮ್ಯಾನ್ ಮೈಕ್ರೋಸಾಫ್ಟ್‌ಗೆ ಸೇರಿದರೆ ನನಗೆ ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದರೂ, ಒಂದು ವೇಳೆ ಮತ್ತೆ ಓಪನ್‌ಎಐಗೆ ಹಿಂತಿರುಗಿದರೆ, ಅವರ ನಿರ್ಧಾರದಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ನಾವು ಎರಡೂ ಆಯ್ಕೆಗಳೊಂದಿಗೆ ಹೋಗುತ್ತೇವೆ ಎಂದು ತಿಳಿಸಿದ್ದರು.
OpenAIನ ಹಂಗಾಮಿ ಸಿಇಒ ಮೀರಾ ಮುರಾಟಿ ಯಾರು? ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 10 =
Remember me
