ಲಖನೌ:ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆ್ಸ್ ಹಾಗೂ ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಜಂಟಿಯಾಗಿ ಹೋರಾಡಲಿದ್ದು, ಸೀಟು ಹಂಚಿಕೆ ವಿಚಾರಚಾಗಿ ಭುಗಿಲೆದ್ದಿದ ಅಸಮಾಧಾನವು ತಣಿಸಲಾಗಿದೆ ಎಂದು ಇಂಡಿಯಾ ಮೈತ್ರಿಕೂಟದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಉತ್ತರಪ್ರದೇಶದ 80 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 17 ಹಾಗೂ ಸಮಾಜವಾದಿ ಪಕ್ಷವು 63 ಸ್ಥಾನಗಳಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ. ಸಮಾಜವಾದಿ ಪಕ್ಷದ ಬೇಡಿಕೆಗೆ ಕಾಂಗ್ರೆಸ್​ ಸಮ್ಮತಿಸಿದೆ ಎಂದು ಉನ್ನತ ಸುದ್ದಿ ಮೂಲಗಳು ತಿಳಿಸಿವೆ.
BREAKING-The alliance between the Congress party & SP has been finalized.Congress party to fight on 17 seats & remaining 63 seats will be shared between SP & other small parties.INDIA all set to sweep Uttar Pradesh with 60+ seats 🔥pic.twitter.com/XVxTx0eU0Z
ಇದನ್ನೂ ಓದಿ:ಗಲ್ಫ್ ಕನ್ನಡಿಗರ ಒಕ್ಕೂಟದ ಬೇಡಿಕೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ
ಇಂಡಿಯಾ ಮೈತ್ರಿಕೂಟವು ಘೋಷಿಸಿದ ಮೊದಲ ಸೀಟು ಹಂಚಿಕೆ ಇದಾಗಿದ್ದು, ಕಾಂಗ್ರೆಸ್​ ರಾಯ್ಬರೇಲಿ, ಅಮೇಥಿ, ಕಾನ್ಪುರ ನಗರ, ಫತೇಪುರ್ ಸಿಕ್ರಿ, ಬಸ್ಗಾಂವ್, ಸಹರಾನ್ಪುರ್, ಪ್ರಯಾಗ್ರಾಜ್, ಮಹಾರಾಜ್ಗಂಜ್, ಅಮ್ರೋಹಾ, ಝಾನ್ಸಿ, ಬುಲಂದ್ಶಹರ್, ಘಾಜಿಯಾಬಾದ್, ಮಥುರಾ, ಶಾಜಿಯಾಬಾದ್ ., ಬಾರಾಬಂಕಿ ಮತ್ತು ಡಿಯೋರಿಯಾದಲ್ಲಿ ಸ್ಫರ್ಧಿಸಲಿದೆ ಎಂದು ತಿಳಿದು ಬಂದಿದೆ.
ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಿಗೆ ಎಸ್‌ಪಿ ಇದುವರೆಗೆ 31 ಅಭ್ಯರ್ಥಿಗಳನ್ನು ಘೋಷಿಸಿದೆ. ಮತ್ತೊಂದೆಡೆ ಮಾಯಾವತಿ ನೇತೃತ್ವದ ನಹುಜನ ಸಮಾಜ ಪಾರ್ಟಿಯಿಂದ ಆಯ್ಕೆಯಾಗಿರುವ 10 ಸಂಸದರು ಪಕ್ಷ ತೊರೆಯಬಹುದು ಎಂದು ಹೇಳಲಾಗಿದ್ದು, ಇವರೆಲ್ಲರೂ ಬಿಜೆಪಿಯ ಕದ ತಟ್ಟುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 6 =
Remember me
