ನವದೆಹಲಿ:ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳ ಪೈಕಿ ಸಮಾಜವಾದಿ ಪಕ್ಷ (ಎಸ್​ಪಿ) 2021-22ರ ಸಾಲಿನಲ್ಲಿ ಗರಿಷ್ಠ ಆಸ್ತಿಯನ್ನು ಘೊಷಿಸಿದೆ. ಭಾರತ್ ರಾಷ್ಟ್ರ ಸಮಿತಿ (ಬಿಆರ್​ಎಸ್) ಪಕ್ಷ ಎರಡನೇ ಸ್ಥಾನದಲ್ಲಿದೆ.
2020-21ರ ಆರ್ಥಿಕ ವರ್ಷದಲ್ಲಿ, ಎಸ್​ಪಿ ಒಟ್ಟು ಆಸ್ತಿಯನ್ನು 561.46 ಕೋಟಿ ರೂಪಾಯಿ ಎಂದು ಘೊಷಿಸಿತ್ತು. ಅದು 2021-22ರಲ್ಲಿ 568.36 ಕೋಟಿ ರೂಪಾಯಿಗಳಿಗೆ ಶೇ.1.23 ಹೆಚ್ಚಾಗಿದೆ. ಬಿಆರ್​ಎಸ್ 2020-21ರ ಹಣಕಾಸು ವರ್ಷದಲ್ಲಿ ಒಟ್ಟು ಆಸ್ತಿ 319.55 ಕೋಟಿ ರೂ. ಎಂದು ಹೇಳಿತ್ತು, ಅದು 2021-22ರ ಹಣಕಾಸು ವರ್ಷದಲ್ಲಿ 512.24 ಕೋಟಿ ರೂ. ಏರಿಕೆಯಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್್ಸರ್ (ಎಡಿಆರ್) ವರದಿ ತಿಳಿಸಿದೆ. ಈ ಎರಡು ವರ್ಷಗಳಲ್ಲಿ, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಬಿಜು ಜನತಾ ದಳ (ಬಿಜೆಡಿ) ಮತ್ತು ಜನತಾ ದಳ (ಯುನೈಟೆಡ್) ಒಟ್ಟು ಆಸ್ತಿ 95 ಪ್ರತಿಶತದಷ್ಟು ಹೆಚ್ಚಾಗಿದೆ.
2020-21ರಲ್ಲಿ ಡಿಎಂಕೆ 115.708 ಕೋಟಿ ಮೌಲ್ಯದ ಆಸ್ತಿಯನ್ನು ಘೊಷಿಸಿತು, 2021-22ರಲ್ಲಿ 399 ಕೋಟಿ ರೂಪಾಯಿಗೆ ಶೇ.244.88ರಷ್ಟು ಹೆಚ್ಚಾಗಿದೆ. ಬಿಜು ಜನತಾ ದಳವು 2020-21ರಲ್ಲಿ 194 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಆಸ್ತಿಯನ್ನು ಘೊಷಿಸಿತ್ತು. 2021-22ರಲ್ಲಿ ಶೇ.143ರಷ್ಟು ಏರಿಕೆಯಾಗಿ 474 ಕೋಟಿ ರೂ.ಗೆ ತಲುಪಿದ್ದರೆ, ಜೆಡಿ(ಯು) 2020-21ರಲ್ಲಿ ರೂ.86 ಕೋಟಿ ಮೌಲ್ಯದ ಆಸ್ತಿಯನ್ನು ಘೊಷಿಸಿತು. 2021-22ರಲ್ಲಿ ಶೇ.95ಕ್ಕಿಂತ ಹೆಚ್ಚು 168 ಕೋಟಿ ರೂಪಾಯಿಗೆ ಬೆಳೆದಿದೆ. ಆಮ್ ಆದ್ಮಿ ಪಕ್ಷದ ಆಸ್ತಿಯು 2020-21 ಮತ್ತು 2021-22ರ ನಡುವೆ ಶೇ. 71.76 ರಷ್ಟು ಹೆಚ್ಚಾಗಿದ್ದು, 21.82 ಕೋಟಿ ರೂಪಾಯಿಗಳಿಂದ 37.477 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಅಗ್ರ 10 ಪಕ್ಷಗಳ ಪೈಕಿ ಎಐಎಡಿಎಂಕೆ ಮತ್ತು ಟಿಡಿಪಿ ಮಾತ್ರ ವಾರ್ಷಿಕ ಆಸ್ತಿಯಲ್ಲಿ ಶೇ.1.55ರಷ್ಟು ಮತ್ತು ಶೇ.3.04ರಷ್ಟು ಕುಸಿತ ಕಂಡಿವೆ ಎಂದು ವರದಿ ಹೇಳಿದೆ. 2020-21 ಮತ್ತು 2021-22ರ ಹಣಕಾಸು ವರ್ಷಗಳ ನಡುವೆ ಎಐಎಡಿಎಂಕೆ ಆಸ್ತಿಯು 260.166 ಕೋಟಿ ರೂಪಾಯಿಗಳಿಂದ 256.13 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಟಿಡಿಪಿಯ ಆಸ್ತಿ 133.423 ಕೋಟಿ ರೂಪಾಯಿಗಳಿಂದ 129.372 ಕೋಟಿ ರೂಪಾಯಿಗೆ ಇಳಿಕೆಯಾಗಿದೆ.
ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು: ವಿಪಕ್ಷಗಳಿಗೆ ಖಡಕ್​ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ

ಸಿಎಂ ಕೆಸಿಆರ್​, ಸಂಭಾವ್ಯ ಸಿಎಂ ರೇವಂತ್​ ರೆಡ್ಡಿಗೆ ಸೋಲುಣಿಸಿ ಎಲ್ಲರ ಹುಬ್ಬೇರಿಸಿದ ಬಿಜೆಪಿ ಅಭ್ಯರ್ಥಿ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × 4 =
Remember me
