ಲಖನೌ: ಸಮಾಜವಾದಿ ಪಕ್ಷದ ನಾಯಕ ಆಜಂ ಖಾನ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡುಂಗರ್‌ಪುರ ಬಸ್ತಿಯಲ್ಲಿ ನಡೆದ ಹಲ್ಲೆ, ದರೋಡೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣದಲ್ಲಿ ರಾಂಪುರ ಎಂಪಿ ಎಂಎಲ್‌ಎ ಕೋರ್ಟ್ 10 ವರ್ಷಗಳ ಜೈಲು ಶಿಕ್ಷೆ ಜತೆಗೆ 14 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಪ್ರಕರಣದ ಮತ್ತೊಬ್ಬ ಅಪರಾಧಿ ಗುತ್ತಿಗೆದಾರ ಬರ್ಕತ್ ಅಲಿಗೆ 7 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ಈ ಪ್ರಕರಣವು ಉತ್ತರಪ್ರದೇಶದ ರಾಯ್ ಬರೇಲಿ ಜಿಲ್ಲೆಯ ಡುಂಗರ್‌ಪುರ ಪ್ರದೇಶದಲ್ಲಿ 2016ರ ಆಸ್ತಿ ವಿವಾದವನ್ನು ಒಳಗೊಂಡಿದೆ. 2019ರಲ್ಲಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಡುಂಗರ್‌ಪುರ ಕಾಲೋನಿ ತೆರವಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಗುತ್ತಿಗೆದಾರರಾದ ಬರ್ಕತ್ ಅಲಿ ಮತ್ತು ಅಜಂ ಖಾನ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಅವರ ವಿರುದ್ಧ ಒಟ್ಟು 12 ಪ್ರಕರಣಗಳು ದಾಖಲಾಗಿದ್ದು, ಸೆಕ್ಷನ್ 392, 504, 506, 452, 120ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ಮಣ್ಣಿನ ಮಡಕೆ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಉಪಯೋಗ..? ನೀವು ಈ ಅಭ್ಯಾಸ ರೂಢಿಸಿಕೊಳ್ಳಿ..
ಈ ಪ್ರಕರಣದಲ್ಲಿ ಅಬ್ರಾರ್ ಎಂಬ ವ್ಯಕ್ತಿ 2019 ಡಿಸೆಂಬರ್ 6ರಂದು ಗಂಜ್ ಪೊಲೀಸ್ ಠಾಣೆಯಲ್ಲಿ ಎಸ್‌ಪಿ ನಾಯಕ ಅಜಂ ಖಾನ್ ಮತ್ತು ನಿವೃತ್ತ ಸಿಒ ಅಲೆ ಹಸನ್ ಖಾನ್, ಗುತ್ತಿಗೆದಾರ ಬರ್ಕತ್ ಅಲಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಮೂವರು ನನ್ನನ್ನು ಥಳಿಸಿ, ಮನೆ ಧ್ವಂಸ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಮಾರ್ಚ್‌ನಲ್ಲಿ ರಾಂಪುರ ಎಂಪಿ/ಎಂಎಲ್‌ಎ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಅಜಂ ಖಾನ್ ಹೊರತುಪಡಿಸಿ, ಆಲೆ ಹಸನ್, ಅಜರ್ ಅಹ್ಮದ್ ಖಾನ್ ಮತ್ತು ಬರ್ಕತ್ ಅಲಿ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಾಲ್ವರು ಅಪರಾಧಿಗಳು ಐದು ವರ್ಷಗಳ ಸೆರೆವಾಸವನ್ನು ಪಡೆದರು. ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗಿದೆ, ಇದರಲ್ಲಿ ಸೆಕ್ಷನ್ 427, 504, 506, 447, ಮತ್ತು 120B ಸೇರಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
