ಹೈದರಾಬಾದ್​:ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ಕುರಿತು ಜಸ್ಟೀಸ್​ ಹೇಮಾ ಸಮಿತಿಯ ವರದಿ ಸಿನಿ ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿರುವುದು ತಿಳಿದ ಸಂಗತಿಯೇ. ವರದಿಗೆ ದೇಶಾದ್ಯಂತ ನಟ, ನಟಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಇದೀಗ ಟಾಲಿವುಡ್​ ನಟಿ ಸಮಂತಾ ಅದೇ ರೀತಿಯ ವರದಿಯನ್ನು ಪ್ರಕಟಿಸಬೇಕು ಎಂದು ತೆಲಂಗಾಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:‘ಆಕೆ ಮಕ್ಕಳಿಲ್ಲದವಳು.. ನಮ್ಮ ನೋವು ಹೇಗೆ ಅರ್ಥವಾಗುತ್ತೆ?’: ಎಫ್​ಐಆರ್​ ಹೇಳಿಕೆಗೆ ಮಮತಾ ವಿರುದ್ಧ ಟ್ರೈನಿ ವೈದ್ಯೆ ತಾಯಿ ಆಕ್ರೋಶ
ಕೇರಳದಲ್ಲಿ ಜಸ್ಟೀಸ್​ ಹೇಮಾ ವರದಿ ಬಹಿರಂಗಗೊಂಡ ಬಳಿಕ 9ಮಂದಿ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ವಿಶೇಷ ತನಿಖಾ ತಂಡ ರಚಿಸಲಾಗಿದೆ. ಕೇರಳದ ವುಮೆನ್ ಇನ್ ಸಿನಿಮಾ ಕಲೆಕ್ಟಿವ್(ಡಬ್ಲ್ಯುಸಿಸಿ)ಯಿಂದ ಪ್ರೇರಿತರಾಗಿ 2019ರಲ್ಲಿ ಸ್ಥಾಪಿತವಾಗಿರುವ ದ ಟಾಲಿವುಡ್​ನಲ್ಲಿ ವಾಯ್ಸ್ ಆಫ್ ವುಮೆನ್(ತೆಲುಗು ಫಿಲ್ಮ್​ ಇಂಡಸ್ಟ್ರಿ) ಮೂಲಕ ಇದೇ ರೀತಿಯ ವರದಿ ಪ್ರಕಟಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾವು, ತೆಲುಗು ಚಿತ್ರರಂಗದ ಮಹಿಳೆಯರು, ಹೇಮಾ ಸಮಿತಿಯ ವರದಿಯನ್ನು ಸ್ವಾಗತಿಸುತ್ತೇವೆ ಮತ್ತು ಕೇರಳದ ಡಬ್ಲ್ಯುಸಿಸಿಯ ನಿರಂತರ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಮಹಿಳೆಯರ ಶೋಷಣೆ ತಡೆಯುವ ನಿಟ್ಟಿನಲ್ಲಿ ಇದು ಈ ಕ್ಷಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಮಂತಾ ತಮ್ಮ ಇನ್​ಸ್ಟಾಗ್ರಾಮ್​ ನಲ್ಲಿ ಬರೆದಿದ್ದಾರೆ.
ತೆಲುಗಿ ಫಿಲ್ಮ್​ ಇಂಡಸ್ಟ್ರಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ಕೆಲಸದ ವಾತಾವರಣವನ್ನು ಕಲ್ಪಿಸಲು ಸರ್ಕಾರ ಮತ್ತು ಉದ್ಯಮ ನೀತಿಗಳನ್ನು ರೂಪಿಸಲು ಸಹಾಯ ಮಾಡುವ ಲೈಂಗಿಕ ಕಿರುಕುಳದ ಕುರಿತು ಸಲ್ಲಿಸಿದ ಉಪ ಸಮಿತಿಯ ವರದಿಯನ್ನು ಪ್ರಕಟಿಸಲು ನಾವು ತೆಲಂಗಾಣ ಸರ್ಕಾರವನ್ನು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಮಲಯಾಳಂ ಚಲನಚಿತ್ರೋದ್ಯಮದಿಂದ ಇತ್ತೀಚೆಗೆ ಅನಾವರಣಗೊಂಡ ಹೇಮಾ ಸಮಿತಿಯ ವರದಿಯು ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಪ್ರೇರೇಪಿಸಿತು. ಸದ್ಯಕ್ಕೆ, ನಟ-ರಾಜಕಾರಣಿ ಮುಖೇಶ್ ಮಾಧವನ್, ಸಿದ್ದಿಕ್, ಜಯಸೂರ್ಯ, ಎಡವೇಲ ಬಾಬು, ಮಣಿಯನ್ಪಿಳ್ಳ ರಾಜು, ನಿರ್ದೇಶಕರಾದ ರಂಜಿತ್ ಮತ್ತು ವಿಕೆ ಪ್ರಕಾಶ್ ಮತ್ತು ನಿರ್ಮಾಣ ಕಾರ್ಯನಿರ್ವಾಹಕರಾದ ವಿಚು ಮತ್ತು ನೋಬಲ್ ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4 ಪದಕ..ಮನೀಶ್ ನರ್ವಾಲ್​ಗೆ ಬೆಳ್ಳಿ- ಪ್ರೀತಿ ಪಾಲ್​ಗೆ ಕಂಚು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fourteen =
Remember me
