ಹೈದರಾಬಾದ್​​:ಸದ್ಯ ಬಾಲಿಯಲ್ಲಿರುವ ನಟಿ ಸಮಂತಾ ಅಲ್ಲಿನ ಪ್ರಕೃತಿಯನ್ನು ಆನಂದಿಸುತ್ತಿದ್ದಾರೆ. ಈ ವೇಳೆ ಕೋತಿಯೊಂದು ಸಮಂತಾ ಜತೆ ಸೆಲ್ಫಿ ತೆಗೆದುಕೊಂಡಿದೆ. ಈ ಫೋಟೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಆ ಫೋಟೋ ನೋಡಿದ್ದೀರಾ?..
ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಸಮಂತಾ ಒಂದು ವರ್ಷ ಸಿನಿಮಾಗಳಿಂದ ವಿರಾಮ ಪಡೆದಿದ್ದಾರೆ. ಮಯೋಸೈಟಿಸ್ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುತ್ತಾರೆ ಎಂಬ ಸುದ್ದಿ ಇತ್ತು. ಆದರೆ ಕಳೆದ ಕೆಲವು ದಿನಗಳಿಂದ ಸಮಂತಾ ಅವರ ಪೋಸ್ಟ್‌ಗಳನ್ನು ನೋಡಿದರೆ, ಅವರು ದೈಹಿಕವಾಗಿ ಅಲ್ಲ ಮಾನಸಿಕವಾಗಿ ಚೇತರಿಸಿಕೊಳ್ಳಲು ವಿರಾಮ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ:ಮಳೆಗಾಲದಲ್ಲಿ ಆರೋಗ್ಯ ರಕ್ಷಣೆ  ಹೇಗೆ ಎನ್ನುವ ಚಿಂತೆ ಇದ್ಯಾ? ಇಂತಿವೆ ಕೆಲವು ಸಲಹೆ, ಮುನ್ನೆಚ್ಚರಿಕೆಗಳು…
ಇತ್ತೀಚೆಗಷ್ಟೇ ಕೊಯಮತ್ತೂರು ಇಶಾ ಫೌಂಡೇಶನ್‌ಗೆ ತೆರಳಿ ಧ್ಯಾನ ಮಾಡಿ ಶಾಂತಿಗಾಗಿ ಪ್ರಾರ್ಥಿಸಿದ ಸಮಂತಾ ಇದೀಗ, ಇಂಡೋನೇಷ್ಯಾದ ಬಾಲಿಯಲ್ಲಿ ಪ್ರಕೃತಿಯ ಸೌಂದರ್ಯ ಸವಿಯುತ್ತಿದ್ದಾರೆ. ದೇವಾಲಯಗಳು ಮತ್ತು ನೈಸರ್ಗಿಕ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಫೋಟೋ ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಶೇರ್ ಮಾಡಿರುವ ಎರಡು ಫೋಟೋಗಳು ನೆಟ್ಟಿಗರನ್ನು ಆಕರ್ಷಿಸುತ್ತಿವೆ.

ಇದನ್ನೂ ಓದಿ:ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಒಂದು ವರ್ಷ ಹೆರಿಗೆ ರಜೆ ಘೋಷಿಸಿದ ಸಿಕ್ಕಿಂ ಸರ್ಕಾರ
ಕೋತಿಯೊಂದು ಸಮಂತಾ ಪಕ್ಕದಲ್ಲಿ ಕುಳಿತು ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂದಿದೆ. ಮತ್ತೊಂದು ಚಿತ್ರದಲ್ಲಿ, ಸಮಂತಾ ಅವರ ಭುಜದ ಮೇಲೆ ಕೋತಿ ಕುಳಿತಿರುವುದು ಕಂಡುಬರುತ್ತದೆ. ಈ ಫೋಟೋಗಳು ಈಗ ವೈರಲ್ ಆಗುತ್ತಿವೆ. ಈ ಪಿಕ್ ನೋಡಿದ ನೆಟ್ಟಿಗರು ಪ್ರಾಣಿಗಳು ಕೂಡಾ ಸಮಂತಾ ಫ್ಯಾನ್ಸ್​​ ಇದ್ದಾರೆ. ಸಮಂತಾ ಫಾಲೋಯಿಂಗ್ ಮಾಮೂಲಿ ಅಲ್ಲ, ಮಂಗಗಳು ಸೆಲ್ಫಿ ತೆಗೆದುಕೊಳ್ಳುತ್ತಿವೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
A post shared by Samantha (@samantharuthprabhuoffl)
ಇದನ್ನೂ ಓದಿ:VIDEO | ಬಾಲ್ಯದಿಂದ ಕಷ್ಟ ಉಂಡ ಮಗನನ್ನು ಪತ್ರಕರ್ತನಾಗಿ ಟಿವಿಯಲ್ಲಿ ಕಂಡ ತಾಯಿ ಕಣ್ಣಲ್ಲಿ ಜಿನುಗಿತು ಆನಂದಭಾಷ್ಪ!
ಸಮಂತಾ ಬಾಲಿಯಲ್ಲಿ ನ್ಯಾಚುರಲ್ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತಿದ್ದಾರಂತೆ. ಬೆಳಗಿನ ವ್ಯಾಯಾಮ, ಯೋಗ, ಆರು ನಿಮಿಷಗಳ ಕಾಲ 4 ಡಿಗ್ರಿ ತಣ್ಣೀರಿನಲ್ಲಿ ಉಳಿಯುವುದು, ಪ್ರಕೃತಿಯಲ್ಲಿ ಸಮಯ ಕಳೆಯುವುದು… ಸಮಂತಾ ನೈಸರ್ಗಿಕ ಚಿಕಿತ್ಸೆಯನ್ನು ಪ್ರಯತ್ನಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ನೊಂದಣಿ ಮಾಡುವುದಾಗಿ ನಂಬಿಸಿ ಚಿನ್ನಾಭರಣ ಕದ್ದು ಖದೀಮ ಎಸ್ಕೇಪ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eighteen =
Remember me
