ಹೈದರಾಬಾದ್​:ಸಮಂತಾ ಭಾನುವಾರ(ಏ.28) ತನ್ನ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು, ಈ ಸಂದರ್ಭದಲ್ಲಿ ತನ್ನ ಅಭಿಮಾನಿಗಳಿಗೆ ವಿಶೇಷ ಮತ್ತು ಅಚ್ಚರಿ ಎನಿಸುವ ಉಡುಗೊರೆ ನೀಡಿದ್ದಾರೆ. ಸಮಂತಾ ತನ್ನ ನಿರ್ಮಾಣ ಸಂಸ್ಥೆ ತ್ರಲಾಲಾ ಮೂವಿಂಗ್ ಪಿಕ್ಚರ್ಸ್‌ನಿಂದ ಮೊದಲ ಚಲನಚಿತ್ರವನ್ನು ಘೋಷಿಸಿ ಎಲ್ಲರ ಕಣ್ಣು ಹುಬ್ಬೇರುವಂತೆ ಮಾಡಿದ್ದಾರೆ.
ಇದನ್ನೂ ಓದಿ:‘ಸರ್ಕಾರವು ವೈಯಕ್ತಿಕ ಹಿತಾಸಕ್ತಿ ಕಾಪಾಡಬಹುದೇ?’ ಸಂದೇಶಖಾಲಿ ಕುರಿತು ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
ಪ್ರಕಟಣೆಯ ಜೊತೆಗೆ ಸಮಂತಾ ತನ್ನ ಮುಂಬರುವ ಚಿತ್ರದ ಪೋಸ್ಟರ್ ಮತ್ತು ಮೋಷನ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಬಂಗಾರಂ ಎಂಬ ಶೀರ್ಷಿಕೆ ಚಿತ್ರಕ್ಕಿದ್ದು, ಕುತೂಹಲ ಕೆರಳಿಸಿದೆ.
ಆದರೂ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಅದೇನೇ ಇದ್ದರೂ, ಈ ಘೋಷಣೆಯೊಂದಿಗೆ ಸಮಂತಾ ನಟನೆಯಿಂದ ಏಳು ತಿಂಗಳ ವಿರಾಮವನ್ನು ಮುರಿದಿದ್ದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.
‘ಬಂಗಾರಮ್’ ಚಿತ್ರದ ಫಸ್ಟ್ ಲುಕ್‌ನಲ್ಲಿ ಸಮಂತಾ ತನ್ನ ತೀಕ್ಷ್ಣ ನೋಟದಿಂದ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದೆ. ‘ಚಿನ್ನವಾಗಲು ಎಲ್ಲವೂ ಹೊಳೆಯಬೇಕಿಲ್ಲ, ಬಂಗಾರಂ ಶೀಘ್ರದಲ್ಲೇ ಆರಂಭವಾಗಲಿದೆ’ ಎಂಬ ಶೀರ್ಷಿಕೆಯು ಯೋಜನೆಯ ಸುತ್ತಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
‘ಬಂಗಾರಮ್’ ಹೊರತಾಗಿ, ರಾಜ್ ಮತ್ತು ಡಿಕೆ ನಿರ್ದೇಶನದ ‘ಸಿಟಾಡೆಲ್: ಹನಿ ಬನ್ನಿ ‘ ಬಿಡುಗಡೆಗೆ ಸಮಂತಾ ಸಜ್ಜಾಗುತ್ತಿದ್ದಾರೆ. ಅವರ ಜೊತೆಯಲ್ಲಿ ವರುಣ್ ಧವನ್ ಇದ್ದಾರೆ.
ಮಹದೇವ್ ಬೆಟ್ಟಿಂಗ್ ಆ್ಯಪ್ ವಿವಾದ: ಪೊಲೀಸರಿಂದ ತಪ್ಪಿಸಿಕೊಳ್ಳಲು ಸಾಹಿಲ್ ಖಾನ್ 1800 ಕಿಮೀ ಪ್ರಯಾಣಿಸಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + eleven =
Remember me
